Advertisement
ನೂತನ ಸಂಪುಟದಲ್ಲಿ 29 ಸಚಿವರನ್ನು ಸೇರಿಸಲಾಗಿದ್ದು, ಈ ಪೈಕಿ ಶೇ.28ರಷ್ಟು ಅಂದರೆ ಪಕ್ಕದ ಹೊಸಕೋಟೆಯೂ ಸೇರಿದಂತೆ ಎಂಟು ಸಚಿವ ಸ್ಥಾನಗಳನ್ನು ಬೆಂಗಳೂರು ಬಾಚಿ ಕೊಂಡಿದೆ. ಇದಕ್ಕೆ ಸಕಾರಣವೂ ಇದೆ. ರಾಜ್ಯದ ಅತಿಹೆಚ್ಚು 28 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. “ನಗರ ಕೇಂದ್ರಿತ’ ಹಣೆಪಟ್ಟಿ ಅಂಟಿಸಿಕೊಂಡಿರುವ ಬಿಜೆಪಿಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಹಲವಾರು ಆರೋಪಗಳ ನಡುವೆಯೂ ಮತ್ತೆ ಬಿಬಿಎಂಪಿ ಚುನಾವಣೆಯಲ್ಲಿ ಹಿಡಿತ ಸಾಧಿಸಲು ಇದು ಅಗತ್ಯ ಮತ್ತು ಅನಿವಾರ್ಯವೂ ಆಗಿದೆ.
Related Articles
Advertisement
ಆಗ ಎಂಟು ಸಚಿವರು; ಈಗ ಏಳು: ಈಗಲೂ ಏಳು ಸಚಿವರನ್ನು ನೀಡಿದ್ದು, ಶಕ್ತಿ ಕೇಂದ್ರ ಹಲವು ಇವೆ. ಹಾಗಾಗಿ, ಇತಿಹಾಸ ಪುನರಾವರ್ತನೆ ಆಗದಂತೆ ಎಚ್ಚರ ವಹಿಸುವ ಅವಶ್ಯಕತೆಯೂ ಇದೆ ಎಂದು ಅವರು ಹೇಳುತ್ತಾರೆ. ಹಾಗೆ ನೋಡಿದರೆ, ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಬೆಂಗಳೂರಿಗೆ ಎಂಟು ಸಚಿವ ಸ್ಥಾನಗಳನ್ನು ನೀಡಲಾಗಿತ್ತು. ಜತೆಗೆ ಬೆಂಗಳೂರು ಅಭಿವೃದ್ಧಿ ಖಾತೆ ಸ್ವತಃ ಅಂದಿನ ಮುಖ್ಯಮಂತ್ರಿ ಬಳಿ ಇತ್ತು. ಖುದ್ದು ಪ್ರಗತಿ ಪರಿಶೀಲನೆ ಮಾಡುತ್ತಿದ್ದರು. ಆದರೆ, ಬೆರಳೆಣಿಕೆಯಷ್ಟು ಬಾರಿ ಮಾತ್ರ ಆ ಪರಿಶೀಲನಾ ಸಭೆಗಳು ನಡೆದಿವೆ ಎಂಬ ಆರೋಪವೂ ಇದೆ. ಇನ್ನು ಕಳೆದೆರಡು ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಪ್ರಗತಿ ಕೂಡ ಸಾಧಿಸಿಲ್ಲ. ಇದಕ್ಕೆ ಕೋವಿಡ್-19 ಹಾವಳಿ ಪ್ರಮುಖ ಕಾರಣ.
ಬೆಂಗಳೂರು ಸಚಿವರುಆರ್.ಅಶೋಕ್, ವಿ. ಸೋಮಣ್ಣ, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಗೋಪಾಲಯ್ಯ,ಬಿ.ಬಸವರಾಜು(ಬೈರತಿ ಬಸವರಾಜು), ಎಸ್.ಟಿ. ಸೋಮಶೇಖರ್, ಮುನಿರತ್ನ. ಇಂದು ಖಾತೆ ಹಂಚಿಕೆ
ಬೆಂಗಳೂರು: ನೂತನ ಸಚಿವರಿಗೆ ಗುರುವಾರ (ಇಂದು) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾತೆ ಹಂಚಿಕೆ ಮಾಡಲಿದ್ದಾರೆ. ಬಹುತೇಕ ಸಚಿವರು ಹಳಬರೇ ಇರುವುದರಿಂದ ತಾವು ಈ ಹಿಂದೆ ನಿರ್ವಹಿಸಿದ ಖಾತೆಯನ್ನೇ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದಿನ ಸಿಎಂ ಬಳಿ ಇದ್ದ ಇಂಧನ, ಜಲ ಸಂಪನ್ಮೂಲ, ಹಣಕಾಸು, ಬೆಂಗಳೂರು ನಗರಾಭಿವೃದ್ಧಿ ಖಾತೆಗಳ ಮೇಲೆ ಕೆಲವು ಹಿರಿಯ ಸಚಿವರು ಕಣ್ಣಿಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಯಡಿಯೂರಪ್ಪ ಸಂಪುಟದಲ್ಲಿ ಗೃಹ,ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹೊಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈಗ ತಮ್ಮ ಬಳಿ ಹಣಕಾಸು ಹಾಗೂ ಜಲ ಸಂಪನ್ಮೂಲ, ಡಿಪಿಎಆರ್ ಗುಪ್ತಚರ ಖಾತೆಗಳನ್ನು ಉಳಿಸಿಕೊಂಡು ಹಿರಿಯ ಸಚಿವರಿಗೆ ಪ್ರಮುಖ ಖಾತೆಗಳನ್ನು ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಇಮೇಜ್ ಬರುವಂತೆ ಕೆಲಸ ಮಾಡುವೆ
ಬೆಂಗಳೂರು: “ಸರ್ಕಾರಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆಕ್ಲೀನ್ ಇಮೇಜ್ ಬರುವಂತೆ ಶಕ್ತಿ ಮೀರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಇದುನೂತನ ಸಚಿವ ಎಸ್.ಟಿ. ಸೋಮಶೇಖರ್ ಅವರ ಮಾತುಗಳು. ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ “ಉದಯ ವಾಣಿ’ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ 16 ತಿಂಗಳಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಇದೀಗ ಬಸವರಾಜ ಬೊಮ್ಮಾಯಿ ಆವರ ನಾಯಕತ್ವದಲ್ಲಿ ಕೆಲಸ ಮಾಡಲು ಮತ್ತೂಮ್ಮೆ ಅವಕಾಶ ಸಿಕ್ಕಿದ್ದು ಜನ ಮೆಚ್ಚುವಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು. ಸಚಿವ ಸ್ಥಾನದ ನಿರೀಕ್ಷೆ ಇತ್ತೇ?
ಖಂಡಿತವಾಗಿಯೂ ಇತ್ತು. ಪಕ್ಷದ ವರಿಷ್ಠರುಹಾಗೂ ಸಿಎಂ ವಿಶ್ವಾಸ ಇಟ್ಟು ಹೊಣೆಗಾರಿಕೆ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿಬಾರದಂತೆ ಕೆಲಸ ಮಾಡುತ್ತೇನೆ. ನಿಮ್ಮಿಂದ ಯಾವ ರೀತಿಯ ಕೆಲಸ ನಿರೀಕ್ಷಿಸಬಹುದು?
ಸರ್ಕಾರ ಹಾಗೂ ಬಿಜೆಪಿ ಪಕ್ಷಕ್ಕೆ ಕ್ಲೀನ್ ಇಮೇಜ್ ಬರುವಂತೆ,ಮುಂದಿನವಿಧಾನಸಭೆಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವಂತೆ ನನ್ನ ಶಕ್ತಿ ಮೀರಿ ಶ್ರಮಿಸುತ್ತೇನೆ. ಇದು ಅವಕಾಶ ಎನ್ನುವುದಕ್ಕಿಂತ ಜವಾಬ್ದಾರಿ ಎಂಬಂತೆ ನಿರ್ವಹಿಸುತ್ತೇನೆ. ಸಹಕಾರ ಸಚಿವನಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿದ್ದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ 150 ಕ್ಕೂ ಹೆಚ್ಚು ಬಾರಿ ಭೇಟಿ ಕೊಟ್ಟಿದ್ದೆ. ಇಂತದ್ದೇ ಖಾತೆ ಬೇಕು ಎಂಬ ಬೇಡಿಕೆ ಇಟ್ಟಿದ್ದೀರಾ?
ಇಲ್ಲ. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಹ ಕಾರ ಖಾತೆ ನೀಡಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಮೆಚ್ಚುವಂತೆ ಕೆಲಸ ಮಾಡಿದ್ದೆ. ಸಹಕಾರಿಗಳ ಜತೆಗೂಡಿ ಕಾರ್ಯನಿರ್ವಹಿಸುವ ಅವ ಕಾಶ ನನಗೆಕೊಡಲಾಗಿತ್ತು. ನ್ಯಾಯ ಒದಗಿಸಿದ್ದೇನೆ. ಈಗಲೂ ಸಹಕಾರ ಖಾತೆಯೇ ಬೇಕಾ?
ಅದು ಮುಖ್ಯಮಂತ್ರಿಯವರ ವಿವೇಚನೆ ಬಿಟ್ಟದ್ದು. ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸು ತ್ತೇನೆ. ಖಾತೆಗಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಇಡುವುದೂ ಇಲ್ಲ. ಕೆಲಸ ಮಾಡುವುದು ಮುಖ್ಯ , ಖಾತೆಯಲ್ಲ ಕ್ಷೇತ್ರದ ಅಭಿವೃದ್ದಿಬಗ್ಗೆ ಹೊಸ ಯೋಜನೆ ಇದೆಯಾ?
ನಾನು ಸಚಿವನಾಗಲು ಯಶವಂತಪುರ ಕ್ಷೇತ್ರದ ಜನತೆಯ ಆಶೀರ್ವಾದ ಮುಖ್ಯ. ಅವರಿಂದಾಗಿ ನಾನು ಈ ಸ್ಥಾನದಲ್ಲಿದ್ದೇನೆ. ಅವರ ಋಣ ತೀರಿಸಲು ಏನು ಮಾಡಿದರೂ ಸಾಲದು. ತಾಯಿ ಚಾಮುಂಡೇಶ್ವರಿ ಕೃಪೆಯಿಂದ ರಾಜ್ಯದ ಅಭಿವೃದ್ಧಿ ಹಾಗೂ ನನ್ನ ಕ್ಷೇತ್ರದ ಅಭಿವೃದ್ಧಿ ನನ್ನ ಆದ್ಯತೆ. ಆ ವಿಚಾರದಲ್ಲಿ ನನ್ನದೇ ಆದ ಕನಸುಗಳಿವೆ. ಹೊಸ ಸರ್ಕಾರದಲ್ಲಿ ಇರಲಿದೆ ಹೊಸತನ
ಬೆಂಗಳೂರು: “ಹೊಸ ಸರ್ಕಾರದಲ್ಲಿ ಹೊಸತನ ಇರಲಿದ್ದು ಜನಪರ ನಿರ್ಧಾರಗಳು ಹಾಗೂ ಜನಮೆಚ್ಚುವ ಕೆಲಸ ಆಗಲಿವೆ’ ನೂತನ ಸಚಿವ ಆರ್. ಅಶೋಕ್ ಅವರ ಮಾತುಗಳಿವು. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ನಂತರ “ಉದಯವಾಣಿ’ ಜತೆ ಮಾತನಾಡಿದ ಅವರು, ನಮ್ಮ ಮುಂದೆ ಸವಾಲುಗಳಿವೆ ಇದ್ದು ಎಲ್ಲವನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದು ಹೇಳಿದರು. ಸಚಿವರಾಗಿರುವುದು ಸಂತೋಷ ತಂದಿದೆಯಾ?
ಖಂಡಿತವಾಗಿಯೂ. ನನ್ನ ಆತ್ಮೀಯ ಮಿತ್ರರಾದ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವನಾಗಿರುವುದು ಅತೀವ ಸಂತೋಷ ತಂದಿದೆ. ನೀವು ಉಪಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದೀರಲ್ಲವೇ?
ನಾನು ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದವನು. ಈಗ ನನಗೆ ಉಪ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ವ್ಯಾಮೋಹ,ಪ್ರೀತಿ ಇಲ್ಲ.ಅವಕಾಶ ಸಿಕ್ಕಾಗ ಕೆಲಸ ಮಾಡಿದ್ದೇನೆ. ಯಾವ ಖಾತೆಯ ನಿರೀಕ್ಷೆಯಲ್ಲಿದ್ದೀರಿ?
ಬೆಂಗಳೂರು ಅಭಿವೃದ್ಧಿ ಹಾಗೂ ಗೃಹ ಬಿಟ್ಟು ಬೇರೆ ಯಾವುದೇ ಖಾತೆ ಕೊಟ್ಟರೂ ಸರಿಯೇ ಎಂದು ಮುಖ್ಯಮಂತ್ರಿಯವರಿಗೆ ಹೇಳಿದ್ದೇನೆ. ಈ ಎರಡು ಖಾತೆಯಾಕೆ ಬೇಡ?
ನಾನು ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿಯುತ್ತೇನೆ ಎಂದು ಪ್ರತಿ ಬಾರಿಯೂ ವದಂತಿಗಳು ಹರಿದಾಡುತ್ತವೆ. ಹೀಗಾಗಿಯೇ ನನಗೆ ಆಖಾತೆ ಬೇಡ ಎಂದು ನಾನೇ ಹೇಳಿದ್ದೇನೆ. ಗೃಹ ಸಚಿವ ಸ್ಥಾನವನ್ನೂ ನಾನು ಹಿಂದೆ ನಿಭಾಯಿಸಿದ್ದೇನೆ. ಕಂದಾಯ, ಸಾರಿಗೆ, ಆರೋಗ್ಯ ಸೇರಿ ಹಲವು ಖಾತೆಗಳಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ, ಹೊಸ ಖಾತೆ ಕೊಟ್ಟರೆ ಕೆಲಸ ಮಾಡಿ ತೋರಿಸುವ ಆಸೆ. ನಿಮ್ಮಪ್ರಕಾರ ಸರ್ಕಾರಕ್ಕೆಇರುವ ಸವಾಲು ಏನು?
ಮೊದಲಿಗ ಕೊರೊನಾ ಮೂರನೇ ಅಲೆ ತಡೆಗಟ್ಟುವಿಕೆ, ಪ್ರವಾಹ ಸಂತ್ರಸ್ತರಿಗೆ ಪರಿಹಾರ. ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ವೇಗ ಕೊಡುವುದು. ನಂತರ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ, ಜಿಲ್ಲಾ ಹಾಗೂ ತಾಪಂ, ಬಿಬಿಎಂಪಿ ಚುನಾವಣೆಗಳು ನಮಗೆ ಸವಾಲು. ಇಡೀ ಸಂಪುಟ ತಂಡವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಈ ಸರ್ಕಾರದ ಆದ್ಯತೆಗಳೇನು?
ಹೊಸ ಸರ್ಕಾರದಲ್ಲಿ ಹೊಸತನ ಇರಲಿ, ಜನಪರ ನಿರ್ಧಾರಗಳು ಹಾಗೂ ಜನಮೆಚ್ಚುವ ಕೆಲಸ ಆಗಲಿವೆ. ನಾನು ಹಿಂದೆ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಹೀಗೆ ಎಲ್ಲರ ನಾಯಕತ್ವದಲ್ಲೂ ಸಚಿವನಾಗಿ ಕೆಲಸ ಮಾಡಿದ್ದೇನೆ. ಈಗ ವಿಶೇಷ ಎಂದರೆ ಆತ್ಮೀಯ ಮಿತ್ರನ ನೇತೃತ್ವದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಮ್ಮ ನಾಯಕರು ಅವಕಾಶ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ನಾನು ಪಕ್ಷ ಹಾಗೂ ನಾಯಕರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. -ವಿಜಯಕುಮಾರ್ ಚಂದರಗಿ