Advertisement

56ನೇ ಸಂಸ್ಥಾಪನ ದಿನಾಚರಣೆ

01:36 PM Apr 24, 2021 | Team Udayavani |

ಮುಂಬಯಿ: ದಕ್ಷಿಣ ಕನ್ನಡ ಸಂಘ ಕಲುºರ್ಗಿ ಇದರ 56ನೇ ಸಂಸ್ಥಾಪನ ದಿನಾಚರಣೆಯು ಎ. 21ರಂದು ನಗರದ ರಾಮ ಮಂದಿರ ದಲ್ಲಿ ವಿಶೇಷ ಪೂಜೆಯೊಂದಿಗೆ ಸರಳವಾಗಿ ಆಚರಿಸಲಾಯಿತು.

Advertisement

ಸಂಘವನ್ನು 55 ವರ್ಷಗಳ ಹಿಂದೆ ರಾಮನವಮಿಯ ದಿನ ಹುಟ್ಟು ಹಾಕಲಾಗಿತ್ತು. ಪ್ರಸ್ತುತ ಸಂಘವು ಸಾಮಾಜಿಕ, ಸಾಂಸ್ಕೃತಿಕ ಸಂಘವಾಗಿ ಬೆಳೆದು ನಿಂತಿದೆ. ಶಿಕ್ಷಣ, ಆರೋಗ್ಯ, ಸಮಾಜ ಸೇವೆಯ ಮೂಲಕ ತನ್ನ ಸಮಾಜಮುಖೀ ಕಾರ್ಯಗಳನ್ನು ನೆರವೇರಿಸುತ್ತಿದೆ.

ಕೋವಿಡ್‌ ಹಿನ್ನಲೆ ಯಲ್ಲಿ ರಾಮ ಮಂದಿರದಲ್ಲಿ ಸಂಸ್ಥಾಪನ ದಿನದ ಅಂಗವಾಗಿ ಶ್ರೀರಾಮನಿಗೆ ವಿಶೇಷ ಪೂಜೆ ನೆರವೇರಿಸಿ ಲೋಕ ಕಲ್ಯಾಣಾರ್ಥಕ ವಾಗಿ ಪ್ರಾರ್ಥಿಸಲಾಯಿತು.ಪೂಜಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಘದ ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ ಇನ್ನಾ, ಅಧ್ಯಕ್ಷ ಡಾ| ಸದಾನಂದ ಪೆರ್ಲ, ಅನ್ನಬ್ರಹ್ಮ ಯೋಜನೆಯ ಸಂಚಾಲಕ ಶ್ರೀನಿವಾಸ ಆಚಾರ್ಯ, ಕಾರ್ಯದರ್ಶಿ ಲಕ್ಷ್ಮೀ ಪ್ರಶಾಂತ ಪೈ, ಸದಸ್ಯರಾದ ಪ್ರಭಾಕರ ಉಪಾಧ್ಯಾಯ, ಪ್ರಶಾಂತ ಪೈ, ಸುಶೀಲಾ ನಾಗೇಶ್‌, ಚಂದ್ರಕಲಾ, ರಾಮ ಮಂದಿರದ ವ್ಯವಸ್ಥಾಪಕ ನಿರಂಜನ ರಾವ್‌, ಅರ್ಚಕರಾದ ನಾಗರಾಜ್‌ ಆಚಾರ್‌ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ರಾಮದೇವರ ವಿಶೇಷ ಪ್ರಸಾದ, ಪಾನಕ, ಕೋಸುಂಬರಿ, ಪಾಯಸ ವಿತರಿಸಲಾಯಿತು.ಸಂಘದ ಸದಸ್ಯರೆಲ್ಲರೂ ಕೋವಿಡ್‌ ನಿಯಮ ಪಾಲಿಸಿ ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿ ವಹಿಸುವಂತೆ ಕೋರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next