Advertisement

Pakistan; ಭದ್ರತಾ ಪಡೆಗಳ ಗುಂಡಿಗೆ ಕನಿಷ್ಠ ಐವರು ವಾಂಟೆಡ್ ಉಗ್ರರು ಹತ

05:40 PM Dec 09, 2023 | Team Udayavani |

ಪೇಶಾವರ: ಪ್ರಕ್ಷುಬ್ಧ ವಾಯುವ್ಯ ಪಾಕಿಸ್ಥಾನದಲ್ಲಿ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಐವರು ವಾಂಟೆಡ್ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪಾಕ್ ಸೇನೆ ಶನಿವಾರ ತಿಳಿಸಿದೆ.

Advertisement

ದಕ್ಷಿಣ ವಜಿರಿಸ್ಥಾನದ ಗಡಿಯಲ್ಲಿ ಶುಕ್ರವಾರ ಘಟನೆ ಸಂಭವಿಸಿದ್ದು, ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯನ್ನು ತಿಳಿದು ಸೇನಾಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಮಾರಣಾಂತಿಕ ಗುಂಡಿನ ಚಕಮಕಿಯಲ್ಲಿ ಐವರು ಉಗ್ರರು ಹತರಾಗಿದ್ದಾರೆ ಎಂದು ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ ತಿಳಿಸಿದೆ.ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.ಹತ ಉಗ್ರರು ಸೇನಾ ಪಡೆಗಳ ಮೇಲಿನ ದಾಳಿ, ಗುರಿ ಹತ್ಯೆಗಳು ಮತ್ತು ಹಣ ಸುಲಿಗೆಗಾಗಿ ಮೋಸ್ಟ್ ವಾಂಟೆಡ್ ಆಗಿದ್ದರು.

ಸ್ಥಳದಲ್ಲಿ ಇನ್ನೂ ಹೆಚ್ಚಿನ ಭಯೋತ್ಪಾದಕರು ಇರುವ ಸಾಧ್ಯತೆಯಿರುವುದರಿಂದ ಈ ಪ್ರದೇಶದಲ್ಲಿ ಕಾರ್ಯಾಚರಣೆಗಳು ಮುಂದುವರೆದಿದೆ. ಕಳೆದ ವರ್ಷ ನಿಷೇಧಿತ ಉಗ್ರ ಸಂಘಟನೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ಥಾನ ತನ್ನ ಕದನ ವಿರಾಮವನ್ನು ಕೊನೆಗೊಳಿಸಿದ ನಂತರ ಪಾಕಿಸ್ಥಾನ ನದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ವಿಶೇಷವಾಗಿ ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿ ಸ್ಥಾನ್ ಪ್ರಾಂತ್ಯಗಳಲ್ಲಿ ಉಗ್ರ ಚಟುವಟಿಕೆಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next