Advertisement
ಬನ್ನಿಗೋಳ ಗ್ರಾಮದ ಮುಖಂಡ ಮೈನಳ್ಳಿ ಕೊಟ್ರೇಶ್ ಮಾತನಾಡಿ, ಈ ಹಿಂದೆ ರೈತರ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ ನಿರಂತರ 7 ತಾಸು ವಿದ್ಯುತ್ ಮುಂದುವರಿಸಬೇಕು. ಈಗ ನೀಡುತ್ತಿರುವ ಬೆಳಿಗ್ಗೆ 3 ತಾಸು ರಾತ್ರಿ 4 ತಾಸು ನೀಡುವುದರಿಂದ ರೈತರು ಬೆಳೆಗಳಿಗೆ ಸಮರ್ಪಕವಾಗಿ ನೀರು ಹಾಯಿಸಲು ಆಗುವುದಿಲ್ಲ. ಈಗಾಗಲೇ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಅಳಿದುಳಿದ ಬೆಳೆಗಳನ್ನು ಪಂಪ್‌ಸೆಟ್ ನೀರಿನಿಂದ ರಕ್ಷಿಸಿಕೊಳ್ಳುವ ಅಗತ್ಯ ರೈತರಿಗಿದೆ. ಆದರೆ, ಪ್ರಸ್ತುತ ನೀಡಲಾಗುತ್ತಿರುವ ವಿದ್ಯುತ್ ಪ್ರಮಾಣದಿಂದ ಬೆಳೆಗಳಿಗೆ ನೀರು ಹರಿಸುವುದು ದುಸ್ಸಾಹಸವಾಗಿದೆ. ಕೂಡಲೇ ಸತತ 7 ತಾಸು ನಿರಂತರ ವಿದ್ಯುತ್ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕುರಿತಂತೆ ಜೆಸ್ಕಾಂ ನಿರ್ಲಕ್ಷ ವಹಿಸಿದರೆ ಮೂರು ಪಟ್ಟಣಗಳಿಗೆ ನೀರೊದಗಿಸುತ್ತಿರುವ ಜಾಕ್‌ವೆಲ್‌ನ ವಿದ್ಯುತ್ ಮಾರ್ಗ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಮೂಲಿಮನಿ ರವಿಪ್ರಸಾದ್, ಪರ್ವತಪ್ಪ, ಆನಂದರೆಡ್ಡಿ, ಖಾಜಾವಲಿ, ಬಸವರೆಡ್ಡಿ, ಮೋಹನ್‌ರೆಡ್ಡಿ, ಆನೇಕಲ್ ಶಾಂತಪ್ಪ, ಅಕ್ಕಿ ಸಣ್ಣಕೊಟ್ರಪ್ಪ, ಯಂಕಾರೆಡ್ಡಿ, ಎಚ್.ವೆಂಕಪ್ಪ, ನಾಗರೆಡ್ಡಿ, ಎನ್.ದೊಡ್ಡಬಸಪ್ಪ, ಬಿ.ಮಂಜುನಾಥ, ಎ.ಬಸವರಾಜ, ರುದ್ರಪ್ಪ, ಬಿ.ಶಂಕ್ರಪ್ಪ,
ಎಸ್.ಕರಿಯಪ್ಪ ಇತರರಿದ್ದರು.