Advertisement

ಜಿಲ್ಲೆಯ 6,197 ವಿದ್ಯಾರ್ಥಿಗಳು ಇನ್ನೂ ಶಾಲೆಯಿಂದ ದೂರ!

03:37 PM Sep 24, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ 317 ಶಾಲೆಗಳಲ್ಲಿ 34786 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು ಇದುವರೆಗೆ 28589 (ಶೇ.82.19) ಮಂದಿ ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಹಾಜರಾಗುತ್ತಿದ್ದಾರೆ.

Advertisement

ಜಾಗೃತಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಶೇ.2ಗಿಂತಲೂ ಕಡಿಮೆ ಇರುವ ಜಿಲ್ಲೆಯಲ್ಲಿ ಸರ್ಕಾರ ಆ.23 ರಿಂದ 9 ಮತ್ತು 10 ನೇ ತರಗತಿ ಆರಂಭಿಸಲು ಅವಕಾಶ ಕಲ್ಪಿಸಿತ್ತು. ಕಳೆದ ಒಂದು ತಿಂಗಳ ಅವ ಧಿಯಲ್ಲಿ ವಿದ್ಯಾ ರ್ಥಿಗಳು, ಶಿಕ್ಷಕರಿಗೆ ಯಾವುದೇ ಕೋವಿಡ್‌ ಪ್ರಕರಣ ದಾಖಲಾಗದೆ ಶಾಲೆಗಳು ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ, ಜಿಲ್ಲಾಡಳಿತ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಎಚ್ಚರ ಮತ್ತು ಜಾಗೃತಿ ವಹಿಸಿದೆ.

ಜಿಲ್ಲೆಯ 9 ಮತ್ತು 10ನೇ ತರಗತಿಗಳನ್ನು ಕೋವಿಡ್‌ ಮಾರ್ಗಸೂಚಿ ಪಾಲಿಸಿ ಆರಂಭಿ ಸಲು ಅವಕಾಶ ಕಲ್ಪಿಸಿದೆ. ಆದರೇ ಇನ್ನೂ ಹಲವು ಶಾಲೆಗಳಲ್ಲಿ ಕೋವಿಡ್‌-19 ಮಾರ್ಗ ಸೂಚಿ ಪಾಲಿಸುತ್ತಿಲ್ಲವೆಂಬ ದೂರು ಕೇಳಿ ಬರುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲಿಸಲಾಗುತ್ತಿದ್ದೀಯೇ? ಅಥವಾ ಇಲ್ಲವೇ? ಎಂಬುದರ ಕುರಿತು ಲೋಕಾಯುಕ್ತ ಜಿಲ್ಲಾ ಎಸ್ಪಿ ಪೂವಯ್ಯ ಇತ್ತೀ ಚಿಗೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿ ಶೀಲಿಸಿ ನಿರ್ಲಕ್ಷ್ಯ ವಹಿಸಿದ್ದ ಶಿಕ್ಷಕಿಯೊಬ್ಬ ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಕುರಿತು ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ವರದಿ ನೀಡಿದ್ದಾರೆ

ಇದನ್ನೂ ಓದಿ:ನೇರ ವೇತನ ಪಾವತಿ ಪೌರಕಾರ್ಮಿಕರು ಶೀಘ್ರ ಕಾಯಂ

14,374 ಮಕ್ಕಳ ಪೈಕಿ
3,115 ಮಂದಿ ಗೈರು
ಜಿಲ್ಲೆಯ 111 ಸರ್ಕಾರಿ ಪ್ರೌಢಶಾಲೆಗಳಲ್ಲಿ 9 ಮತ್ತು 10ನೇ ತರಗತಿಗೆ 14374 ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ. ಆ ಪೈಕಿ 11259 ವಿದ್ಯಾರ್ಥಿಗಳು ಮಾತ್ರ ಹಾಜರಾಗುತ್ತಿದ್ದಾರೆ. ( 3115ವಿದ್ಯಾರ್ಥಿಗಳು ಗೈರು), 45 ಅನುದಾನಿತ ಶಾಲೆಗಳಲ್ಲಿ 5851 ವಿದ್ಯಾರ್ಥಿಗಳು ದಾಖಲಾಗಿದ್ದು ಆ ಪೈಕಿ 4743 ವಿದ್ಯಾರ್ಥಿಗಳು ಮಾತ್ರ ಹಾಜರಾಗುತ್ತಿದ್ದಾರೆ (1108 ವಿದ್ಯಾರ್ಥಿಗಳು ಗೈರು) ಇನ್ನೂ 142 ಖಾಸಗಿ ಶಾಲೆಗಳಲ್ಲಿ 12511 ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದು 10945 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ( 1566 ವಿದ್ಯಾರ್ಥಿಗಳು ಗೈರು) 19 ವಸತಿ ಶಾಲೆಗಳಲ್ಲಿ 2050 ವಿದ್ಯಾರ್ಥಿಗಳು ದಾಖಲಾಗಿದ್ದು 1642 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. 408 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ

Advertisement

ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಮತ್ತು ಜಿಲ್ಲಾ ಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾದ್ಯಂತ ಶಾಲೆಗಳು ಈಗಾಗಲೇ ಆರಂಭವಾಗಿ ನಡೆಯುತ್ತಿವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಆರೋಗ್ಯ ಕಾಪಾಡಲು ಕ್ರಮ ಅಗತ್ಯ ಕೈಗೊಳ್ಳಲಾಗಿದೆ. ಶಿಕ್ಷಕರಿಗೆ ಕೋವಿಡ್‌ ಮಾರ್ಗಸೂಚಿ ಕಡ್ಡಾಯ ಪಾಲನೆಗೆ ನಿರ್ದೇಶನ ನೀಡಲಾಗಿದೆ
-ಜಯರಾಮ್‌ರೆಡ್ಡಿ,
ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕಬಳ್ಳಾಪುರ.

– ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next