Advertisement

Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್‌ 500 ಕೋಟಿ ರೂ. ಖರ್ಚು’

08:28 PM Apr 17, 2024 | Team Udayavani |

ವಿಜಯಪುರ: ಕರ್ನಾಟಕದ 28 ಸ್ಥಾನಗಳ ಪೈಕಿ ಕಾಂಗ್ರೆಸ್‌ ಗೆದ್ದಿರುವುದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರ. ಈ ಬಾರಿ ಅದೊಂದು ಕ್ಷೇತ್ರವನ್ನೇ ಉಳಿಸಿಕೊಳ್ಳಲು 500 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದು ಬಿಜೆಪಿ ಕರ್ನಾಟಕ ಉಸ್ತುವಾರಿ ರಾಧಾಮೋಹನ ಅಗರವಾಲ್‌ ವಿಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಮಪತ್ರ ಸಲ್ಲಿಕೆಗೂ ಹಣವಿಲ್ಲದ ಪ್ರಾಮಾಣಿಕ ವೈದ್ಯ ಡಾ|ಮಂಜುನಾಥ ಅವರಿಗೆ ಟಿಕೆಟ್‌ ನೀಡಿದ್ದೇವೆ. ನಮ್ಮ ಅಭ್ಯರ್ಥಿಗೆ ವಾಸಕ್ಕೆ ಒಂದು ಉತ್ತಮ ಮನೆಯೂ ಇಲ್ಲ. ಅಂಥ ವ್ಯಕ್ತಿಯನ್ನು ಬಿಜೆಪಿ ಕಣಕ್ಕಿಳಿಸಿದೆ. ನನ್ನ ಬಳಿ ಚುನಾವಣೆ ಮಾಡುವಷ್ಟು ಹಣ ಇಲ್ಲ ಎಂದು ಡಾ|ಮಂಜುನಾಥ ಹೇಳಿದಾಗ ನಿಮ್ಮ ಚುನಾವಣೆಗೆ ನಾವು ಹಣ ಕೊಡುತ್ತೇವೆ ಎಂದು ಓರ್ವ ಪ್ರಾಮಾಣಿಕ ಸೇವಕನಿಗೆ ಟಿಕೆಟ್‌ ನೀಡಿದ್ದೇವೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next