Advertisement
ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.ಬುಧವಾರ ರಾಯಚೂರಿನಲ್ಲಿ ಒಬ್ಬರು, ಚಿಕ್ಕೋಡಿಯಲ್ಲಿ ಇಬ್ಬರು, ಬಾಗಲಕೋಟೆ, ಕಲಬುರಗಿಯಲ್ಲಿ ತಲಾ ಮೂವರು. ಬಿಜಾಪುರ, ಕೊಪ್ಪಳ, ಶಿವಮೊಗ್ಗ, ಬಳ್ಳಾರಿಯಲ್ಲಿ ತಲಾ ನಾಲ್ವರು. ಹಾವೇರಿ, ಧಾರವಾಡದಲ್ಲಿ ತಲಾ ಐವರು, ದಾವಣಗೆರೆ, ಬೆಳಗಾವಿ, ಬೀದರ್‌ನಲ್ಲಿ ತಲಾ ಆರು ಮಂದಿ ಮತ್ತು ಉತ್ತರ ಕನ್ನಡದಲ್ಲಿ ಏಳು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಮನೆಯಿಂದ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದ 85 ವರ್ಷ ದಾಟಿದ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರು ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಏ. 13 ರಿಂದ ಮನೆ ಮತದಾನ ಚಾಲ್ತಿಯಲ್ಲಿದ್ದು ಶೇ. 91.31 ಮತದಾನವಾಗಿದೆ. ಗುರುವಾರ ಮನೆ ಮತದಾನಕ್ಕೆ ಕಡೆಯ ದಿನವಾಗಿದೆ. ಹಿರಿಯ ನಾಗರಿಕರಲ್ಲಿ 36,689 ಮಂದಿ ನೋಂದಾಯಿತ ಮತದಾರರಲ್ಲಿ 33,323 ಮಂದಿ (ಶೇ. 90.83) ಮಂದಿ ಮತ ಚಲಾಯಿಸಿದ್ದಾರೆ. ಇನ್ನು 11,920 ವಿಶೇಷ ಚೇತನ ಮತದಾರರಲ್ಲಿ 11,061 ಮಂದಿ (ಶೇ. 92.79) ಮತಚಲಾಯಿಸಿದ್ದಾರೆ. 48,609 ನೋಂದಾಯಿತ ಮತದಾರರಲ್ಲಿ 44,384 ಮಂದಿ ಮತ ಚಲಾಯಿಸಿದ್ದಾರೆ.
Related Articles
ಏಪ್ರಿಲ್ 26 ರಂದು ಮತದಾನ ನಡೆಯುವ ರಾಜ್ಯದ ಲೋಕಸಭಾ ಕ್ಷೇತ್ರಗಳ ಅಗತ್ಯ ಸೇವೆಗಳ ಇಲಾಖೆಗೆ ಸಂಬಂಧಿಸಿದ ಗೈರು ವರ್ಗದ ಮತದಾರರಿಗೆ ಅಂಚೆ ಮತದಾನವನ್ನು ಚಲಾಯಿಸಲು ಏ. 19 ರಿಂದ ಏ. 21ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಂಚೆ ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ.
Advertisement