Advertisement

ಕರಾವಳಿಗೆ 7 ಸಾವಿರ ಡೋಸ್‌ ಲಸಿಕೆ

01:11 AM May 05, 2021 | Team Udayavani |

ಮಂಗಳೂರು: ದ.ಕ. ಜಿಲ್ಲೆಗೆ ಮಂಗಳವಾರ ಬೆಂಗಳೂರಿನಿಂದ 7 ಸಾವಿರ ಡೋಸ್‌ ಕೊವಿಶೀಲ್ಡ್‌ ಲಸಿಕೆ ಬಂದಿದ್ದು, ಬುಧವಾರದಿಂದ ಜಿಲ್ಲೆಯ ತಾಲೂಕು, ಜಿಲ್ಲಾ ಆಸ್ಪತ್ರೆಯ ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರ ಮಟ್ಟದಲ್ಲೂ ಲಸಿಕೆ ನೀಡಲಾಗುತ್ತದೆ.

Advertisement

ಎರಡನೇ ಡೋಸ್‌ ಪಡೆಯು ವವರಿಗೆ ಮಾತ್ರ ಅವಕಾಶ. ಎರಡು ದಿನಗಳಲ್ಲಿ ಕೊವ್ಯಾಕ್ಸಿನ್‌ ಕೂಡ ಜಿಲ್ಲೆಗೆ ಬರಲಿದೆ. ಆದ್ದರಿಂದ ಕೊವ್ಯಾಕ್ಸಿನ್‌ ಲಸಿಕೆ 2ನೇ ಡೋಸ್‌ ಪಡೆಯುವವರು ಗಾಬರಿಪಡಬೇಕಿಲ್ಲ. ಮೊದಲ ಡೋಸ್‌ ಪಡೆದು 10ರಿಂದ 12 ವಾರ ಗಳಾ ದರೂ ಯಾವುದೇ ರೀತಿಯ ಆತಂಕ ಪಡಬೇಕಾಗಿಲ್ಲ. ಲಸಿಕೆ ಬಂದ ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

2ನೇ ಡೋಸ್‌ನವರಿಗೆ ಆದ್ಯತೆಯಲ್ಲಿ ಲಸಿಕೆ :

ಉಡುಪಿ: ಕೊವಿಶೀಲ್ಡ್‌ ಲಸಿಕೆಯ ದಾಸ್ತಾನು ಸಾಕಷ್ಟು ಇಲ್ಲದಿರುವುದರಿಂದ ಪ್ರಥಮ ಡೋಸ್‌ ಪಡೆದು 8 ವಾರ ಮೀರಿದ 947 ಅರ್ಹ ಫ‌ಲಾನುಭವಿಗಗಳು ಜಿಲ್ಲೆಯಲ್ಲಿದ್ದಾರೆ. ಅವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬಂದಿ ಅಂಥವರಿಗೆ ಕರೆ ಮಾಡಿ ಲಸಿಕೆ ಪಡೆಯಲು ಕ್ರಮ ಕೈಗೊಳ್ಳುತ್ತಾರೆ. ಪ್ರಥಮ ಡೋಸ್‌ ಕೊವಿಶೀಲ್ಡ್‌ ಪಡೆದು 8 ವಾರ ಮೀರಿ ದವರು ಆಶಾ ಕಾರ್ಯಕರ್ತೆಯರಿಗೆ ಕರೆ ಮಾಡಿ 2ನೇ ಡೋಸ್‌ ಲಸಿಕೆ ಪಡೆಯಬಹುದಾಗಿದೆ.

Advertisement

ಸದ್ಯ ಪ್ರಥಮ ಡೋಸ್‌ ಇಲ್ಲ :

ಲಸಿಕೆ ಸರಬರಾಜಾದ ತತ್‌ಕ್ಷಣ 2ನೇ ಡೋಸ್‌ಗಾಗಿ ಕಾಯುತ್ತಿರುವವರಿಗೆ ಆದ್ಯತೆ ಮೇರೆಗೆ ನೀಡಲಾಗುವುದು.  ಆಶಾ ಕಾರ್ಯಕರ್ತೆಯರು ಜನರಿಗೆ ಮಾಹಿತಿ ನೀಡುವ ಮೂಲಕ ಪ್ರಥಮ ಡೋಸ್‌ ಪಡೆಯಲು ವ್ಯವಸ್ಥೆ ಮಾಡು ವರು ಎಂದು ಜಗದೀಶ್‌ ತಿಳಿಸಿದ್ದಾರೆ.

ಕೊವ್ಯಾಕ್ಸಿನ್‌ ಪೂರೈಕೆ ಬಳಿಕ ಜಿಲ್ಲೆಯಲ್ಲಿ ಕೊವ್ಯಾಕ್ಸಿನ್‌ ಅಲಭ್ಯ ವಾಗಿದ್ದು ರಾಜ್ಯದಿಂದ ಸರಬರಾಜಾದ ತತ್‌ಕ್ಷಣ ಪ್ರಥಮ ಡೋಸ್‌ ಪಡೆದುಅವಧಿ ಪೂರೈಸಿದವರಿಗೆ ಆದ್ಯತೆ ಮೇರೆಗೆಲಸಿಕೆ ನೀಡುವ ಬಗ್ಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬಂದಿ ಕರೆ ಮಾಡಿ ಕ್ರಮ ಕೈಗೊಳ್ಳುವರು.

Advertisement

Udayavani is now on Telegram. Click here to join our channel and stay updated with the latest news.

Next