Advertisement

ಬೀಡಿ ಕಟ್ಟಿ ಉಳಿಸಿದ 2 ಲಕ್ಷ ರೂಪಾಯಿಯನ್ನು ಕೋವಿಡ್ ನಿಧಿಗೆ ಕೊಟ್ಟ 63 ರ ವೃದ್ಧ.!

02:12 AM May 06, 2021 | ಸುಹಾನ್ ಶೇಕ್ |

ಕೋವಿಡ್ ಸೋಂಕು ಜಗತ್ತಿನೆಲ್ಲೆಡೆ ತನ್ನ ನೆಲೆಯನ್ನು ಬೇರೂರಿ ಮಾನವ ಜನಾಂಗದ ಬುಡವನ್ನೇ ಅಲುಗಾಡಿಸಿ, ಎಷ್ಟೋ ಮಂದಿಯ ಜೀವ ಬಲಿ ತೆಗೆದುಕೊಳ್ಳುತ್ತಿದೆ . ವರ್ಷ ಕಳೆದರೂ ಕೋವಿಡ್ ಸ್ವರೂಪ,ರೌದ್ರ ನರ್ತನ, ಮರಣ ಮೃದಂಗ ಮುಂದುವರೆಯುತ್ತಿದೆ ವಿನಃ ಕಡಿಮೆಗೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ.

Advertisement

ಕೋವಿಡ್ ಅಬ್ಬರಕ್ಕೆ ಕಡಿವಾಣ ಹಾಕಲು ಕೋವಿಡ್ ಲಸಿಕೆಗಳು ಸರ್ವ ಪ್ರಯತ್ನ ನಡೆಸುತ್ತಿವೆ. ಉಚಿತ ಲಸಿಕೆ ನೀಡಿ ಆ ಮೂಲಕ ಜನರಲ್ಲಿ ಲಸಿಕೆ ತೆಗೆದುಕೊಳ್ಳಲು ಇರುವ ಭೀತಿಯನ್ನು ಕಡಿಮೆ ಮಾಡಲು ದೇಶದ ವಿವಿಧ ರಾಜ್ಯಗಳು ಪ್ರಯತ್ನ ನಡೆಸಿವೆ. ಅದರಲ್ಲಿ ಕೇರಳ ರಾಜ್ಯ ಕೂಡ ಒಂದು.

ಕೇರಳ ರಾಜ್ಯ ವ್ಯಾಕ್ಸಿನ್ ಚಾಲೆಂಜ್ ಮೂಲಕ ಹಲವಾರು ಜನರಲ್ಲಿ ಕೋವಿಡ್ ಲಸಿಕೆಯ ಕುರಿತು ಜಾಗೃತಿ ಮೂಡಿಸಿದೆ. ಈ ಜಾಗೃತಿಗೆ ಸಾಮಾನ್ಯ ಜನರಿಂದಿಡಿದು ಸೆಲೆಬ್ರಿಟಿಯವರೆಗೆ ಎಲ್ಲರೂ ವ್ಯಾಕ್ಸಿನ್ ಚಾಲೆಂಜ್ ಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇಂಥ ಕೊಡುಗೆಗಳು ಈಗ ಗಮನ ಸೆಳೆಯುತ್ತಿವೆ.

63 ವರ್ಷದ ಜನಾರ್ಧನನ್. ಕೇರಳದ ಕಣ್ಣೂರಿನ ಒಬ್ಬ ಬೀಡಿ ಕಾರ್ಮಿಕ. ವಿಶೇಷ ಚೇತನರಾಗಿರುವ ಜನಾರ್ಧನನ್  ಆ ಸಂಬಂಧ ತಿಂಗಳಿಗೆ ಬರುವ ಪೆನ್ಷನ್ ಹಣ. ಹೆಂಡತಿ ಕಳೆದುಕೊಂಡ ಏಕಾಂತ, ಬೀಡಿ ಕಟ್ಟುವ ಕೈಗಳ ವೇಗಕ್ಕೆ ಆಗಾಗ ಬಂದು ಹೋಗುವ ಹಳೆಯ ಯೋಚನೆ ಇವಿಷ್ಟೇ ಇವರ ಬದುಕಿನ ದಿನ ನಿತ್ಯದ ಆಗು-ಹೋಗು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಮಾನಿ ಹಾಗೂ ಸಿಪಿಎಂ ಬೆಂಬಲಿಗನಾಗಿರುವ ಜನಾರ್ಧನನ್ ,ಮುಖ್ಯಮಂತ್ರಿ ರಾಜ್ಯದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ನಿರ್ಧಾರವನ್ನು ಮಾಡಿದಾಗ, ಜನಾರ್ಧನನ್ ಇದರ ಕುರಿತು ಏನಾದರೂ ಮಾಡಬೇಕೆಂದು ಯೋಚಿಸುತ್ತಾರೆ. ಆಗ ಬಂದ ಯೋಚನೆ ಒಂದು ಕ್ಷಣ ಎಂಥವವರನ್ನೂ ಅಚ್ಚರಿಗೊಳಿಸಬಹುದು. ವ್ಯಾಕ್ಸಿನ್ ಚಾಲೆಂಜ್ ಗೆ, ಮುಖ್ಯಮಂತ್ರಿ ಕೋವಿಡ್ ನಿಧಿಗೆ ತಾನು 35 ವರ್ಷಗಳಿಂದ ದುಡಿದು ನಿವೃತ್ತಿ ಆದ ಬೀಡಿ ಕೆಲಸದಿಂದ ಉಳಿಸಿದ ಉಳಿತಾಯ ಹಣವನ್ನು ನೀಡುವುದು. ಅದು 5-10 ಸಾವಿರ ಅಲ್ಲ. ಸುಮಾರು 2 ಲಕ್ಷ ರೂಪಾಯಿ.

Advertisement

ಮರು ದಿನ ಬೆಳಗ್ಗೆ ಈ ಕುರಿತು ಮಾತಾನಾಡಲು ಬ್ಯಾಂಕಿಗೆ ಹೋದ ಜನಾರ್ಧನನ್ ಅಲ್ಲಿ ಈ ಬಗ್ಗೆ ಹೇಳಿ ಹಣವನ್ನು ಕೋವಿಡ್ ನಿಧಿಗೆ ವರ್ಗಾಯಿಸಲು ಹೇಳುತ್ತಾರೆ. ಇದನ್ನು ಕೇಳಿದ ಬ್ಯಾಂಕ್ ಸಿಬ್ಬಂದಿ ಒಮ್ಮೆ ಆಶ್ಚರ್ಯದಿಂದ, ಜನಾರ್ಧನನ್ ಅವರಿಗೆ ಅವರ ಪರಿಸ್ಥಿತಿಯನ್ನು ವಿವರಿಸಿ ಅರ್ಧ ಹಣವನ್ನು ಮಾತ್ರ ಹಾಕಿ ಎಂದು ಕೇಳಿ ಕೊಳ್ಳುತ್ತಾರೆ. ಆದ್ರೆ ಜನಾರ್ಧನನ್ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯದೇ ಇದನ್ನು ಮಾಡುವುದರಿಂದ ಮಾತ್ರ ನನಗೆ ಮಾನಸಿಕ ನೆಮ್ಮದಿ ಹಾಗೂ ರಾತ್ರಿ ಒಳ್ಳೆ ನಿದ್ದೆ ಬರಲು ಸಾಧ್ಯ. ಅವಶ್ಯಕತೆಯಿದ್ದಾಗ ಹಣವನ್ನು ರಾಶಿ ಹಾಕಿ ಏನು ಪ್ರಯೋಜನ. ತಾನು ಹಣ ಹಾಕಿದರೆ ಸರ್ಕಾರದಿಂದ ಇನ್ನಷ್ಟು ನೆರವಾಗಬಹುದೆಂದು ಹೇಳಿ ಹಣವನ್ನು ಕೋವಿಡ್ ನಿಧಿಗೆ ವರ್ಗಾಹಿಸುತ್ತಾರೆ.

ಜನಾರ್ಧನನ್ ಈಗಲೂ ಬೀಡಿ ಕಟ್ಟುತ್ತಾರೆ. ಪೆನ್ಷನ್ ಹಣ ಹಾಗೂ ಈ ಬೀಡಿಯ ದುಡಿತ ಬದುಕಿಗೆ ಸಾಕು ಎನ್ನುತ್ತಾರೆ. ಜನಾರ್ಧನನ್ 2 ಲಕ್ಷ ಹಣವನ್ನು ಕೋವಿಡ್ ನಿಧಿಗೆ ಕೊಟ್ಟಾಗ ಅವರ ಖಾತೆಯಲ್ಲಿ ಉಳಿದದ್ದು ಕೇವಲ 850 ರೂಪಾಯಿ. ಇವರಿಗೆ ಇಬ್ಬರು ಮಕ್ಕಳಿದ್ದು, ಇಬ್ಬರು ಒಳ್ಳೆಯ ಸ್ಥಿತಿಯಲ್ಲಿ ಇದ್ದಾರೆ. ಅಪ್ಪನ ಈ ಸೇವೆ ಮಕ್ಕಳಿಗೆ ಗೊತ್ತು ಆದದ್ದು ಸಾಮಾಜಿಕ ಜಾಲತಾಣದ ಮೂಲಕ ಎಂಬುದು ವಿಶೇಷ

ಜನಾರ್ಧನನ್ ಅವರ ಹೃದಯವಂತಿಕರಯನ್ನು ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

– ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next