Advertisement

67ನೇ ರಾಷ್ಟ್ರೀಯ ಸೀನಿಯರ್‌ ಬಾಲ್‌ ಬ್ಯಾಡ್ಮಿಂಟನ್‌: ಕರ್ನಾಟಕ ಮಹಿಳಾ ತಂಡ ಚಾಂಪಿಯನ್‌

10:48 PM Mar 07, 2022 | Team Udayavani |

ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಹಾಗೂ ಕರ್ನಾಟಕ ಬಾಲ್‌ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಸಹಯೋಗ ದಲ್ಲಿ ಮೂಡುಬಿದಿರೆಯಲ್ಲಿ ರವಿವಾರ ರಾತ್ರಿ ಕೊನೆಗೊಂಡ 67ನೇ ರಾಷ್ಟ್ರೀಯ ಸೀನಿಯರ್‌ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಮಹಿಳಾ ವಿಭಾಗದಲ್ಲಿ ಆತಿಥೇಯ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 35-22, 35-26 ಸೆಟ್‌ಗಳ ಜಯ ಸಾಧಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತು.

Advertisement

ಕರ್ನಾಟಕ ತಂಡದ ಪರ 7 ಕ್ರೀಡಾಪಟುಗಳು ಆಳ್ವಾಸ್‌ ಸಂಸ್ಥೆಯ ವಿದ್ಯಾರ್ಥಿಗಳು ಎನ್ನುವುದು ಉಲ್ಲೇಖನಿಯ.

ಪುರುಷರ ಡಬಲ್ಸ್‌ನಲ್ಲಿ ತಮಿಳುನಾಡು ತಂಡವು ಕರ್ನಾಟಕ ತಂಡದ ವಿರುದ್ಧ 35-27, 35-19 ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸಿತು. ಮಿಕ್ಸೆಡ್‌ ಡಬಲ್ಸ್‌ನಲ್ಲಿ ಆಂಧ್ರಪ್ರದೇಶ ತಂಡವು ಕರ್ನಾಟಕ ತಂಡವನ್ನು 35-31, 35-22 ಅಂತರದಿಂದ ಮಣಿಸಿತು.

Advertisement

Udayavani is now on Telegram. Click here to join our channel and stay updated with the latest news.

Next