Advertisement
4ನೇ ಹಂತದ ಚುನಾವಣೆಯಲ್ಲಿ ಒಟ್ಟು 1,717 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದು, ಮತಯಂತ್ರಗಳಲ್ಲಿ ಭದ್ರ ವಾಗಿದೆ. ಈ ಹಂತದಲ್ಲಿ ಒಟ್ಟು 17.70 ಕೋಟಿ ಮತದಾರರು ಮತ ಚಲಾಯಿಸಲು ಅರ್ಹ ರಾಗಿದ್ದರು. ಲೋಕಸಭೆ ಚುನಾವಣೆ ಜತೆಗೆ ಆಂಧ್ರ ಪ್ರದೇಶ ಎಲ್ಲ 175 ವಿಧಾನಸಭಾ ಕ್ಷೇತ್ರ ಹಾಗೂ ಒಡಿಶಾದ 147 ವಿಧಾನಸಭಾ ಕ್ಷೇತ್ರಗಳ ಪೈಕಿ 28ಕ್ಕೆ ಮತದಾನ ನಡೆದಿದೆ.
Related Articles
ಗುಂಟೂರು: ತೆನಾಲಿ ವೈಎಸ್‌ಆರ್ ಕಾಂಗ್ರೆಸ್ ಶಾಸಕ ಎ.ಶಿವ ಕುಮಾರ್ ಮತದಾರರ ಕಪಾಳಕ್ಕೆ ಹೊಡೆದಿದ್ದಾರೆ. ಮತದಾರನೂ ಶಾಸಕನಿಗೆ ಹೊಡೆದಿ ದ್ದಾರೆ. ಶಿವ ಕುಮಾರ್ ಬೆಂಬ ಲಿಗರು ಮತ ದಾರನ ಮೇಲೆ ಹಲ್ಲೆ ನಡೆಸಿದ್ದಾರೆ. ಘರ್ಷಣೆ ತಡೆಯಲು ಅಲ್ಲಿದ್ದ ಮತ ದಾ ರರೆಲ್ಲರೂ ಪ್ರಯತ್ನಿ ಸಿದ್ದು, ಭದ್ರತಾ ಸಿಬ್ಬಂದಿ ಅವರನ್ನು ತಡೆಯಲಿಲ್ಲ. ಶಾಸ ಕನ ವರ್ತನೆ ಬಗ್ಗೆ ಸಾಮಾಜಿಕ ಜಾಲಾ ತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
Advertisement
ಎಲ್ಲೆಲ್ಲಿ ಚುನಾವಣೆ?ಆಂಧ್ರ (25), ತೆಲಂಗಾಣ (17), ಉ.ಪ್ರ.(13), ಮಹಾರಾಷ್ಟ್ರ (11), ಮ.(8), ಪಶ್ಚಿಮ ಬಂಗಾಲ (8), ಬಿಹಾರ (5), ಝಾರ್ಖಂಡ್ (5), ಒಡಿಶಾ (4), ಕಾಶ್ಮೀರದ 1 ಕ್ಷೇತ್ರ. ಪ್ರಮುಖರ ಸ್ಪರ್ಧೆ: ಅಖೀಲೇಶ್ ಯಾದವ್, ಮಹುವಾ ಮೊಯಿತ್ರಾ, ಅಮೃತಾ ರಾಯ್, ಯುಸೂಫ್ ಪಠಾಣ್, ಅಧೀರ್ ರಂಜನ್ ಚೌಧರಿ, ನಿರ್ಮಲ್ ಕುಮಾರ್, ಗಿರಿರಾಜ್ ಸಿಂಗ್, ವೈ.ಎಸ್.ಶರ್ಮಿಳಾ, ಅರ್ಜುನ್ ಮುಂಡಾ ಹಾಗೂ ಮತ್ತಿತರರು. ಬಂಗಾಲದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ ಯತ್ನ
4ನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಲದ 8 ಲೋಕಸಭಾ ಕ್ಷೇತ್ರಗಳಲ್ಲಿ ಸೋಮವಾರ ಮತದಾನ ನಡೆಯಿತು. 8 ಕ್ಷೇತ್ರಗಳ ಪೈಕಿ ಬಿರ್‌ಭುಮ್ ಮತ್ತು ಬರ್ಧಮಾನ್-ದುರ್ಗಾಪುರ್ ಲೋಕಸಭಾ ಕ್ಷೇತ್ರದ ವಿವಿಧಡೆ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಹಿಂಸಾಚಾರ ನಡೆದಿದೆ. ಈ ಮಧ್ಯೆ, ಬಿಜೆಪಿ ಅಭ್ಯರ್ಥಿ ದಿಲೀಪ್ ಘೋಷ್ ವಿರುದ್ಧ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಬೆಂಗಾವಲು ಪಡೆಗಳ ವಾಹನದ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಜತೆಗೆ ಅವರ ಮೇಲೆ ಹಲ್ಲೆ ನಡೆಸಲೂ ಯತ್ನಿಸಲಾಗಿದೆ. ರಾಜ್ಯದಲ್ಲಿ ಇವಿಎಂ ಸಮಸ್ಯೆ ಹಾಗೂ ಮತಗಟ್ಟೆಗಳಿಗೆ ಏಜೆಂಟ್ ಪ್ರವೇಶ ನಿರ್ಬಂಧಕ್ಕೆ ಸಂಬಂಧಿಸಿದಂತೆ ಒಟ್ಟು 1,088 ದೂರು ಸ್ವೀಕರಿಸಿದ್ದಾಗಿಯೂ ಚುನಾವಣ ಆಯೋಗವು ಹೇಳಿದೆ. ಒಡಿಶಾದಲ್ಲಿ ಮೊದಲ ಹಂತದ ಚುನಾವಣೆ: ಶೇ.64ರಷ್ಟು ಮತದಾನ
ಭುವನೇಶ್ವರ: ಲೋಕಸಭೆ ಚುನಾವಣೆ 4 ಹಂತದ ಭಾಗವಾಗಿ ಒಡಿಶಾದ 4 ಲೋಕಸಭೆ ಕ್ಷೇತ್ರ ಹಾಗೂ 28 ವಿಧಾನಸಭೆ ಕ್ಷೇತ್ರಗಳಿಗೆ ಏಕಕಾಲಕ್ಕೆ ಮತದಾನ ನಡೆದಿದ್ದು, ಶೇ. 64ರಷ್ಟು ಮತದಾನ ನಡೆದಿದೆ. ಕಲಾಹಂಡೀ, ಬರಹಮ್‌ಪುರ್, ಕೊರಾಪುಟ್, ನಬರಂಗಪುರ ಲೋಕಸಭಾ ಕ್ಷೇತ್ರಗಳಲ್ಲಿ ಸೋಮವಾರ ಚುನಾವಣೆ ನಡೆಯಿತು. ಆದಿವಾಸಿ ಸಮುದಾಯ ಅಧಿಕವಾಗಿರುವ ಕಲಾಹಂಡೀಯಲ್ಲಿ ಶೇ. 67.07 ಅತೀ ಹೆಚ್ಚು ಮತದಾನವಾಗಿದೆ. ಎಂಟು ಜಿಲ್ಲೆಗಳ ಪೈಕಿ ನಬರಂಗಪುರದಲ್ಲಿ ಶೇ. 68.84 ಅತೀ ಹೆಚ್ಚು ಮತದಾನವಾಗಿದೆ. ಮತದಾನ ವೇಳೆ ಹಲವೆಡೆ ಇವಿಎಂ ಯಂತ್ರ ಕೈಕೊಟ್ಟಿದ್ದು, ಕೂಡಲೇ ಹೊಸ ಯಂತ್ರ ಅಳವಡಿಸಲಾಗಿದೆ. ಕರ್ತವ್ಯ ಲೋಪವೆಸಗಿದ ಕಾರಣಕ್ಕೆ ಮೂವರು ಮತಗಟ್ಟೆ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.