Advertisement

ಕಸಾಪಗೆ 5 ಲಕ್ಷ ರೂ. ಅನುದಾನ: ನಮೋಶಿ

09:28 AM Feb 22, 2022 | Team Udayavani |

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿ ಕಾರ್ಯಗಳಿಗಾಗಿ ತಮ್ಮ ಅನುದಾನದಲ್ಲಿ 5 ಲಕ್ಷ ರೂ. ನೀಡುವುದಾಗಿ ವಿಧಾನ ಪರಿಷತ್‌ ಸದಸ್ಯ ಶಶೀಲ್‌ ಜಿ.ನಮೋಶಿ ಪ್ರಕಟಿಸಿದರು.

Advertisement

ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಕ್ರಿಯಾಶೀಲ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಕಸಾಪ ಪದಾಧಿಕಾರಿಗಳು ಹಾಗೂ ತಾಲೂಕು ಘಟಕದ ಅಧ್ಯಕ್ಷರುಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಅಭಿವೃದ್ಧಿ ಕೆಲಸಗಳು ಕೈಗೆತ್ತಿಕೊಳ್ಳುವ ಸಲುವಾಗಿ ಪ್ರಸ್ತಾವನೆ ಸಿದ್ಧಪಡಿಸಿ ಕಳುಹಿಸಿಕೊಟ್ಟರೆ ಅನುದಾನ ಮಂಜೂರು ಮಾಡುವುದಾಗಿ ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಸಾರಂಗಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಸಣ್ಣ-ಪುಟ್ಟ ನಿಗಮಗಳ ಅಧ್ಯಕ್ಷರುಗಳಿಗೆ ನೀಡಿದಂತೆ ರಾಜ್ಯದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರುಗಳಿಗೆ ಸರ್ಕಾರದಿಂದ ವಾಹನ ಸೌಲಭ್ಯ ಒದಗಿಸಿಕೊಡಬೇಕು. ಆಗದಿದ್ದರೆ ನಮ್ಮ ಶ್ರೀಮಠದಿಂದಲೇ ದೇಣಿಗೆ ಸಂಗ್ರಹಿಸುವ ಕೆಲಸಕ್ಕೆ ಕೈಜೋಡಿಸುವೆ. ತಾವು 11 ಸಾವಿರ ದೇಣಿಗೆ ಕೊಡಲು ಸಿದ್ಧ ಎಂದು ನುಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿ, ಜಿಲ್ಲೆಯನ್ನು ಸಾಂಸ್ಕೃತಿಕ ಜಿಲ್ಲೆಯನ್ನಾಗಿಸುವ ಸಂಕಲ್ಪ ಹೊಂದಲಾಗಿದ್ದು, ಮುಂದಿನ ದಿನಗಳಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳು ಇನ್ನಷ್ಟು ಕ್ರಿಯಾಶೀಲಗೊಳಿಸಲಾಗುವುದು ಎಂದರು.

ರಾಜ್ಯ ವಿಜ್ಞಾನ ಪರಿಷತ್‌ ರಾಜ್ಯಾಧ್ಯಕ್ಷ ಗಿರೀಶ ಕಡ್ಲೆàವಾಡ, ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಡಾ| ಸದಾನಂದ ಪೆರ್ಲ, ಕ್ರಿಯಾಶೀಲ ಗೆಳೆಯರ ಬಳಗದ ಪ್ರಧಾನ ಸಂಚಾಲಕರಾದ ಜಗದೀಶ ಮರಪಳ್ಳಿ, ಮುಡುಬಿ ಗುಂಡೇರಾವ, ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ಯಶವಂತರಾಯ ಅಷ್ಠಗಿ, ಕಲ್ಯಾಣಕುಮಾರ ಶೀಲವಂತ, ಡಾ| ಕೆ.ಗಿರಿಮಲ್ಲ, ಶಕುಂತಲಾ ಪಾಟೀಲ ಜಾವಳಿ, ಸ್ನೇಹಲತಾ ಕಮಕನೂರ, ರೇಣುಕಾ ಎನ್‌., ಆಕಾಂಕ್ಷಾ ಪುರಾಣಿಕ, ಚೇತನ ಕೋಬಾಳ, ಪರಮೇಶ್ವರ ಶಟಕಾರ, ಸಿದ್ಧಲಿಂಗ ಬಾಳಿ, ವಿನೋದ ಜೇನವೇರಿ, ಶಕೀಲ್‌ ಅಹ್ಮದ್‌ ಮಿಯ್ನಾ, ಶಿಲ್ಪಾ ಜೋಷಿ, ಹೆಚ್‌.ಎಸ್‌.ಬರಗಾಲಿ, ರಾಜೇಂದ್ರ ತೆಗನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next