Advertisement
ಇದರ ತೂಕವೇ ಬರೋಬ್ಬರಿ ಐನೂರು ಕೆಜಿ ಇದ್ದು ವಿಶೇಷ ಮೆರವಣಿಗೆ ಮೂಲಕ ಗುರುವಾರ ಅಯೋಧ್ಯೆಯನ್ನು ತಲುಪಿದೆ.
ಗುಜರಾತ್‌ನ ಅಹಮದಾಬಾದ್‌ನಿಂದ ಈ ನಗಾರಿಯನ್ನು ಮೆರವಣಿಗೆ ಮೂಲಕ ಅಯೋಧ್ಯೆಗೆ ತರಲಾಗಿದೆ. ಸುಮಾರು ಐನೂರು ಕೆಜಿ ತೂಕ ಇರುವ ನಗಾರಿಯನ್ನು ಚಿನ್ನ ಮತ್ತು ಬೆಳ್ಳಿಯಿಂದ ಲೇಪಿಸಲಾಗಿದೆ. ರಚನೆಯಲ್ಲಿ ಕಬ್ಬಿಣ ಮತ್ತು ತಾಮ್ರದ ಫಲಕಗಳನ್ನು ಸಹ ಬಳಸಲಾಗಿದೆ. ಈ ನಗಾರಿಯನ್ನು ದಬ್ಗರ್ ಸಮುದಾಯದ ಜನರೇ ತಯಾರಿಸಿದ್ದಾರೆ. ಇದರ ಸದ್ದು ಕೆಲ ಕಿಲೋಮೀಟರ್ ದೂರದವರೆಗೆ ಕೇಳಲಿದೆಯಂತೆ. ಹಿಂದೂ ಸಂಸ್ಕೃತಿಯ ಪ್ರತೀಕವಾದ ಈ ಬೃಹತ್ ನಗಾರಿಯನ್ನು ರಾಮಮಂದಿರದಲ್ಲಿ ಸ್ಥಾಪಿಸಲು ಕರ್ಣಾವತಿ ಮಹಾನಗರದ ದರ್ಯಾಪುರದಲ್ಲಿ ನಿರ್ಮಿಸಲಾಗಿದೆ. ಗುಜರಾತ್ ವಿಶ್ವ ಹಿಂದೂ ಪರಿಷತ್ತಿನ ಪ್ರದೇಶ ಸಚಿವ ಅಶೋಕ್ ರಾವಲ್ ಅವರು ನಗಾರಿಯನ್ನು ಸ್ವೀಕರಿಸಲು ಶಿಫಾರಸು ಮಾಡಿ ಪತ್ರವನ್ನು ಕಳುಹಿಸಿದ್ದಾರೆ. ಅದರಂತೆ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ನಗಾರಿಯನ್ನು ಸ್ವೀಕರಿಸಿ ರಾಮಮಂದಿರದ ಸೂಕ್ತವಾದ ಸ್ಥಳದಲ್ಲಿ ಇರಿಸಲಾಗುವುದು ಎಂದು ಹೇಳಿದ್ದಾರೆ.
Related Articles
Advertisement