Advertisement

ಲಿಫ್ಟ್ ನೀಡುವುದಾಗಿ ಹೇಳಿ 50 ವರ್ಷದ ಮಹಿಳೆಯ ಗ್ಯಾಂಗ್ ರೇಪ್: ವಿಡಿಯೋ ವೈರಲ್, ಆರು ಜನರ ಬಂಧನ

11:30 AM Aug 23, 2020 | keerthan |

ಪಾಟ್ನಾ ( ಬಿಹಾರ): 50 ವರ್ಷದ ಪ್ರಾಯದ ಮಹಿಳೆಯೋರ್ವರನ್ನು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬಿಹಾರ ರಾಹ್ಯದ ಪಾಟ್ನಾದಲ್ಲಿ ನಡೆದಿದೆ.

Advertisement

ಘಟನೆಯ ವಿಡಿಯೋ ವೈರಲ್ ಆಗಿದ್ದು, ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಕೇವಲ ಎಂಟು ಗಂಟೆಯಲ್ಲಿ ಆರು ಮಂದಿಯನ್ನು ಬಂಧಿಸಿದ್ದಾರೆ.

ಈ ಅಮಾನುಷ ಘಟನೆ ಎರಡು ವಾರಗಳ ಹಿಂದೆ ನಡೆದಿದೆ ಎನ್ನಲಾಗಿದೆ. ಏಳು ಮಂದಿ ದುರುಳರು 50 ವರ್ಷದ ಮಹಿಳೆಯ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಶುಕ್ರವಾರ ಈ ವಿಡಿಯೋ ವೈರಲ್ ಆಗಿತ್ತು. ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದು, ಇನ್ನೂ ಓರ್ವನ ಬಂಧನ ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸೆ.30ರೊಳಗೆ ತೀರ್ಪು ನೀಡುವಂತೆ ಸುಪ್ರೀಂ ಆದೇಶ

ಮಹಿಳೆಯು ಪಾಟ್ನಾದಿಂದ ಗೌರಿಚಾಕ್ ಗೆ ತೆರಳುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಯುವಕನೋರ್ವ ನಾನು ಇದೇ ದಾರಿಯಲ್ಲಿ ಹೋಗುತ್ತಿದ್ದು, ಲಿಫ್ಟ್ ನೀಡುತ್ತೇನೆ ಎಂದು ಪುಸಲಾಯಿಸಿದ್ದ. ನಂತರ ಮಹಿಳೆಯನ್ನು ಪನ್ಪುನ್ ನದಿ ಬಳಿಗೆ ಕರೆದೊಯ್ದ ಯುವಕ, ಅಲ್ಲಿ ಅದಾಗಲೇ ನೆರೆದಿದ್ದ ಇತರರೊಂದಿಗೆ ಸೇರಿ ಅನಾಚಾರಗೈದಿದ್ದಾರೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ಹೇಳಿಕೆ ನೀಡಿದ್ದು, ಆರೋಪಿಗಳೆಲ್ಲಾ ಹತ್ತಿರದ ಗ್ರಾಮದವರಾಗಿದ್ದಾರೆ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಆರು ರಾಜಕೀಯ ಪಕ್ಷಗಳ ಮೈತ್ರಿ: ಏನಿದು ಹೊಸ ಬೆಳವಣಿಗೆ?

Advertisement

Udayavani is now on Telegram. Click here to join our channel and stay updated with the latest news.

Next