Advertisement
ಭೂಗತ ಸ್ಥಾವರದ ಸಾಮರ್ಥ್ಯಪೆಟ್ರೋಲಿಯಂ ಸಚಿವಾಲಯ ಅಧೀನದ ಐಎಸ್ಪಿಆರ್‌ಎಲ್ (ಇಂಡಿಯನ್ ಸ್ಟ್ರೆಟಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್) ವತಿಯಿಂದ ಗವಿ (ಕ್ಯಾವರ್ನ್)ಯಂತಹ ರಚನೆಯಲ್ಲಿ ದೇಶದ ವಿಶಾಖಪಟ್ಟಣ ಸಹಿತ ಮೂರು ಕಡೆಗಳಲ್ಲಿ ತೈಲ ಸಂಗ್ರಹಾಗಾರ ಸ್ಥಾವರ ನಿರ್ಮಾಣವಾಗಿದೆ. ಪಾದೂರು ಸ್ಥಾವರದಲ್ಲಿ 2.5 ಮಿಲಿಯ ಮೆ. ಟನ್ (ಸ್ಥಾವರ ನಿರ್ಮಾಣ ವೆಚ್ಚ 1,693 ಕೋ. ರೂ.), ಮಂಗಳೂರಿನ ಪೆರ್ಮುದೆ ಸ್ಥಾವರದಲ್ಲಿ 1.5 ಮಿಲಿಯ ಮೆ. ಟನ್ (1,227 ಕೋ.ರೂ.), ವಿಶಾಖಪಟ್ಟಣದಲ್ಲಿ 1.3 ಮಿಲಿಯ ಮೆ. ಟನ್ (1,178 ಕೋ. ರೂ.) ಸಹಿತ ಸುಮಾರು 5.3 ಮಿಲಿಯ ಮೆಟ್ರಿಕ್ ಟನ್ ತೈಲ ಸಂಗ್ರಹಿಸಲಾಗಿದೆ.