ಲಾಹೋರ್: ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಆಚರಣೆಯಲ್ಲಿ ಪಾಲ್ಗೊಳ್ಳಲು 62 ಹಿಂದೂಗಳು ವಾಘಾ ಗಡಿ ಮೂಲಕ ಭಾರತದಿಂದ ಬುಧವಾರ ಲಾಹೋರ್ ತಲುಪಿದ್ದಾರೆ.
“ಮಹಾಶಿವರಾತ್ರಿ ಉತ್ಸವದಲ್ಲಿ ಪಾಲ್ಗೊಳ್ಳಲು ಭಾರತದಿಂದ ಒಟ್ಟು 62 ಹಿಂದೂ ಯಾತ್ರಿಕರು ಬುಧವಾರ ಲಾಹೋರ್‌ಗೆ ಆಗಮಿಸಿದ್ದಾರೆ” ಎಂದು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ವಕ್ತಾರ ಅಮೀರ್ ಹಶ್ಮಿ ಪಿಟಿಐಗೆ ತಿಳಿಸಿದ್ದಾರೆ.
“ಇಟಿಪಿಬಿ ಆಯೋಜಿಸಿರುವ ಮಹಾಶಿವರಾತ್ರಿಯ ಮುಖ್ಯ ಸಮಾರಂಭವು ಲಾಹೋರ್‌ನಿಂದ ಸುಮಾರು 300 ಕಿಮೀ ದೂರದಲ್ಲಿರುವ ಚಕ್ವಾಲ್‌ನಲ್ಲಿರುವ ಐತಿಹಾಸಿಕ ಕಟಾಸ್ ರಾಜ್ ದೇವಾಲಯಗಳಲ್ಲಿ ಮಾರ್ಚ್ 9 ರಂದು ನಡೆಯಲಿದೆ. ಇದರಲ್ಲಿ ವಿವಿಧ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ” ಎಂದು ಹಶ್ಮಿ ಹೇಳಿದ್ದಾರೆ.
ವಾಘಾದಲ್ಲಿ, ಪುಣ್ಯಕ್ಷೇತ್ರಗಳ ಹೆಚ್ಚುವರಿ ಕಾರ್ಯದರ್ಶಿ ರಾಣಾ ಶಾಹಿದ್ ಸಲೀಂ ಅವರು ವಿಶ್ವನಾಥ್ ಬಜಾಜ್ ನೇತೃತ್ವದಲ್ಲಿ ಭೇಟಿ ನೀಡಿದ ಹಿಂದೂಗಳನ್ನು ಸ್ವಾಗತಿಸಿದರು.
“ಗುರುವಾರ ರಾತ್ರಿ ಗುರುದ್ವಾರ ಡೇರಾ ಸಾಹಿಬ್ ಲಾಹೋರ್‌ನಲ್ಲಿ ಕಳೆದ ನಂತರ ಹಿಂದೂ ಯಾತ್ರಿಕರು ಮುಖ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಗುರುವಾರ ಕಟಾಸ್ ರಾಜ್ ದೇವಾಲಯಕ್ಕೆ ತೆರಳುತ್ತಾರೆ” ಇಟಿಪಿಬಿ ಅವರಿಗೆ ಭದ್ರತೆ, ವಸತಿ ಮತ್ತು ಸಾರಿಗೆಯನ್ನು ಒದಗಿಸುತ್ತಿದೆ.
ಯಾತ್ರಿಕರು ಮಾರ್ಚ್ 10 ರಂದು ಲಾಹೋರ್‌ಗೆ ಹಿಂತಿರುಗಿ ಮಾರ್ಚ್ 11 ರಂದು ಅವರು ಲಾಹೋರ್‌ನ ಕೃಷ್ಣ ದೇವಾಲಯ, ಲಾಹೋರ್ ಕೋಟೆ ಮತ್ತು ಇತರ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಮಾರ್ಚ್ 12 ರಂದು ತಮ್ಮ ತಾಯ್ನಾಡಿಗೆ ಮರಳಲಿದ್ದಾರೆ.