ಮಧ್ಯಪ್ರದೇಶ : ಮದುವೆ ಕಾರ್ಯಕ್ರಮ ಮುಗಿಸಿ ಹಿಂತಿರುಗುವ ವೇಳೆ ಕಾರೊಂದು ಆವರಣವಿಲ್ಲದ ಬಾವಿಗೆ ಬಿದ್ದ ಪರಿಣಾಮ ಆರು ಮಂದಿ ಪ್ರಯಾಣಿಕರು ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡ ಘಟನೆ ಮಧ್ಯಪ್ರದೇಶದ ಛತ್ತರ್ ಪುರದ ಮಹಾರಾಜ್ ಪುರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಘಟನೆ ಮಹಾರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಠಾಣಾಧಿಕಾರಿ ಝೆಡ್ ವೈ ಖಾನ್ ಹೇಳಿಕೆಯಂತೆ : ಉತ್ತರ ಪ್ರದೇಶದ ಮಹೋಬಾದ ಸ್ವಾಸಾ ಗ್ರಾಮದಿಂದ ಬಂದಿದ್ದ 9 ಜನರಿದ್ದ ಕುಟುಂಬವೊಂದು ಮಂಗಳವಾರ ರಾತ್ರಿ ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ಸು ಹೊರಡುವ ವೇಳೆ ಮನೆಯ ಪಕ್ಕದಲ್ಲಿದ್ದ ಅವರಣವಿಲ್ಲದ ಬಾವಿಗೆ ಬಿದ್ದಿದೆ. ಕೂಡಲೇ ಸ್ಥಳೀಯರು ಸೇರಿ ಕ್ರೇನ್ ಮೂಲಕ ಕಾರನ್ನು ಮೇಲಕ್ಕೆ ಎತ್ತಿ ಒಂಬತ್ತು ಮಂದಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಆದರೆ ಅದರಲ್ಲಿ ಆರು ಮಂದಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ, ಮೂವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರೆದಿದೆ ಎಂದಿದ್ದಾರೆ.
ಇದನ್ನೂ ಓದಿ:ರಾಜಸ್ಥಾನ್ ಪಂಚಾಯತ್ ಚುನಾವಣೆ ಫಲಿತಾಂಶ: ಬಿಜೆಪಿಗೆ ಭರ್ಜರಿ ಜಯ, ಆಡಳಿತಾರೂಢ “ಕೈ”ಗೆ ಹಿನ್ನಡೆ
ಮೃತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ, ಮಹಾರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.