Advertisement

300 ಅಡಿ ಪ್ರಪಾತಕ್ಕೆ ಉರುಳಿ ಬಿದ್ದ ಮಿನಿ ಬಸ್‌: ಐವರ ಸಾವು

12:23 PM Sep 14, 2018 | Team Udayavani |

ಕಿಶ್ತ್ ವಾರ್‌, ಜಮ್ಮು ಕಾಶ್ಮೀರ : ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಮಿನಿ ಬಸ್ಸೊಂದು ಸ್ಕಿಡ್‌ ಆಗಿ ಪ್ರಪಾತಕ್ಕೆ ಉರುಳಿ ಬಿದ್ದ  ದುರಂತದಲ್ಲಿ ಕನಿಷ್ಠ ಐವರು ಮೃತಪಟ್ಟ ಘಟನೆ ಇಂದು ಶುಕ್ರವಾರ ಇಲ್ಲಿ ಸಂಭವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಬಸ್ಸು ಇಂದು ಬೆಳಗ್ಗೆ ಕಿಶ್ತ್ ವಾರ್‌ನಿಂದ ಕೇಶವಾನ್‌ಗೆ ಹೋಗುತ್ತಿದ್ದಾಗ ಥಕರಾಯ್‌ ಎಂಬಲ್ಲಿಗೆ ಸಮೀಪದ ದಂಡಾರಣ್‌ ಎಂಮಲ್ಲಿ ಚೀನಾಬ್‌ ನದೀ ಪಾತ್ರೆ ಸಮೀಪ, ಸುಮಾರು 300 ಅಡಿ ಆಳದ ಪ್ರಪಾತಕ್ಕೆ ಕುಸಿದು ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಬಸ್ಸಿನಲ್ಲಿ ಸುಮಾರು 30 ಪ್ರಯಾಣಿಕರು ಇದ್ದರೆಂದು ಹೇಳಲಾಗಿದೆ. ಕಿಶ್ತ್ ವಾರ್‌ ಎಸ್‌ಎಸ್‌ಪಿ ರಾಜೀಂದರ್‌ ಗುಪ್ತಾ ಅವರು ರಕ್ಷಣಾ ಕಾರ್ಯದ ಉಸ್ತುವಾರಿ ನಡೆಸುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಕಿಷ್‌¤ ವಾರ್‌ ಜಿಲ್ಲೆಯಲ್ಲಿ ನಡೆದಿರುವ ಮೂರನೇ ದೊಡ್ಡ ಅವಘಾತ ಇದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next