Advertisement
ಈ ಬಾರಿ ಬಿಜೆಪಿ ಮುಖ್ಯಮಂತ್ರಿ ಮುಖವನ್ನು ಘೋಷಿಸುವ ಧೈರ್ಯ ತೋರಿಲ್ಲ, ಅದರ ಹಿಂದೆ ಒಂದು ಮಟ್ಟಿಗಿನ ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು ಎನ್ನುವ ಲೆಕ್ಕಾಚಾರವೂ ಇದೆ.
Related Articles
ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿಗೆ ಟಿಎಂಸಿ ಬೆಂಬಲ ಘೋಷಿಸಿದೆ. ಮಮತಾ ಬ್ಯಾನರ್ಜಿ ಬೆಂಬಲ ಸೂಚಿಸಿದ್ದು, ಧನ್ಯವಾದ ಸಲ್ಲಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಇನ್ನೊಂದೆಡೆ ಮಾಯಾವತಿ ಅವರು ನಮ್ಮ ಬಿ ಎಸ್ ಪಿ ಪ್ರತ್ಯೇಕ ಸ್ಪರ್ಧೆ ಮಾಡಲಿದೆ ಎಂದಿದ್ದಾರೆ.
Advertisement
ಹಿಂದುತ್ವದ ವಿಚಾರ ಮುನ್ನೆಲೆಗೆಹಿಂದುತ್ವ ಸಿದ್ದಾಂತ ಪ್ರತಿಪಾದಿಸುವ ಬಿಜೆಪಿಗೆ ಆಮ್ ಆದ್ಮಿ ಪಕ್ಷ ಸೆಡ್ಡು ಹೊಡೆದಿದೆ. ಮೃದು ಹಿಂದುತ್ವಕ್ಕೂ ಮೀರಿ ಹೇಳಿಕೆ ಮತ್ತು ಕಾರ್ಯಗಳನ್ನು ಮಾಡುತ್ತಿರುವ ಆಪ್ ”ನಮ್ಮಲ್ಲಿ ರಘುಕುಲದ ಸಂಪ್ರದಾಯವನ್ನು ಯಾವಾಗಲೂ ಅನುಸರಿಸಲಾಗಿದೆ, ಜೀವ ಹೋಗಬಹುದು ಆದರೆ ಭರವಸೆ ಹುಸಿಯಾಗಬಾರದು.ಸನಾತನ ಧರ್ಮ ಮತ್ತು ದೇವರ ಸೇವೆಯಲ್ಲಿ ಸದಾ ನಿರತರಾಗಿರುವವರನ್ನು ಗೌರವಿಸುವ ಮತ್ತು ಗೌರವಿಸುವ ಸೌಭಾಗ್ಯ ನಮ್ಮ ಪಕ್ಷಕ್ಕೆ ಇದೆ. ಸಂತರು ಮತ್ತು ಪುರೋಹಿತರಿಗೆ ಪ್ರತಿ ತಿಂಗಳು 18,000 ರೂ.ಗೌರವಧನ ನೀಡುವುದಾಗಿ ಘೋಷಣೆ ಮಾಡಿದ್ದು , ಅದನ್ನು ಅಧಿಕಾರಕ್ಕೆ ಬಂದ ಬಳಿಕ ಪೂರ್ಣಗೊಳಿಸುತ್ತೇವೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಕೇಜ್ರಿವಾಲ್ ‘ಸನಾತನ ಸೇವಾ ಸಮಿತಿ’ ಆರಂಭಿಸುತ್ತಿದ್ದಂತೆಯೇ ಹಲವಾರು ಬಿಜೆಪಿ ಕಾರ್ಯಕರ್ತರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರಾಜಕೀಯ ಹೊಂದಾಣಿಕೆಗಳಲ್ಲಿ ಬದಲಾವಣೆಯನ್ನು ಸೂಚಿಸುವ ನಿಟ್ಟಿನಲ್ಲಿ, ಆಮ್ ಆದ್ಮಿ ಪಕ್ಷ ‘ಸನಾತನ ಸೇವಾ ಸಮಿತಿ’ ಪ್ರಾರಂಭಿಸಿದೆ. ಗಮನಾರ್ಹ ಸಂಖ್ಯೆಯ ಬಿಜೆಪಿಯ ಮಂದಿರ ಪ್ರಕೋಷ್ಠ ಸದಸ್ಯರು ಪಕ್ಷ ತೊರೆದಿದ್ದಾರೆ.
ಆಮ್ ಆದ್ಮಿ ಪಕ್ಷದ ಹಲವು ನಾಯಕರು ಜೈಲು ಸೇರಿ ಬಂದಿರುವುದನ್ನೇ ಪ್ರಮುಖ ಚುನಾವಣ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ಇನ್ನೂ ಅದೇ ವಿಚಾರವನ್ನು ಮುಂದಿಟ್ಟುಕೊಂಡಿದೆ. 6 ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿರುವ ಕೇಜ್ರಿವಾಲ್ ಅವರ ಬಂಗಲೆಯಲ್ಲಿ ‘ಚಿನ್ನದ ಕಮೋಡ್, ಈಜುಕೊಳ ಮತ್ತು ಮಿನಿ ಬಾರ್ ಇದೆ ಎಂದು ಬಿಜೆಪಿ ಆರೋಪ ಮಾಡಿದೆ. ಈ ವಿಚಾರದಲ್ಲೇ ಹೊಸ ಜಟಾಪಟಿ ಆರಂಭವಾಗಿದೆ. ದೆಹಲಿ ಮುಖ್ಯಮಂತ್ರಿ ನಿವಾಸಕ್ಕೆ ಪ್ರವೇಶಿಸುವ ಪ್ರಯತ್ನದ ನಂತರ ಸೌರಭ್ ಭಾರದ್ವಾಜ್ ಅವರು ಇತರ ಆಪ್ ನಾಯಕರೊಂದಿಗೆ ಬುಧವಾರ(ಜ8) ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿ ಬಿಜೆಪಿಗೆ ಸವಾಲಿನ ಕ್ಷಣ ಎದುರಿಟ್ಟರು. ಪ್ರಧಾನಿ ನಿವಾಸಕ್ಕೆ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.ಆದರೆ ಅವರನ್ನು ತಡೆಯಲಾಗಿದೆ. ಕೇಜ್ರಿವಾಲ್ ಗೆ ಪ್ರಬಲ ಸ್ಪರ್ಧಿಗಳು ಆಪ್ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು,ಬಿಜೆಪಿ 29 ಸ್ಥಾನಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಹೆಸರಿಸಿದೆ. ಕಾಂಗ್ರೆಸ್ 48 ಸ್ಥಾನಗಳಿಗೆ ಸ್ಪರ್ಧಿಗಳನ್ನು ಘೋಷಿಸಿದ್ದು, ಈಗಾಗಲೇ ಕೆಲವು ಕ್ಷೇತ್ರಗಳ ಫಲಿತಾಂಶದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಕೆಲವೆಡೆ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆಗಳೂ ಇದೆ. ಪ್ರಮುಖವಾಗಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ಅವರನ್ನು ಕಣಕ್ಕಿಳಿಸಿದೆ, ಬಿಜೆಪಿ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮ ಅವರ ಪುತ್ರ ಯುವ ನಾಯಕ ಪರ್ವೇಶ್ ಅವರನ್ನು ಕಣಕ್ಕಿಳಿಸಿದೆ. ಸಂದೀಪ್ ಮತ್ತು ಪರ್ವೇಶ್ ಇಬ್ಬರೂ ಎರಡು ಬಾರಿ ಸಂಸತ್ತಿಗೆ ಚುನಾಯಿತರಾಗಿದ್ದಾರೆ. ಆದರೆ ನವದೆಹಲಿ ಕ್ಷೇತ್ರದಲ್ಲಿ ಚುನಾವಣ ಅನುಭವವನ್ನು ಹೊಂದಿಲ್ಲ. ಸಂದೀಪ್ 2004 ಮತ್ತು 2009 ರಲ್ಲಿ ಪೂರ್ವ ದೆಹಲಿಯಿಂದ ಸಂಸದರಾಗಿದ್ದರೆ, ಪರ್ವೇಶ್ 2014 ಮತ್ತು 2019 ರಲ್ಲಿ ಲೋಕಸಭೆಯಲ್ಲಿ ಪಶ್ಚಿಮ ದೆಹಲಿ ಕ್ಷೇತ್ರದ ಮೂಲಕ ಪ್ರತಿನಿಧಿಸಿದ್ದರು. 2015 ರಲ್ಲಿ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಕಸಿದುಕೊಂಡಿದ್ದ ಆಪ್ ರಾಜಕೀಯ ವಲಯವನ್ನೇ ಬೆರಗು ಮೂಡಿಸಿತ್ತು. 54.3% ಮತಗಳನ್ನು ಗೆದ್ದು ಅಧಿಕಾರಕ್ಕೇರಿತ್ತು. ಹೀನಾಯ ನಿರ್ವಹಣೆ ತೋರಿದ್ದ ಕಾಂಗ್ರೆಸ್ ಕೇವಲ 9.7% ಮತ ಗಳಿಸಿತ್ತು. ಬಿಜೆಪಿ 32.3% ಮತ ಪಡೆದಿದ್ದರೂ 3 ಮಂದಿ ಮಾತ್ರ ಗೆಲುವು ಕಂಡಿದ್ದರು. 2020 ರ ಚುನಾವಣೆಯಲ್ಲಿ ಆಪ್ ಗೆ ಹೋರಾಟದ ಸ್ಥಿತಿ
2019 ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ 7ಕ್ಕೆ 7 ಸ್ಥಾನಗಳನ್ನು ಕಳೆದುಕೊಂಡಿದ್ದ ಆಮ್ ಆದ್ಮಿ ಪಕ್ಷಕ್ಕೆ ಸವಾಲಿನ ಸ್ಥಿತಿ ಎದುರಾಗಿತ್ತು. ಆದರೆ 62 ಸ್ಥಾನಗಳನ್ನು ಗೆದ್ದು ಮತ್ತೆ ಪ್ರಾಬಲ್ಯ ತೋರಿತ್ತು. ಬಿಜೆಪಿ 8 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಈ ಬಾರಿ ಬಿಜೆಪಿ ಮತ್ತೆ ಹೋರಾಟ ನೀಡುತ್ತಿದ್ದು, ಆಮ್ ಆದ್ಮಿ ಪಕ್ಷ ಕೂಡ ಹೊಸ ಹೊಸ ರಣತಂತ್ರಗಳ ಮೂಲಕ ಕೇಸರಿ ಪಾಳಯಕ್ಕೆ ಸವಾಲು ಒಡ್ಡುತ್ತಿದೆ. ಒಟ್ಟಿನಲ್ಲಿ ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ? ಎನ್ನುವ ಸ್ಥಿತಿ ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಾಣವಾಗಿದೆ.