Advertisement
9 ವರ್ಷ ಕಾದ 108 ಕುಂಭಜೋಧಪುರದ ದೇಸಿ ಹಸುಗಳ ಹಾಲನ್ನು ಬಳಸಿ 9 ವರ್ಷಗಳಿಂದ ಸಂಗ್ರಹಿಸಲಾಗಿರುವ ತುಪ್ಪವನ್ನು 108 ಕುಂಭದಲ್ಲಿ ತುಂಬಿಸಿ ಜೋಧಪುರದಿಂದ ಅಯೋಧ್ಯೆಗೆ ತರಲಾಗಿದೆ. ಜೋಧಪುರದ ಸಂತ ಮಹರ್ಷಿ ಸಾಂದೀಪಾನಿ ಮಹಾರಾಜರ ನೇತೃತ್ವದಲ್ಲಿ ತುಪ್ಪ ತುಂಬಿದ ಕುಂಭಗಳು 5 ಎತ್ತಿನಗಾಡಿಗಳಲ್ಲಿ ಬಂದಿದ್ದು, ಪಟ್ಟಾಭಿಷೇಕಕ್ಕೂ ಮುನ್ನ ಹಚ್ಚಲಿರುವ ಅಖಂಡ ದೀಪಕ್ಕೆ ಇದು ಸಮರ್ಪಣೆಯಾಗಲಿದೆ. ಪ್ರತೀ 3 ವರ್ಷಕ್ಕೊಮ್ಮೆ ವಿವಿಧ ಔಷಧೀಯ ಗುಣವುಳ್ಳ ಗಿಡಮೂಲಿಕೆಗಳನ್ನು ತುಪ್ಪದ ಮಡಕೆಯಲ್ಲಿ ಹಾಕಿಟ್ಟು , ಗುಣಮಟ್ಟ ಕಾಯ್ದುಕೊಂಡು, ಅನಂತರ ಮತ್ತೂಂದು ಮಡಕೆಯಲ್ಲಿ ಶೋಧಿಸಿ ಸಂಗ್ರಹಿಸಲಾಗಿರುವುದು ಇದರ ವಿಶೇಷ .
ದಿನದ 24 ಗಂಟೆಯೂ ಭಗವದ್ಗೀತೆಯನ್ನು ಕೇಳುತ್ತಿದ್ದ ಕಾಳಿ ಕಪಾಲಿ ಎನ್ನುವ ಗೋವಿನ ಹಾಲಿನಿಂದ ವಿಶೇಷವಾಗಿ ತುಪ್ಪ ತಯಾರಿಸಲಾಗಿದೆ. ಆ ವಿಶೇಷ ಕುಂಭದ ತುಪ್ಪವನ್ನು ರಾಮಲಲ್ಲಾನ ಪಟ್ಟಾಭಿಷೇಕದಂದು ನಡೆಯಲಿರುವ ಮೊದಲ ಆರತಿಗೆ ಬಳಕೆ ಮಾಡಲಾಗುತ್ತಿದೆ. ಅಲ್ಲದೇ ನೈವೇದ್ಯ, ಪಂಚಾಮೃತಕ್ಕೂ ಇದೇ ತುಪ್ಪ ಬಳಸಲು ಉದ್ದೇಶಿಸಲಾಗಿದೆ.