ಹೊಸದಿಲ್ಲಿ: ಆಗಸ್ಟ್-ಸೆಪ್ಟಂಬರ್ ಹೊತ್ತಿಗೆ 5ಜಿ ತಂತ್ರಜ್ಞಾನವು ಬೆಂಗಳೂರು ಸೇರಿ ದೇಶದ ಹಲವು ನಗರಗಳಲ್ಲಿ ಜಾರಿಯಾಗಲಿದೆ. ವರ್ಷಾಂತ್ಯಕ್ಕೆ 20-25 ಪ್ರಮುಖ ನಗರಗಳಲ್ಲಿ 5ಜಿ ತಂತ್ರಜ್ಞಾನ ಜಾರಿಗೊಳ್ಳಲಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಭಾರತ ಅಭಿವೃದ್ಧಿಪಡಿಸುತ್ತಿರುವ 4ಜಿ ಮತ್ತು 5ಜಿ ತಂತ್ರಜ್ಞಾನವನ್ನು ತಮ್ಮಲ್ಲೂ ಅಳವಡಿಸಿಕೊಳ್ಳಲು ಬೇರೆ ಬೇರೆ ರಾಷ್ಟ್ರಗಳು ಹೆಚ್ಚು ಉತ್ಸುಕವಾಗಿವೆ.
ನಮ್ಮಲ್ಲಿನ ಟೆಲಿಕಾಂ ಶುಲ್ಕವು ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರೀ ಪ್ರಮಾಣದಲ್ಲಿ ಕಡಿಮೆಯಿದೆ.
ಸುಮಾರು 10ಪಟ್ಟಿನಷ್ಟು ಕಡಿಮೆ ಶುಲ್ಕ ನಮ್ಮಲ್ಲಿದೆ. ಇದೇ ಟ್ರೆಂಡ್ 5ಜಿ ತಂತ್ರಜ್ಞಾನದಲ್ಲೂ ಮುಂದುವರಿಯಲಿದೆ.
5ಜಿ ತಂತ್ರಜ್ಞಾನಕ್ಕೆ ಭಾರತವು ವಿಶ್ವದಲ್ಲೇ ಅತ್ಯಂತ ಕಡಿಮೆ ಶುಲ್ಕ ವಿಧಿಸಲಿದೆ ಎಂದು ಅವರು ಮಾಹಿತಿ ಕೊಟ್ಟಿದ್ದಾರೆ.