Advertisement

LOVE ಮಾಡುವಂತೆ ಪೀಡಿಸಿದ್ದಲ್ಲದೆ ಸಾರ್ವಜನಿಕವಾಗಿ ಫ್ಲೆಕ್ಸ್ ಹಾಕಿದ್ದವನಿಗೆ 6 ತಿಂಗಳು ಜೈಲು

09:03 PM Aug 02, 2024 | Team Udayavani |

ದಾವಣಗೆರೆ: ಪ್ರೀತಿಸುವಂತೆ ಪೀಡಿಸಿದ್ದಲ್ಲದೆ ಫ್ಲೆಕ್ಸ್ ಹಾಕಿ ಮಾನಹಾನಿ ಮಾಡಿದ್ದವನಿಗೆ ದಾವಣಗೆರೆಯ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯ 6 ತಿಂಗಳು ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದೆ.

Advertisement

ದಾವಣಗೆರೆಯ ನಿಟುವಳ್ಳಿ ನಿವಾಸಿ ಅಲ್ತಾಫ್(22) ಶಿಕ್ಷೆಗೆ ಒಳಗಾದವನು. ಅಲ್ತಾಫ್ 16 ವರ್ಷದ ಅಪ್ರಾಪ್ತೆಯನ್ನ ಪ್ರೀತಿಸು ಎಂದು ಪೀಡಿಸಿ, ಚುಡಾಯಿಸುತ್ತಿದ್ದ. ಪ್ರೀತಿ ಮಾಡಲಿಲ್ಲ ಎಂದರೆ ಮುಖಕ್ಕೆ ಆಸಿಡ್ ಹಾಕಿ, ಅಪಹರಿಸಿ, ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದ. ಅಲ್ಲದೆ ಡಿಪಿಯಲ್ಲಿನ ಫೋಟೋ ತೆಗೆದುಕೊಂಡು ಹಾಗೂ ಅವನ ಫೋಟೋದ ಜೊತೆಗೆ ಸೇರಿಸಿ ಎಡಿಟ್ ಮಾಡಿ ಎಚ್. ಕೆ. ಆರ್ ಸರ್ಕಲ್ ಬಳಿ ಫ್ಲೆಕ್ಸ್ ಸಹ ಹಾಕಿದ್ದನು.

ಅಲ್ತಾಫ್ ವಿರುದ್ಧ ಬಾಲಕಿಯ ತಂದೆ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಮಹಿಳಾ ಪೊಲೀಸ್ ಠಾಣಾ ವೃತ್ತ ನಿರೀಕ್ಷಕಿ ಮಲ್ಲಮ್ಮ ಚೌಬೆ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1  ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ರಾಮ ನಾರಾಯಣ ಹೆಗಡೆ ರವರು ಆರೋಪಿಗೆ 6 ತಿಂಗಳು ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ,ದಂಡದ ಹಣವನ್ನು ಸಂತ್ರಸ್ತೆಗೆ ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸುನಂದಾ ಮಡಿವಾಳರ್ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next