Advertisement

ಮೈಸೂರು ನಗರಕ್ಕೆ 5 ಸ್ಟಾರ್‌ ಗರಿಮೆ

06:14 AM May 20, 2020 | Lakshmi GovindaRaj |

ಮೈಸೂರು: ಭಾರತ ಸರ್ಕಾರ ನಗರಾಭಿವೃದ್ಧಿ ಮಂತ್ರಾಲಯವು ನಡೆಸುವ ಸ್ವಚ್ಛ ಭಾರತ ಅಭಿಯಾನದ ಸಮೀಕ್ಷೆಯಲ್ಲಿ ದೇಶದ ತ್ಯಾಜ್ಯ ಮುಕ್ತ ನಗರಗಳ ಪೈಕಿ ಮೈಸೂರು ನಗರಕ್ಕೆ 5 ಸ್ಟಾರ್‌ ಗರಿಮೆ ನೀಡಲಾಗಿದೆ ಎಂದು ಮಹಾನಗರ   ಪಾಲಿಕೆಯ ಮೇಯರ್‌ ತಸ್ನೀಂ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಡೆಸಿದ ತ್ಯಾಜ್ಯ ಮುಕ್ತ ನಗರಗಳ ಸಮೀಕ್ಷೆಯಲ್ಲಿ ದೇಶದ 1435  ನಗರಗಳು ಭಾಗವಹಿಸಿದ್ದು,  ತ್ಯಾಜ್ಯ ಮುಕ್ತ ನಗರಕ್ಕೆ ನಿಗಧಿಪಡಿಸಿದ 1000 ಅಂಕಗಳಲ್ಲಿ ಮೈಸೂರು 800 ಅಂಕ ಪಡೆದು 5 ಸ್ಟಾರ್‌ ಗರಿಮೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಒಟ್ಟು 141 ನಗರಗಳು ತ್ಯಾಜ್ಯಮುಕ್ತ ನಗರಗಳಾಗಿವೆ. ಇದರಲ್ಲಿ ಮೈಸೂರು ನಗರ ಸೇರಿದಂತೆ ಆರು ನಗರಗಳು ಮಾತ್ರ 5 ಸ್ಟಾರ್‌ ಗರಿಮೆ ಪಡೆದುಕೊಂಡಿವೆ ಎಂದರು. ಮೈಸೂರು ನಗರಕ್ಕೆ ತ್ಯಾಜ್ಯ ಮುಕ್ತ ನಗರದ ಗರಿಮೆ ಉಳಿದುಕೊಳ್ಳಲು ಹಗಲಿರುಳು ಶ್ರಮಿಸಿದ ಪೌರಕಾರ್ಮಿಕರು, ನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ  ಸಿಬ್ಬಂದಿಗಳು, ಸ್ವಚ್ಛತಾ ರಾಯಭಾರಿಗಳು, ಸಂಘ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಈ ವೇಳೆ ಅಭಿನಂದನೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಮೇಯರ್‌ ಸಿ.ಶ್ರೀಧರ್‌, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ  ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಗೋಪಿ, ನಗರ ಪಾಲಿಕೆ ಸದಸ್ಯರಾದ ಪ್ರೇಮ, ಸುಬ್ಬಯ್ಯ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್‌, ಡಾ.ನಾಗರಾಜು ಉಪಸ್ಥಿತರಿದ್ದರು.

ನಗರದ ಪ್ರವಾಸಿ ತಾಣಗಳು ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತಿದೆ. ದಕ್ಷಿಣ ಭಾರತದಲ್ಲೇ 5 ಸ್ಟಾರ್‌ ಪಡೆದಿರುವ ಏಕೈಕ ನಗರ ನಮ್ಮ ಮೈಸೂರಾಗಿದೆ.
-ಗುರುದತ್‌ ಹೆಗೆಡೆ, ಮಹಾನಗರ ಪಾಲಿಕೆಯ ಆಯುಕ್ತ

Advertisement
Advertisement

Udayavani is now on Telegram. Click here to join our channel and stay updated with the latest news.

Next