ಮುಂಬೈ: 127 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಗೋದ್ರೆಜ್ ಸಮೂಹ ಸಂಸ್ಥೆ ಇಬ್ಭಾಗವಾಗಲು ನಿರ್ಧರಿಸಿದ್ದು, ಅದರಂತೆ ಆದಿ ಗೋದ್ರೆಜ್ ಮತ್ತು ಸಹೋದರ ನಾದಿರ್ ಗೋದ್ರೆಜ್ ಪ್ರತ್ಯೇಕವಾಗಿದ್ದು, ಸಂಸ್ಥೆಯ ಮುಖ್ಯಸ್ಥರಾಗಿ ನೇಮಕಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
ಗೋದ್ರೆಜ್ ಎಂಟರ್ ಪ್ರೈಸಸ್ ಹಾಗೂ ಗೋದ್ರೆಜ್ ಇಂಡಸ್ಟ್ರೀಸ್ ಆಗಿ ಇನ್ಮುಂದೆ ಕಾರ್ಯನಿರ್ವಹಿಸಲಿದೆ ಎಂದು ಷೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ವಿವರ ನೀಡಿರುವುದಾಗಿ ವರದಿ ಹೇಳಿದೆ.
ಆದಿ ಗೋದ್ರೆಜ್ (82 ವರ್ಷ) ಮತ್ತು ಸಹೋದರ ನಾದಿರ್ ಗೋದ್ರೆಜ್ (73ವರ್ಷ) ಹಾಗೂ ಸೋದರ ಸಂಬಂಧಿಯಾದ ಜಮ್ಶೆಡ್ ಗೋದ್ರೆಜ್ (75ವರ್ಷ), ಸ್ಮಿತಾ ಗೋದ್ರೆಜ್ (74 ವರ್ಷ) ನಡುವೆ ಕಂಪನಿಯ ಪಾಲು ಹಂಚಿಕೆಯಾಗಿದೆ ಎಂದು ಸಮೂಹ ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಗೋದ್ರೆಜ್ ಎಂಟರ್ ಪ್ರೈಸಸ್ ಗ್ರೂಪ್ ಗೆ ಜಮ್ಶೆಡ್ ಗೋದ್ರೆಜ್ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾಗಿದ್ದು, ಅವರ ಸಹೋದರಿ ಸ್ಮಿತಾ ಮಗಳಾದ ನೈರಿಕಾ ಹೋಳ್ಕರ್ (42ವರ್ಷ) ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮುಂಬೈ ಕೇಂದ್ರ ಸ್ಥಾನದಲ್ಲಿರುವ 3,400 ಎಕರೆ ಭೂಮಿಯ ಒಡೆತನ ಕೂಡಾ ಈ ಕುಟುಂಬಕ್ಕೆ ಸೇರಿರುವುದಾಗಿ ವರದಿ ತಿಳಿಸಿದೆ.
ಗೋದ್ರೆಜ್ ಇಂಡಸ್ಟ್ರೀಸ್ ಸಮೂಹಕ್ಕೆ ನಾದಿರ್ ಗೋದ್ರೆಜ್ ಅಧ್ಯಕ್ಷರಾಗಲಿದ್ದು, ಆದಿ ಗೋದ್ರೆಜ್ ಪುತ್ರ ಪಿರೋಜ್ ಶಾ ಗೋದ್ರೆಜ್ (42ವರ್ಷ) ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.