Advertisement

Bengaluru Crime: ಕೆಎಎಸ್‌ ಅಧಿಕಾರಿ ಪತ್ನಿ ಶಂಕಾಸ್ಪದ ಸಾವು

10:05 AM May 12, 2024 | Kavyashree |

ಬೆಂಗಳೂರು: ಕೆಎಎಸ್‌ ಅಧಿಕಾರಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದ ಸಹಾಯಕ ಆಯುಕ್ತರೂ ಆಗಿರುವ ಶಿವಕುಮಾರ್‌ ಅವರ ಪತ್ನಿ, ಹೈಕೋರ್ಟ್‌ ವಕೀಲೆ ಚೈತ್ರಾವತಿ ಅನುಮಾನಾಸ್ವದ ರೀತಿಯಲ್ಲಿ ಮೃತಪಟ್ಟಿದ್ದು, ಮೃತದೇಹ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದೆ.

Advertisement

ಸಂಜಯನಗರದ ಅಣ್ಣಯ್ಯ ಲೇಔಟ್‌ ನಿವಾಸಿ ಚೈತ್ರಾವತಿ (34) ಮೃತರು.

ಈ ಸಂಬಂಧ ಚೈತ್ರಾ ಸಹೋದರ ನೀಡಿದ ದೂರಿನ ಮೇರೆಗೆ ಸಂಜಯನಗರ ಠಾಣೆಯಲ್ಲಿ ಸದ್ಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕುಣಿಗಲ್‌ ಮೂಲದ ಚೈತ್ರಾವತಿ ಮತ್ತು ಕೆಎಎಸ್‌ ಅಧಿಕಾರಿ ಶಿವಕುಮಾರ್‌ 2016ರಲ್ಲಿ ಮದುವೆಯಾಗಿದ್ದು, ದಂಪತಿಗೆ 5 ವರ್ಷದ ಒಂದು ಮಗು ಇದೆ. ಶಿವಕುಮಾರ್‌ ಕೆಐಎಡಿಬಿ ಯಲ್ಲಿ ಸಹಾಯಕ ಆಯುಕ್ತರಾಗಿದ್ದರೆ, ಚೈತ್ರಾವತಿ ಹೈಕೋರ್ಟ್‌ನಲ್ಲಿ ವಕೀಲೆಯಾಗಿದ್ದರು. ದಂಪತಿ ಸಂಜಯನಗರದ ಅಣ್ಣಯ್ಯ ಲೇಔಟ್‌ನ ಅಪಾರ್ಟ್‌ ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಇದೇ ಅಪಾರ್ಟ್‌ಮೆಂಟ್‌ನ ಮತ್ತೂಂದು ಫ್ಲ್ಯಾಟ್‌ನಲ್ಲಿ ಚೈತ್ರಾವತಿ ಸಹೋದರ ಮತ್ತು ಇನ್ನೊಂದು ಫ್ಲ್ಯಾಟ್‌ನಲ್ಲಿ ಸಂಬಂಧಿಗಳು ವಾಸವಾಗಿದ್ದರು.

ಶನಿವಾರ ಬೆಳಗ್ಗೆ ಪತಿ ಶಿವಕುಮಾರ್‌ ಕಾರ್ಯ ನಿಮಿತ್ತ ಹೊರಗಡೆ ಹೋಗಿದ್ದು, 10 ಗಂಟೆ ಸುಮಾರಿಗೆ ಪತಿ ಜತೆ ಮೊಬೈಲ್‌ ನಲ್ಲಿ ಮಾತನಾಡಿದ್ದ ಚೈತ್ರಾವತಿ, 10.30ರ ಸುಮಾರಿಗೆ ಸಹೋದರನ ಜತೆಯೂ ಮಾತಾಡಿದ್ದಾರೆ. ಆ ಬಳಿಕ 11 ಗಂಟೆ ಸುಮಾರಿಗೆ ವಿಚಾರ ವೊಂ ದರ ಕುರಿತು ಮಾತನಾಡಲು ಶಿವ ಕುಮಾರ್‌ ಪತ್ನಿಗೆ ಕರೆ ಮಾಡಿ ದ್ದಾರೆ. ಆಗ ಕರೆ ಸ್ವೀಕರಿಸಿಲ್ಲ. ಹೀಗಾಗಿ ಆಕೆಯ ಸಹೋದರನಿಗೆ ವಿಚಾರ ತಿಳಿಸಿದ್ದಾರೆ. ಅವರು ಕೂಡ ಸಹೋದರಿಗೆ ಕರೆ ಮಾಡಿದಾಗ ಸ್ಪಂದಿಸಿಲ್ಲ. ಹೀಗಾಗಿ ಅನುಮಾನಗೊಂಡು ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

Advertisement

ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ: ಮೃತರ ಸಹೋದರ ಮನೆ ಬಳಿ ಬಂದು ಕಿಟಕಿ ಮೂಲಕ ನೋಡಿದಾಗ ಚೈತ್ರಾವತಿ ಮೃತದೇಹ ಫ್ಯಾನ್‌ಗೆ ಸೀರೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿ ಯಲ್ಲಿ ಕಂಡು ಬಂದಿದೆ. ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆಗೆದು, ಒಳ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ.

ಹಳೆಯ ಡೆತ್‌ ನೋಟ್‌ ಪತ್ತೆ: ಪ್ರಕರಣ ದಾಖ ಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಚೈತ್ರಾ ವತಿಯ ಬೆಡ್‌ರೂಮ್‌ ಪರಿಶೀಲಿಸಿದಾಗ, ಒಂದು ಪುಟದ ಡೆತ್‌ನೋಟ್‌ ಪತ್ತೆಯಾಗಿದೆ. ಮಾ.11 ರಂದು ಬರೆದಿದ್ದ ಡೆತ್‌ನೋಟ್‌ ಪತ್ತೆಯಾಗಿದ್ದು, ಅದರಿಂದ ಚೈತ್ರಾವತಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಮತ್ತೂಂದೆಡೆ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರಾ ಎಂಬ ಅನುಮಾನ ಮೂಡಿದೆ. ವೃತ್ತಿಯಲ್ಲಿ ಹೈಕೋರ್ಟ್‌ ವಕೀಲೆ ಯಾಗಿದ್ದ ಚೈತ್ರಾವತಿ, ಪ್ರವೃತ್ತಿಯಲ್ಲಿ ರೂಪದರ್ಶಿಯಾಗಿಯೂ ಗುರುತಿಸಿಕೊಂಡಿ ದ್ದರು. ಈ ವಿಚಾರ ವಾಗಿ ಕುಟುಂಬದಲ್ಲಿ ವೈಮ ನಸ್ಸು ಇತ್ತೆ ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಪೊಲೀಸರು ಹೇಳಿದರು.

2 ತಿಂಗಳ ಹಳೆಯ ಡೆತ್‌ನೋಟ್‌ ಪತ್ತೆ: ಡಿಸಿಪಿ

ಚೈತ್ರಾರ ಮನೆಯಲ್ಲಿ ಮಾ.11ರಂದು ಬರೆದಿದ್ದ ಡೆತ್‌ನೋಟ್‌ ಪತ್ತೆಯಾಗಿದೆ. ಅದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ. ಒತ್ತಡ, ಮಾನಸಿಕ ಖನ್ನತೆ ಅಂತಾ ಬರೆದಿರುವುದು ಗೊತ್ತಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್‌ ತಿಳಿಸಿದ್ದಾರೆ. ಅದನ್ನು ಅವರೇ ಬರೆದಿದ್ದಾರಾ ಅಥವಾ ಬೇರೆ ಯಾರಾದರೂ ಬರೆದಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿನ ಕಾರಣ ತಿಳಿಯಲಿದೆ ಎಂದು ಹೇಳಿದರು.

ಸೂಕ್ತ ತನಿಖೆಗೆ ವಕೀಲರ ಸಂಘ ಆಗ್ರ: ಬ್ಯಾಡ್ಮಿಂಟನ್‌ ಆಟಗಾರ್ತಿ, ಹೈಕೋರ್ಟ್‌ ವಕೀಲೆಯಾಗಿದ್ದ ಚೈತ್ರಾವತಿ ಸಾವಿನ ಪ್ರಕರಣದ ತನಿಖೆಗೆ ಎಲ್ಲಾ ರೀತಿಯ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಬೆಂಗಳೂರು ವಕೀಲರ ಸಂಘ ಆಗ್ರಹಿಸಿದೆ. ಈ ಕುರಿತಂತೆ ಬೆಂಗಳೂರು ಪೊಲೀಸ್‌ ಆಯುಕ್ತರು ಮತ್ತು ಉತ್ತರ ವಿಭಾಗದ ಡಿಸಿಪಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ವಿವೇಕ ಸುಬ್ಟಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಹಾಗೂ ಖಜಾಂಚಿ ಎಂ.ಟಿ.ಹರೀಶ್‌, ಈ ಸಾವು ಇಡೀ ವಕೀಲ ವೃಂದಕ್ಕೆ ಆಘಾತವುಂಟು.

ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ. ಆಕೆಯ ಸ್ನೇಹಿತೆಯರಿಂದ ನಮಗೆ ತಿಳಿದು ಬಂದಿರುವಂತೆ ಚೈತ್ರಾ ಅತ್ಯಂತ ಧೈರ್ಯವಂತೆಯಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಮಹಿಳೆ ಆಗಿರಲಿಲ್ಲ. ಹೀಗಾಗಿ ಸೂಕ್ತ ತನಿಖೆ ನಡೆಸಬೇಕು ಎಂದು ಸಂಘ ಒತ್ತಾಯಿಸಿದೆ.

ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ : ಡೆತ್‌ ನೋಟ್‌

ಮೃತ ಚೈತ್ರಾವತಿ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ನಲ್ಲಿ, “ನನ್ನ ಪತಿ ತುಂಬಾ ಒಳ್ಳೆಯವರು, ನೀವೂ ಜೀವನವನ್ನು ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ಖನ್ನತೆಯಿಂದ ಬಳಲುತ್ತಿದ್ದೇನೆ. ಅದರಿಂದ ಹೊರ ಬರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ‌ನನ್ನ ಜೀವನವನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಎಂದು ಗೊತ್ತಿದೆ. ಆದರೂ ಆತ್ಮಹತ್ಯೆಯನ್ನು ಮಾಡಿಕೊಂಡು ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ’ ಎಂದು ಉಲ್ಲೇಖಿಸಲಾಗಿದೆ. ಆದರೆ ಯಾವ ವಿಚಾರಕ್ಕೆ ಖನ್ನತೆಗೆ ಒಳಗಾಗಿದ್ದರು ಎಂಬುದು ತಿಳಿದು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next