ಮುಂಬಯಿ: ಕೊಚ್ಚಿ ನಗರ ಮತ್ತು ಗುರುವಾಯೂರ್ ದೇವಾಲಯದ ಆವರಣದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ಮೂಲಕ ಜಿಯೋದಿಂದ ಟ್ರೂ 5G ಸೇವೆಗಳನ್ನು ಕೇರಳದಲ್ಲಿ ಪ್ರಾರಂಭಿಸಲಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಕೊಚ್ಚಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಜಿಯೋ ಟ್ರೂ 5ಜಿ ಮತ್ತು ಜಿಯೋ ಟ್ರೂ 5ಜಿ ಚಾಲಿತ ವೈ-ಫೈ ಸೇವೆಗಳಿಗೆ ತಿರುವನಂತಪುರದಿಂದ ವರ್ಚುವಲ್ ಮೂಲಕ ಚಾಲನೆ ನೀಡಿದರು.
ಜಿಯೋ ಸಮುದಾಯ ಕ್ಲಿನಿಕ್ ವೈದ್ಯಕೀಯ ಕಿಟ್ ಮತ್ತು ಕ್ರಾಂತಿಕಾರಿ ಎಆರ್ (AR)- ವಿಆರ್ (VR) ಸಾಧನವಾದ ಜಿಯೋ ಗ್ಲಾಸ್ (Jio Glass) ಮೂಲಕ ಆರೋಗ್ಯ ಕ್ಷೇತ್ರದಲ್ಲಿ 5ಜಿ ಬಳಕೆಯ ಪ್ರಯೋಜನಗಳನ್ನು ಜಿಯೋ ಪ್ರದರ್ಶಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳದಲ್ಲಿ ಜಿಯೋದ ಟ್ರೂ 5ಜಿ ಸೇವೆಗಳು ಆರಂಭಗೊಂಡಿರುವುದು ಸಂತಸ ತಂದಿದೆ ಎಂದರು.
ಕೇರಳದಲ್ಲಿ 5ಜಿ ನೆಟ್‌ವರ್ಕ್ ಅನ್ನು ನಿಯೋಜಿಸಲು ಜಿಯೋ ರೂ. 6000 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ ಮತ್ತು ಇದು ನಮ್ಮ ರಾಜ್ಯದ ಬಗ್ಗೆ ಅವರ ಬದ್ಧತೆಯನ್ನು ತೋರಿಸುತ್ತದೆ. ಅವರು ಈ ತಿಂಗಳ ಅಂತ್ಯದ ವೇಳೆಗೆ ತಿರುವನಂತಪುರದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿದ್ದಾರೆ, ನಂತರ ಜನವರಿ 2023ರ ವೇಳೆಗೆ ತ್ರಿಶೂರ್, ಕೋಳಿಕ್ಕೋಡ್ ಮತ್ತು ಮಲಪ್ಪುರಂನಲ್ಲಿ ವಿಸ್ತರಿಸಲಿದ್ದಾರೆ. 2023ರ ಡಿಸೆಂಬರ್ ವೇಳೆಗೆ ಕೇರಳದ ಪ್ರತಿ ಹೋಬಳಿ ಮತ್ತು ತಾಲೂಕುಗಳು ಜಿಯೋ 5ಜಿ ಸೇವೆಗಳನ್ನು ಹೊಂದಿರುತ್ತವೆ ಎಂದರು.
ಈ ಸಂದರ್ಭದಲ್ಲಿ ಜಿಯೋ ವಕ್ತಾರರು ಮಾತನಾಡಿ, “ಕೇರಳದ ಕೊಚ್ಚಿ ಮತ್ತು ಗುರುವಾಯೂರು ದೇವಸ್ಥಾನದಲ್ಲಿ ಜಿಯೋ ಟ್ರೂ 5ಜಿ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ಶೀಘ್ರದಲ್ಲೇ ಜಿಯೋ ಟ್ರೂ 5ಜಿ ನೆಟ್‌ವರ್ಕ್ ಕೇರಳದ ಉದ್ದಗಲಕ್ಕೂ ವಿಸ್ತರಿಸಲಿದೆ. ಇಲ್ಲಿ ಇರುವ ಏಕೈಕ 5ಜಿ ನೆಟ್‌ವರ್ಕ್ ಜಿಯೋ ಆಗಿದೆ,” ಎಂದಿದ್ದಾರೆ.