Advertisement

ಸಾಲ ಮತ್ತು ಹೂಡಿಕೆ ನೆಪದಲ್ಲಿ ಅಮಾಯಕರ ಹಣ ಸುಲಿಗೆ ಮಾಡಿದ್ದ ಚೀನಾ ಕಂಪನಿಗಳು

11:15 AM Apr 28, 2022 | Team Udayavani |

ಬೆಂಗಳೂರು: ಸಾಲ ಮತ್ತು ಹೂಡಿಕೆ ನೆಪದಲ್ಲಿ ಅಮಾಯಕ ಹಣ ಸುಲಿಗೆ ಮಾಡಿದ್ದ ಚೀನಾ ಮೂಲದ ಆ್ಯಪ್‌ ಕಂಪನಿಗಳು ಮತ್ತು ವಂಚಕರ ಬ್ಯಾಂಕ್‌ ಖಾತೆಯಲ್ಲಿದ್ದ 6.17 ಕೋಟಿ ರೂ. ಅನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

Advertisement

ಕಡಿಮೆ ಬಡ್ಡಿ ದರಕ್ಕೆ ಸುಲಭವಾಗಿ ಸಾಲ ಕೊಡುವುದಾಗಿ ಹೇಳಿ ಆ್ಯಪ್‌ನಲ್ಲಿ ಸಾಲ ಕೊಟ್ಟು ದುಬಾರಿ ಬಡ್ಡಿ ವಸೂಲಿ ಮಾಡುತ್ತಿದ್ದರು. ಅಲ್ಲದೆ, ಹೆಚ್ಚಿನ ಲಾಭಾಂಶ ಕೊಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ಈ ರೀತಿಯ ವಂಚನೆ ಸಂಬಂಧ ಮಹಾಲಕ್ಷ್ಮೀ ಲೇಔಟ್‌ ಮತ್ತು ಮಾರತ್‌ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹೆಚ್ಚಿನ ತನಿಖೆ ಆರಂಭಿಸಿದ ಇಡಿ ಅಧಿಕಾರಿಗಳು ತಪ್ಪಿತಸ್ಥ ಕಂಪನಿ ಮತ್ತು ವಂಚಕರ ಬ್ಯಾಂಕ್‌ ಖಾತೆಯಲ್ಲಿದ್ದ ಕೋಟ್ಯಂತ ರೂ. ಜಪ್ತಿ ಮಾಡಿದೆ. ಕೊರೊನಾ ಸಂದರ್ಭದಲ್ಲಿ ಕ್ಯಾಷ್‌ ಮಾಸ್ಟರ್‌, ಕ್ರೇಜಿ ರುಪೀ, ಕ್ಯಾಷಿನ್‌, ರುಪೇ ಮೆನು ಇತರೆ ಆ್ಯಪ್‌ಗಳು ಪ್ಲೇಸ್ಟೋರ್‌ಗಳಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಒಟಿಪಿ ನಮೂದಿಸಿ ಕೆಲವೇ ಕ್ಷಣಗಳ್ಲಲಿ ಲಕ್ಷಾಂತರ ರೂ. ಸಾಲ ಪಡೆಯಬಹುದು ಎಂದು ಜಾಹೀರಾತು ನೀಡುತ್ತಿದ್ದರು. ಅಲ್ಲದೆ, ಭಾರತ ದಲ್ಲಿ ಕಂಪನಿ ತೆರೆಯಲು ಸ್ಥಳೀಯ ಲೆಕ್ಕಪರಿಶೋಧಕರ ಸಹಾಯ ಪಡೆದು, ಭಾರತೀಯರ ಕೆವೈಸಿ ಮಾಡಿಸಿಕೊಂಡು ಬ್ಯಾಂಕ್‌ ಖಾತೆ ತೆರೆದಿದ್ದರು.

ಇದನ್ನೂ ಓದಿ:ಹರ್ಷ ಕೊಲೆ: ಜೈಲಿನ ಗೋಡೆಗೆ ತಲೆ ಜಜ್ಜಿಕೊಂಡು ಆರೋಪಿಗಳ ಹೈಡ್ರಾಮಾ

ಕಂಪನಿ ಮತ್ತು ಬ್ಯಾಂಕ್‌ ಖಾತೆಗಳನ್ನು ಚೀನಾದಲ್ಲಿ ಕುಳಿತು ಚೀನಿ ಪ್ರಜೆಗಳು ನಿರ್ವಹಿಸುತ್ತಿದ್ದರು. ಸಾರ್ವಜನಿಕರಿಗೆ ಸುಲಭವಾಗಿ ಸಾಲ ಕೊಟ್ಟು ಅವರಿಂದ ದುಬಾರಿ ಬಡ್ಡಿ ಮತ್ತು ಪ್ರಕ್ರಿಯೆ ಶುಲ್ಕ ನೆಪದಲ್ಲಿ ಸುಲಿಗೆ ಮಾಡುತ್ತಿದ್ದರು. ಸಾಲ ಕಟ್ಟಿದ್ದರು. ನಂತರ ಇತರೆ ಶುಲ್ಕದ ಹೆಸರಿನಲ್ಲಿ ದೌರ್ಜನ್ಯ ಎಸಗುತ್ತಿದ್ದರು. ಜತೆಗೆ ಆನ್‌ಲೈನ್‌ ವೇದಿ ಕೆಯಲ್ಲಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿತರ ಖಾತೆಯಲ್ಲಿದ್ದ ಹಣ ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next