Advertisement

130 ಪಟ್ಟಣಗಳಿಗೆ 4ಜಿ ಸೇವೆ ಶೀಘ್ರ

06:00 AM Jun 02, 2018 | Team Udayavani |

ಮೈಸೂರು: ಭಾರತೀಯ ದೂರ ಸಂಪರ್ಕ ಮಂತ್ರಾಲಯದಿಂದ ಒಪ್ಪಿಗೆ ಸಿಕ್ಕಲ್ಲಿ ಶೀಘ್ರದಲ್ಲೇ ಕರ್ನಾಟಕದ 130 ನಗರ/ಪಟ್ಟಣಗಳಿಗೆ ಬಿಎಸ್‌ಎನ್‌ಎಲ್‌ನಿಂದ 4ಜಿ ಸೇವೆ ಒದಗಿಸಲಾಗುವುದು ಎಂದು ಕರ್ನಾಟಕ ಟೆಲಿಕಾಂ ವೃತ್ತದ ಮುಖ್ಯ ಮಹಾಪ್ರಬಂಧಕ ಆರ್‌. ಮಣಿ ತಿಳಿಸಿದರು. 

Advertisement

ಕರ್ನಾಟಕದಲ್ಲಿ ಬಿಎಸ್‌ಎನ್‌ಎಲ್‌ ಸೇವೆಯನ್ನು 4ಜಿಗೆ ಉನ್ನತೀಕ ರಿಸುವ ಸಂಬಂಧದ ಕಡತ ದೂರಸಂಪರ್ಕ ಸಚಿವಾಲಯದ ಮುಂದಿದೆ. ಸಚಿವರಿಂದ ಒಪ್ಪಿಗೆ ಸಿಕ್ಕ ಕೂಡಲೇ ರಾಜ್ಯಕ್ಕೆ ಸ್ಪೆಕ್ಟ್ರಂಗಳು ಬರಲಿದ್ದು, ರಾಜ್ಯದ 130 ಪ್ರಮುಖ ನಗರಗಳಿಗೆ 4ಜಿ ಸೇವೆ ನೀಡಬಹುದಾಗಿದೆ. ಕಳೆದ ಮಾರ್ಚ್‌ನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 4ಜಿ ಸೇವೆ ಆರಂಭಿಸಲಾಗಿದೆ. ರಾಜ್ಯಾದ್ಯಂತ 54 ಸಾವಿರ ಕಿ.ಮೀ. ಆಫ್ಟಿಕಲ್‌ ಫೈಬರ್‌ ಕೇಬಲ್‌ ನೆಟ್‌ವರ್ಕ್‌ ಅಳವಡಿಸಲಾಗಿದ್ದು, ಈ ವರ್ಷ ಹೆಚ್ಚುವರಿಯಾಗಿ ಇನ್ನೂ 4 ಸಾವಿರ ಕಿ.ಮೀ. ಒಎಫ್ಸಿ ಅಳವಡಿಸುವ ಗುರಿ ಇದೆ ಎಂದು ಹೇಳಿದರು. ಬಿಎಸ್‌ಎನ್‌ಎಲ್‌ನ ಇತರ ವೃತ್ತಗಳಿಗೆ ಹೋಲಿಸಿದರೆ ಕರ್ನಾಟಕ ವೃತ್ತ 2017-18ನೇ ಸಾಲಿನಲ್ಲಿ 2 ಸಾವಿರ ಕೋಟಿ ರೂ. ವಹಿವಾಟು ನಡೆಸಿ, 35 ಕೋ. ರೂ.ಲಾಭ ಗಳಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next