Advertisement

ಕಪ್ಪೆಗೂ ಬಂತು ಹಬ್ಬ! ಪಶ್ಚಿಮ ಘಟ್ಟದಲ್ಲಿ 600 ತಳಿ ಕಪ್ಪೆಗಳು

12:20 AM Dec 18, 2021 | Team Udayavani |

ಮಳೆಗಾಲ ಬಂತೆಂದರೆ ಕಪ್ಪೆಗಳ ವಟಗುಟ್ಟುವಿಕೆ ಜೋರಾಗುವ ಕಾಲವೊಂದಿತ್ತು. ಆದರೆ ಈಗ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ. “ಕೂಪ ಮಂಡೂಕ’ ಎಂದು ಮೂದಲಿಕೆಗೆ ಸೀಮಿತವಾಗಿದೆ. ಪಶ್ಚಿಮ ಘಟ್ಟದಲ್ಲಿರುವ ಹಲವು ಕಪ್ಪೆಗಳ ಸಂತತಿ ಅಳಿವಿನಂಚಿನಲ್ಲಿದೆ. ಇದೆಲ್ಲವುಗಳ ಬಗ್ಗೆ ಅಧ್ಯಯನ, ಚಿಂತನ, ಮಂಥನಕ್ಕೂ ವೇದಿಕೆ ಸೃಷ್ಟಿಯಾಗಿದೆ. ಅದೆಲ್ಲದರ ಸ್ಥೂಲ ಮಾಹಿತಿ ಇಲ್ಲಿದೆ.

Advertisement

ಪಶ್ಚಿಮ ಘಟ್ಟದಲ್ಲಿ 600 ತಳಿ ಕಪ್ಪೆಗಳು 
ರಾಜ್ಯದ ಪಶ್ಚಿಮ ಘಟ್ಟದಲ್ಲಿ 104ಕ್ಕೂ ಅಧಿಕ ಹಾಗೂ ಇಡೀ ಪಶ್ಚಿಮ ಘಟ್ಟದಲ್ಲಿ 400ಕ್ಕೂ ಅ ಧಿಕ ಉಭಯವಾಸಿ ಜೀವಿಗಳನ್ನು ಪತ್ತೆ ಹಚ್ಚಲಾಗಿದೆ. ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಉಭಯವಾಸಿ ಜೀವಿಗಳು ಪಶ್ಚಿಮ ಘಟ್ಟ­ಗಳಲ್ಲಿದ್ದು, ಸಂಶೋಧನೆಯಾಗದ ಕಾರಣ ಅವುಗಳ ಪತ್ತೆಯಾಗಿಲ್ಲ. ಡಿ.18 ಮತ್ತು 19ರಂದು ಮುಪ್ಪಾನೆ ಪ್ರಕೃತಿ ಶಿಬಿರದಲ್ಲಿ ಹಮ್ಮಿಕೊಂಡಿರುವ ಕಪ್ಪೆ ಹಬ್ಬ’ ಇದೆಲ್ಲಕ್ಕೂ ಉತ್ತರವಾಗುವ ಸಾಧ್ಯತೆ ಇದೆ. ಇಲ್ಲಿಯವರೆಗೆ ಕಪ್ಪೆ ಹಬ್ಬ’ ಮಾಡಿಲ್ಲ. ಹೀಗಾಗಿ ಅರಣ್ಯ ಇಲಾಖೆಯ ಶಿವಮೊಗ್ಗ ವನ್ಯಜೀವಿ ವಿಭಾಗ ಹಾಗೂ ಕಾರ್ಗಲ್‌ ವನ್ಯಜೀವಿ ವಿಭಾಗಗಳು ಹಮ್ಮಿಕೊಂಡಿರುವುದೇ ಚೊಚ್ಚಲ ಕಾರ್ಯಕ್ರಮ. ಈವರೆಗೆ ಕರ್ನಾಟಕದ ಮಟ್ಟಿಗೆ ಕಪ್ಪೆಗಳ ಕುರಿತು ನಿರೀಕ್ಷಿತ ಮಟ್ಟದಲ್ಲಿ ಅಧ್ಯಯನ ನಡೆದಿಲ್ಲ. ಅದಕ್ಕಾಗಿಯೇ ಪರಿಸರ ಪ್ರೇಮಿಗಳು ಸೇರಿ ಇತ್ತೀಚೆಗೆ “ರಾಜ್ಯ ಕಪ್ಪೆ’ಯಾಗಿ ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟದಲ್ಲಿ ವೇದ್ಯವಾಗುವ ಟ್ರೀ ಟೋಡ್‌’ ಅನ್ನು ಘೋಷಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಅದಕ್ಕೆ ಪೂರಕವಾಗಿ ಕಪ್ಪೆ ಹಬ್ಬ ಆಯೋಜನೆ ಮಾಡಲಾಗಿದೆ.

ಕಪ್ಪೆ ಹಬ್ಬ ಏಕೆ?
ಪಶ್ಚಿಮ ಘಟ್ಟದಲ್ಲಿ ಪ್ರಾಣಿ ಜಗತ್ತಿನ ಬಗ್ಗೆ ಬೆಳಕಿಗೆ ಬಾರದೇ ಇರುವ ಸಾಕಷ್ಟು ರಹಸ್ಯಗಳಿವೆ. ಅದರಲ್ಲೂ ವಿಶಿಷ್ಟ ಪ್ರಬೇಧದ ಕಪ್ಪೆ, ಇವುಗಳ ಬಗ್ಗೆ ನಡೆಯಬೇಕಾದ ಸಂಶೋಧನೆ, ಹೊಸ ತಳಿಗಳ ಹುಡುಕಾಟ ಹೀಗೆ ಹತ್ತು ಹಲವು ವಿಚಾರಗಳಿಗೆ “ಕಪ್ಪೆ ಹಬ್ಬ’ ಬುನಾದಿಯಾಗುವ ನಿರೀಕ್ಷೆ ಇದೆ. ಎರಡು ದಿನಗಳ ಕಾಲ ನಡೆಯಲಿರುವ ಕಪ್ಪೆ ಹಬ್ಬದಲ್ಲಿ ಪರಿಣತರು, ಕಪ್ಪೆಗಳ ಬಗ್ಗೆ ಅಧ್ಯಯನ ನಡೆಸಿದವರು ಭಾಗವಹಿಸಲಿದ್ದಾರೆ. ಕಪ್ಪೆಗಳ ಕುರಿತು ಚಿತ್ರೀಕರಣಗೊಂಡಿರುವ ಸಾಕ್ಷ್ಯಚಿತ್ರ ಕೂಡ ಪ್ರದರ್ಶನಗೊಳ್ಳಲಿದೆ. ಜತೆಗೆ ಕಪ್ಪೆ ಮತ್ತು ಪತಂಗಗಳ ವೀಕ್ಷಣೆ ಕೂಡ ಇರಲಿದೆ.

ಇದನ್ನೂ ಓದಿ:ಒನ್‌ಪ್ಲಸ್‌ ಬಡ್ಸ್‌ ಜೆಡ್‌2 ಬಿಡುಗಡೆ; ವಿವಿಧ ಮೋಡ್‌ಗಳಿರುವ ಇಯರ್‌ಬಡ್‌

ಮಂಡೂಕಗಳೆಂದರೆ ಸುಮ್ಮನೇನಾ?
ಮಂಡೂಕಗಳೆಂದರೆ ಈಗಲೂ ಹಲವರಿಗೆ ಅಲರ್ಜಿ. ಆದರೆ ಪರಿಸರದಲ್ಲಿ ಆಹಾರ ಸರಪಳಿಯಲ್ಲಿ ಇವುಗಳ ಪಾತ್ರ ಬಹುದೊಡ್ಡದು. ಕಪ್ಪೆಗಳೆಂದರೆ ಪರಿಸರ ಆರೋಗ್ಯ ಸೂಚಕ ಜೀವಿಗಳು. ಕೀಟ ಸಾಂದ್ರತೆ­ ಯನ್ನು ನಿಯಂತ್ರಣ ದಲ್ಲಿಡುವ ಶಕ್ತಿ ಇವುಗಳಿಗಿದೆ. ಒಂದು ವೇಳೆ ಕಪ್ಪೆ ಸಂತತಿಯೇ ಇಲ್ಲದಿದ್ದರೆ ಕೀಟಗಳ ಸಂಖ್ಯೆಯಲ್ಲಿ ಏರಿಕೆಯಾಗಿ ಬಹುದೊಡ್ಡ ಗಂಡಾಂತರ ಎದುರಾಗಬಹುದು. ಪರಿಸರದಲ್ಲಿ ರೈತ ಸ್ನೇಹಿಯಾಗಿ ಕಪ್ಪೆಗಳು ಕೆಲಸ ಮಾಡುತ್ತವೆ.

Advertisement

ಪರಿಸರದ ಆರೋಗ್ಯ ಸೂಚಕ ಜೀವಿಗಳೆಂದು ಗುರುತಿಸಲಾಗುವ ಕಪ್ಪೆಗಳ ಅವಸಾನ ಆತಂಕದ ಬೆಳವಣಿಗೆ. ಆ ವಿಶಿಷ್ಟ ಜೀವಿಯ ಸಂರಕ್ಷಣೆ, ಜೀವ ವೈವಿಧ್ಯದ ಕುರಿತು ಜನಜಾಗೃತಿಯ ಪ್ರಯತ್ನವಾಗಿ ಕಪ್ಪೆ ಹಬ್ಬ ಆಯೋಜಿಸಲಾಗಿದೆ.
 -ಐ.ಎಂ. ನಾಗರಾಜ್‌, ಡಿಸಿಎಫ್‌, ವನ್ಯಜೀವಿ ವಿಭಾಗ, ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next