Advertisement
ಇದು ಪಾಲಿಕೆ ಸದಸ್ಯರು ನಡೆಸಿರುವ 4ಜಿ ಹಗರಣ ಎಂದು ಬೆಂಗಳೂರು ನವ ನಿರ್ಮಾಣ ಪಕ್ಷ ಅಂಕಿ- ಅಂಶ ಮತ್ತು ದಾಖಲೆಯ ಸಹಿತ ಆರೋಪ ಮಾಡಿದೆ. ಈ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನವ ನಿರ್ಮಾಣ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ಮಾತನಾಡಿ, 2015ರಿಂದ 2020ರ ಅವಧಿಯಲ್ಲಿ 10 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಕೆಆರ್‌ಐಡಿಎಲ್‌ಗೆ ನೀಡಲಾಗಿದೆ. ಈ ರೀತಿ ಒಂದೇ ಏಜೆನ್ಸಿಗೆ ಸಾವಿರಾರುಕೋಟಿ ರೂ. ಮೊತ್ತದ ಕಾಮಗಾರಿ ನೀಡುವ ಮೂಲಕ ಬಹುದೊಡ್ಡ ಹಗರಣ ಮಾಡಲಾಗಿದೆ. ಇದನ್ನು ಪಾಲಿಕೆಯ 4ಜಿ ಹಗರಣ ಎಂದೇ ವ್ಯಾಖ್ಯಾನಿಸಬಹುದಾಗಿದೆ. ಪಾಲಿಕೆ ವ್ಯಾಪ್ತಿಯ 198 ವಾರ್ಡ್‌ಗಳಲ್ಲೂ ಕೆಆರ್ ಐಡಿಎಲ್‌ಗೆಕಾಮಗಾರಿ ನೀಡಲಾಗಿದೆ. ಕಳೆದ ಐದು ವರ್ಷಗಳಲ್ಲಿ 21,653 ಕೋಟಿ ರೂ. ಮೌಲ್ಯದ 63,629 ಕಾಮಗಾರಿಗಳನ್ನು ಕೆಆರ್ ಐಡಿಎಲ್‌ಗೆ ನೀಡಲಾಗಿದ್ದು, ಇದರಲ್ಲಿ 10,018 ಕೋಟಿ ರೂ. ಮೌಲ್ಯದ 28,314 ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಇನ್ನುಕೆಲವುಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಪೈಕಿ, ಸುಮಾರು4721ಕೋಟಿ ರೂ. ಮೌಲ್ಯದ ಶೇ.50 ಕಾಮಗಾರಿಗಳನ್ನು ಒಂದೇ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ಉದ್ದೇಶಪೂರ್ವಕ ವಾಗಿ ಅವ್ಯವಹಾರ ನಡೆಸಲು ಒಂದೇ ಏಜೆನ್ಸಿಗೆ ನೀಡಲಾಗಿದೆ ಎಂದು ಆರೋಪಿಸಿದರು.
Related Articles
Advertisement