Advertisement

ಬರಲಿದೆ ಸ್ವದೇಶಿ 6ಜಿ ತಂತ್ರಜ್ಞಾನ

12:52 AM Nov 25, 2021 | Team Udayavani |

ಹೊಸದಿಲ್ಲಿ: ಜಗತ್ತಿನ ದೂರಸಂಪರ್ಕ ಮಾರುಕಟ್ಟೆ­ಯಲ್ಲಿ ದೇಶದ ಗುರುತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ 6ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದೆ. ಅದನ್ನು 2023 ಅಥವಾ 2024ರ ಆರಂಭದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿ‌ನಿ ವೈಷ್ಣವ್‌ ಹೇಳಿದ್ದಾರೆ.

Advertisement

ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ವಿಜ್ಞಾನಿಗಳಿಗೆ ಮತ್ತು ಎಂಜಿನಿಯರ್‌ಗಳಿಗೆ ಅನುಮೋ­ದನೆ ನೀಡಲಾಗಿದೆ. ಇಂಡಿಯಾ ಟೆಲಿಕಾಂ ಸಾಫ್ಟ್ ವೇರ್‌ನಲ್ಲಿ ಅಭಿವೃದ್ಧಿಪಡಿಸಲಾಗು­ತ್ತಿರುವ ಈ ವ್ಯವಸ್ಥೆಯಲ್ಲಿ ದೇಶೀಯವಾಗಿಯೇ ಸಿದ್ಧಗೊಳಿಸಲಾಗಿರುವ ದೂರ ಸಂಪರ್ಕ ಉಪಕರಣ, ತಂತ್ರಜ್ಞಾನ ಅಭಿವೃದ್ಧಿ ಗೊಳಿಸಲಾ­ಗುತ್ತದೆ. ಜತೆಗೆ ಸ್ವದೇಶೀಯವಾಗಿ 5ಜಿ ಸ್ಪೆಕ್ಟ್ರಂ ಅಭಿವೃದ್ಧಿಪಡಿಸಲೂ ಪ್ರಯತ್ನ ನಡೆಸ ಲಾಗುತ್ತಿದೆ.

ಮುಂದಿನ ವರ್ಷದ 2ನೇ ತ್ತೈಮಾಸಿಕದಲ್ಲಿ 5 ಜಿ ಹರಾಜು ನಡೆಯಲಿದೆ ಎಂದೂ ತಿಳಿಸಿದ್ದಾರೆ. ದೂರಸಂಪರ್ಕ ಕ್ಷೇತ್ರದಲ್ಲಿ ಪ್ರತೀ ವರ್ಷವೂ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ನಡೆಸಿ, ದೂರಸಂಪರ್ಕ ಕಂಪೆನಿ ಗಳಿಗೆ ಸೂಕ್ತ ರೀತಿಯಲ್ಲಿ ಸ್ಪೆಕ್ಟ್ರಂ ಲಭ್ಯವಾಗುವಂತೆ ಮಾಡಲಾಗುವುದು.

ಇದನ್ನೂ ಓದಿ:ಕೋವಿಡ್ ಸೋಂಕು ಪರೀಕ್ಷೆ ಕಡಿಮೆಯಾಗಿದೆ; 13 ರಾಜ್ಯಗಳಿಗೆ ಕೇಂದ್ರದ ಮುನ್ನೆಚ್ಚರಿಕೆ

ವಿದ್ಯುತ್‌ ಮಾರಾಟವಾಗುವಂತೆ ಸ್ಪೆಕ್ಟ್ರಂ ಅನ್ನೂ ಕೂಡ ಅನುಕ್ಷಣದ ನೇರ ವಹಿವಾಟು (ರಿಯಲ್‌ ಟೈಮ್‌) ನಡೆಸಲೂ ಉದ್ದೇಶಿಸಲಾಗಿದೆ ಎಂದು ತಿಳಿಸಲಾಗಿದೆ.

Advertisement

5ಜಿ
-6ಗಿಗಾ ಹರ್ಟ್ಜ್ ಗಿಂತ ಕೆಳಗೆ, ಗರಿಷ್ಠ 24.25 ಗಿ.ಹರ್ಟ್‌ ಗಿಂತ ಮೇಲೆ ಕಾರ್ಯ
-ಒಂದು ಸೆಕೆಂಡಿಗೆ 1ರಿಂದ 10 ಗಿಗಾಬೈಟ್‌ ದತ್ತಾಂಶ ಸಾಗಾಣಿಕೆ ಸಾಮರ್ಥ್ಯ.
-ಮೊಬೈಲ್‌ಗ‌ಳಿಗೆ ಒಂದು ಸೆಕೆಂಡಿನಲ್ಲಿ 100 ಎಂಬಿಪಿಎಸ್‌ ದತ್ತಾಂಶ ರವಾನೆ
-ದತ್ತಾಂಶ ರವಾನೆ, ಸ್ವೀಕಾರ ನಡುವಿನ ಸಮಯ: 1ರಿಂದ 5 ಮಿಲಿ ಸೆಕೆಂಡ್‌

6ಜಿ
-95ಗಿ. ಹರ್ಟ್ಜ್ ನಿಂದ 3 ಟೆರಾ ಹರ್ಟ್ಜ್ ವರೆಗೆ ಕಾರ್ಯನಿರ್ವಹಿಸಬಲ್ಲುದು.
-1 ಸೆಕೆಂಡಿಗೆ 1,000 ಗಿಗಾಬೈಟ್‌ನಷ್ಟು ದತ್ತಾಂಶ ವರ್ಗಾಯಿಸುವ ಸಾಮರ್ಥ್ಯ.
-ವಾಯುಮಂಡಲ-ಬಾಹ್ಯಾಕಾಶ-ನೆಲ-ಸಮುದ್ರದಲ್ಲಿ ಸಂಚರಿಸಬಲ್ಲ ಶಕ್ತಿಶಾಲಿ ತರಂಗಗಳು
-ದತ್ತಾಂಶ ರವಾನೆ, ಸ್ವೀಕಾರ ನಡುವಿನ ಸಮಯ:0.1 ಮಿಲಿ ಸೆಕೆಂಡ್‌

Advertisement

Udayavani is now on Telegram. Click here to join our channel and stay updated with the latest news.

Next