Advertisement

ಒಡಿಶಾ ನೂತನ ವಿಧಾನಸಭೆಯ ಅರ್ಧಾಂಶ ಶಾಸಕರ ವಿರುದ್ಧ ಕ್ರಿಮಿನಲ್‌ ಕೇಸ್‌

09:55 AM May 29, 2019 | Team Udayavani |

ಭುವನೇಶ್ವರ : ಒಡಿಶಾ ವಿಧಾಸಭೆಗೆ ಆಯ್ಕೆಯಾಗಿರುವ ಅರ್ಧಾಂಶದಷ್ಟು ಶಾಸಕರ ವಿರುದ್ಧ ಕ್ರಿಮಿನಲ್‌ ಕೇಸುಗಳಿವೆ. 2014ಕ್ಕೆ ಹೋಲಿಸಿದರೆ ಕ್ರಿಮಿನಲ್‌ ಕೇಸು ಹೊಂದಿರುವ ಒಡಿಶಾ ಶಾಸಕರ ಸಂಖ್ಯೆಯಲ್ಲಿ ಶೇ.11ರಷ್ಟು ಹೆಚ್ಚಳವಾಗಿದೆ.

Advertisement

ಹಿಂದಿನ ಚುನಾವಣೆಯಲ್ಲಿ ಒಡಿಶಾ ವಿಧಾನಸಭೆಯ 52 ಶಾಸಕರು, ಎಂದರೆ ಸದನದ ಒಟ್ಟು ಬಲದ ಶೇ.35ರಷ್ಟು ಮಂದಿ, ತಮ್ಮ ವಿರುದ್ಧ ಕ್ರಿಮಿನಲ್‌ ಕೇಸುಗಳಿರುವುದನ್ನು ಘೋಷಿಸಿಕೊಂಡಿದ್ದರು ಎಂದು ಒಡಿಶಾ ಎಲೆಕ್ಷನ್‌ ವಾಚ್‌ (ಒಇಡಬ್ಲ್ಯು) ಮತ್ತು ಅಸೋಸಿಯೇಶನ್‌ ಫಾರ್‌ ಡೆಮೋಕ್ರಾಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಸಿದ್ಧಪಡಿಸಿರುವ ಜಂಟಿ ವರದಿ ತಿಳಿಸಿದೆ.

ಇದೀಗ ಹೊಸ ಸದನದಲ್ಲಿ 67 ಶಾಸಕರ ವಿರುದ್ಧ ಕ್ರಿಮಿನಲ್‌ ಕೇಸುಗಳಿವೆ; ಈ ಪೈಕಿ 49 ಮಂದಿ ವಿರುದ್ಧ ಅಪಹರಣವೂ ಸೇರಿದಂತೆ ಗಂಭೀರ ಕ್ರಿಮಿನಲ್‌ ಅಪರಾಧದ ಆರೋಪಗಳಿವೆ ಎಂದು ಒಡಿಶಾ ಎಲೆಕ್ಷನ್‌ ವಾಚ್‌ನ ರಾಜ್ಯ ಸಂಚಾಲಕ ರಂಜನ್‌ ಕುಮಾರ್‌ ಮೋಹಂತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next