Advertisement

ಒಂದೇ ಪಾತ್ರೆಯಲ್ಲಿ 5 ಸಾವಿರ ಕೆ.ಜಿ. ಕಿಚಡಿ

12:30 AM Jan 07, 2019 | Team Udayavani |

ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ದಲಿತ ಸಮುದಾಯವನ್ನು ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ರವಿವಾರ ರಾಮ್‌ಲೀಲಾ ಮೈದಾನದಲ್ಲಿ ಬೃಹತ್‌ ಭೀಮ್‌ ಮಹಾಸಂಗಮ್‌ ವಿಜಯ ಸಂಕಲ್ಪ ರ‍್ಯಾಲಿಯನ್ನು ಆಯೋಜಿಸಿತ್ತು. ಇದರ ವಿಶೇಷತೆಯೇನೆಂದರೆ, ಈ ರ‍್ಯಾಲಿ ವೇಳೆ ಬರೋಬ್ಬರಿ 5 ಸಾವಿರ ಕೆ.ಜಿ. ಕಿಚಡಿಯನ್ನು ತಯಾರಿಸಲಾಗಿತ್ತು.

Advertisement

ಅಷ್ಟೂ ಕಿಚಡಿಯನ್ನು ಒಂದೇ ಪಾತ್ರೆಯಲ್ಲಿ ತಯಾರಿಸುವ ಮೂಲಕ ಗಿನ್ನೆಸ್‌ ದಾಖಲೆಯನ್ನೂ ಮಾಡಲಾಯಿತು. ದೆಹಲಿಯಲ್ಲಿ ಪಕ್ಷವು ದಲಿತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ರ‍್ಯಾಲಿ ಆಯೋಜಿಸಲಾಗಿತ್ತು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೂ ಇದರಲ್ಲಿ ಪಾಲ್ಗೊಂಡು ಮಾತನಾಡಿದರು. ಕಿಚಡಿಗೆ ಅಗತ್ಯವಿದ್ದ ಅಕ್ಕಿ ಹಾಗೂ ಕಾಳುಗಳನ್ನು 3 ಲಕ್ಷ ದಲಿತರ ಮನೆಗಳಿಂದಲೇ ಸಂಗ್ರಹಿಸಲಾಗಿತ್ತು. ಕಿಚಡಿ ತಯಾರಿಸಲೆಂದು 20 ಅಡಿ ಸುತ್ತಳತೆಯ, 6 ಅಡಿ ಆಳದ ಬೃಹತ್‌ ಪಾತ್ರೆಯೊಂದನ್ನು ವಿಶೇಷವಾಗಿ ಸಿದ್ಧಪಡಿಸಲಾಗಿತ್ತು ಎಂದು ದೆಹಲಿ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಮೋಹನ್‌ಲಾಲ್‌ ಗಿಹಾರಾ ಹೇಳಿದ್ದಾರೆ.

ಈ ಹಿಂದೆ 2017ರಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯ ಮತ್ತು ಬಾಣಸಿಗ ಸಂಜೀವ್‌ ಕಪೂರ್‌ ಅವರು 918.8 ಕೆ.ಜಿ. ಕಿಚಡಿ ತಯಾರಿಸಿ ವಿಶ್ವ ದಾಖಲೆ ಮಾಡಿದ್ದರು. ಈಗ ಬಿಜೆಪಿ ಆ ದಾಖಲೆಯನ್ನು ಸರಿಗಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next