Advertisement
ಕೇರಳದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರವಿವಾರ ರಾತ್ರಿ ಬೆಳಗಾಗುವುದರೊಳಗೆ ಹಲವು ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಉಂಟಾಗಿ, ಅನೇಕ ಗ್ರಾಮಗಳು ಜಲಾವೃತಗೊಂಡಿವೆ. ತೋಡುಪ್ಪುಳದಲ್ಲಿ ಸೋಮವಾರ ಸಂಭವಿಸಿದ ಭೂಕುಸಿತಕ್ಕೆ ಒಂದೇ ಕುಟುಂಬದ ಐವರು ಬಲಿಯಾಗಿದ್ದಾರೆ.
ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿಯೊಂದಕ್ಕೆ ಗೋವುಗಳು ಸೇರಿದಂತೆ 15 ಜಾನುವಾರುಗಳನ್ನು ನೂಕಿರುವಂಥ ವೀಡಿಯೋ ವೈರಲ್ ಆಗಿದೆ. ಗುಂಪೊಂದು ಈ ಜಾನುವಾರುಗಳನ್ನು ನದಿಗೆ ದೂಡಿದ್ದು, ಅವುಗಳು ಹೊರಬರಲು ಪ್ರಯತ್ನಿಸಿದರೂ ಮತ್ತೆ ಸುತ್ತುವರಿದು ಅವುಗಳನ್ನು ಕೊಚ್ಚಿಹೋಗುವಂತೆ ಮಾಡಲಾಗಿದೆ. ಪ್ರಕರಣ ಸಂಬಂಧ ಲಾಲ್‌ಭಾಯಿ ಪಟೇಲ್, ರಾಂಪಾಲ್, ಸುನೀಲ್ ಪಾಂಡೆ ಸೇರಿ 6ಕ್ಕೂ ಅಧಿಕ ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Related Articles
Advertisement
ನದಿಯಲ್ಲಿ ಕೊಚ್ಚಿ ಹೋದ ಯುವಕರು
ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿರುವ ಯಮುನಾ ನದಿಯಲ್ಲಿ ಶ್ರೀಕೃಷ್ಣನ ವಿಗ್ರಹ ವಿಸರ್ಜನೆಗೆಂದು ಹೊರಟಿದ್ದ ಐವರು ಯುವ ಕರು ಸೋಮವಾರ ಕೊಚ್ಚಿಹೋದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ವಿಗ್ರಹ ವಿಸರ್ಜನೆ ಬಳಿಕ ನದಿಯಲ್ಲೇ ಸ್ನಾನಕ್ಕಿಳಿದ ಅವರು ನೀರಿನ ರಭಸದಿಂದ ಮುಳುಗಿ ಸಾವ ನ್ನಪ್ಪಿ ದ್ದಾರೆ. ಉತ್ತರಾಖಂಡದ ಡೆಹ್ರಾ ಡೂನ್‌ನ ರಾಜ್‌ಪುರ ದಲ್ಲಿ ಭಾರೀ ಮಳೆ ಯಿಂದಾಗಿ ಮನೆಯೊಂದು ಕುಸಿದುಬಿದ್ದಿದ್ದು, ಇಬ್ಬರು ಮಹಿಳೆಯರು ಮತ್ತು ಒಂದು ಮಗು ಮೃತಪಟ್ಟಿದೆ. ಬರಪೀಡಿತ ಪ್ರದೇಶಕ್ಕೆ ಪ್ರವಾಹ ಎಚ್ಚರಿಕೆ!
ಹವಾಮಾನ ವೈಪರೀತ್ಯದ ವಿಪರ್ಯಾಸಕ್ಕೆ ಮತ್ತೂಂದು ಉದಾಹರಣೆ ಎಂಬಂತೆ ಈ ತಿಂಗಳಿಡೀ ಬರಗಾಲದಿಂದ ನಲುಗಿರುವ ಚೀನದ ನೈಋತ್ಯ ಭಾಗದಲ್ಲಿ ಏಕಾಏಕಿ ಭಾರೀ ಮಳೆ ಹಾಗೂ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಚೋಂಗ್‌ಖೀಂಗ್ ಮತ್ತು ಸಿಚುವಾನ್ ಪ್ರಾಂತ್ಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಕಾಏಕಿ ಮಳೆ ಸುರಿಯಲಾರಂಭಿಸಿದ್ದು, ಪ್ರವಾಹದ ಭೀತಿ ಎದುರಾಗಿದೆ. ಈ ತಿಂಗಳ ಆರಂಭದಲ್ಲಿ ಇಲ್ಲಿನ ಜಲಾಶಯಗಳೆಲ್ಲ ಬತ್ತಿ ಹೋಗಿ, ವಿದ್ಯುತ್‌ಗೆ ತೀವ್ರ ಅಭಾವ ಉಂಟಾದ ಹಿನ್ನೆಲೆಯಲ್ಲಿ ಸರಕಾರವು “ರಾಷ್ಟ್ರೀಯ ಬರ ತುರ್ತು ಪರಿಸ್ಥಿತಿ’ ಘೋಷಿಸಿತ್ತು.