Advertisement

India ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ 52,000 ಉದ್ಯೋಗ ಕಡಿತ: ವರದಿ

01:31 AM Aug 20, 2024 | Team Udayavani |

ಹೊಸದಿಲ್ಲಿ: 2023-24ನೇ ಸಾಲಿನಲ್ಲಿ ದೇಶದ ಚಿಲ್ಲರೆ ಮಾರಾಟ ಕ್ಷೇತ್ರದ ಕಂಪೆನಿಗಳು 52,000 ಉದ್ಯೋಗ ಕಡಿತ ಮಾಡಿವೆ! ಬೇಡಿಕೆ ಕುಸಿದಿದ್ದೇ ಇದಕ್ಕೆ ಕಾರಣ. ಹೀಗೆಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ರಿಲಯನ್ಸ್‌ ರಿಟೇಲ್‌, ಟೈಟಾನ್‌, ಪೇಜ್‌, ಸ್ಪೆನ್ಸರ್ಸ್‌, ರೇಮಂಡ್ಸ್‌ ಕಂಪನಿಗಳಲ್ಲಿ ಹೆಚ್ಚಿನ ಉದ್ಯೋಗಗಳು ಕಡಿತಗೊಂಡಿವೆ. ಕೃಷಿ ದೇಶದಲ್ಲಿ ಅತ್ಯಂತ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರವಾಗಿದೆ. ಅನಂ ತರದ ಸ್ಥಾನದಲ್ಲಿ ಚಿಲ್ಲರೆ ಮಾರುಕಟ್ಟೆ ಕ್ಷೇತ್ರವಿದೆ. 4.55 ಲಕ್ಷ ಮಂದಿ ಉದ್ಯೋಗಿಗಳಿದ್ದ ಕೃಷಿ ಮತ್ತು ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಬೇಡಿಕೆ ಕುಸಿದ ಕಾರಣ ಉದ್ಯೋಗಿಗಳ ಸಂಖ್ಯೆ 4.29 ಲಕ್ಷಕ್ಕೆ ಕುಸಿದಿದೆ. 2022ರ ದೀಪಾವಳಿ ಬಳಿಕ ಜನರು ಅನಗತ್ಯ ಖರ್ಚು ಗಳಿಗೆ ಕಡಿವಾಣ ಹಾಕಿದ್ದರಿಂದ ಈ ಬೆಳವಣಿ ಗೆಯಾಗಿದೆ. ಚಿಲ್ಲರೆ ಮಾರಾಟ ಕ್ಷೇತ್ರ ಬೆಳವಣಿಗೆ ಶೇ.4 ಕುಸಿತಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next