Advertisement

China ಗಡಿಯಿಂದ ಕೇವಲ 50 ಕಿ.ಮೀ. ದೂರ; ಪಿತ್ರೋಗಢ ಏರ್‌ಪೋರ್ಟ್‌ಗೆ ಅನುಮತಿ

12:20 AM Jun 15, 2023 | Team Udayavani |

ಡೆಹ್ರಾಡೂನ್‌/ಹೊಸದಿಲ್ಲಿ: ಚೀನ ಗಡಿಯ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಿಂದ 50 ಕಿ.ಮೀ. ದೂರದಲ್ಲಿರುವ ಉತ್ತರಾಖಂಡದ ಪಿತ್ರೋಗಢ ಜಿಲ್ಲೆಯಲ್ಲಿರುವ ನೈನಿ ಸೈನಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಪರವಾನಿಗೆ ನೀಡಿದೆ. ಇದರಿಂದಾಗಿ ಚೀನ ಗಡಿ ಭಾಗಕ್ಕೆ ಹೊಂದಿಕೊಂಡುವ ಜಿಲ್ಲೆಯ ಜನರಿಗೆ ಅನುಕೂಲವೂ ಆಗಲಿದೆ.

Advertisement

ವಾಣಿಜ್ಯ ವಿಮಾನಗಳು ಹಾರಾಟ ನಡೆಸಿದರೂ ವ್ಯೂಹಾತ್ಮಕವಾಗಿ ಪ್ರಮುಖ ಪ್ರದೇಶದಲ್ಲಿರುವ ನೈನಿ ಸೈನಿ ವಿಮಾನ ನಿಲ್ದಾಣವನ್ನು ಐಎಎಫ್ಗೆ ಹಸ್ತಾಂತರಿಸಲು ಉತ್ತರಖಂಡ ಸಚಿವ ಸಂಪುಟ ಈ ಹಿಂದೆಯೇ ಅನುಮತಿ ನೀಡಿತ್ತು. 1991ರಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಕೇಂದ್ರ ಸರಕಾರಿ ಪವನ್‌ ಹನ್ಸ್‌ ಹೆಲಿ ಸರ್ವೀಸಸ್‌ ಬಳಕೆ ಮಾಡುತ್ತಿದ್ದು, ಹೆಲಿಕಾಪ್ಟರ್‌ಗಳು ಟೇಕ್‌ ಆಫ್ ಮತ್ತು ಲ್ಯಾಂಡಿಂಗ್‌ ಮಾಡುತ್ತವೆ.

ವಿದ್ಯುತ್‌ ಸ್ಥಾವರ ಪ್ರಾಯೋಗಿಕ ಆರಂಭ: ಅರುಣಾಚಲ ಪ್ರದೇಶದ ಸುಬನ್ಸಿರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆಯಲ್ಲಿ ಪ್ರಾಯೋಗಿಕವಾಗಿ ವಿದ್ಯುತ್‌ ಉತ್ಪಾದನೆಯನ್ನು ಮುಂದಿನ ತಿಂಗಳಿಂದ ಆರಂಭ ಮಾಡಲಾಗುತ್ತದೆ.

2003ಲ್ಲಿ ಅದರ ಕಾಮಗಾರಿ ಶುರುವಾಗಿತ್ತು ಮತ್ತು ಕೇಂದ್ರ ಸರಕಾರ ವ್ಯಾಪ್ತಿಯ ರಾಷ್ಟ್ರೀಯ ಜಲವಿದ್ಯುತ್‌ ಆಯೋಗ ಅದರ ಹೊಣೆ ಹೊತ್ತುಕೊಂಡಿದೆ. ವಿದ್ಯುತ್‌ ಸ್ಥಾವರದ ಮೊದಲ ಘಟಕವನ್ನು ವರ್ಷಾಂತ್ಯಕ್ಕೆ ಲೋಕಾರ್ಪಣೆಗೊಳಿಸಲಾ ಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next