Advertisement

2022-23 ನೇ ಸಾಲಿನ ಆರಾಧನಾ ಕಾರ್ಯಕ್ರಮಕ್ಕಾಗಿ 49.74 ಕೋಟಿ ರೂಪಾಯಿಗಳ ಅನುದಾನ

06:24 PM Aug 13, 2022 | Team Udayavani |

ಬೆಂಗಳೂರು:  ಪರಿಶಿಷ್ಟ ಜಾತಿ, ಪಂಗಡ, ಲಂಬಾಣಿ ತಾಂಡಾ, ವಡ್ಡರ ಕೇರಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳು ವಾಸವಿರುವ ಸ್ಥಳಗಳಲ್ಲಿನ ದೇವಾಲಯ, ಪೂಜಾ ಮಂದಿರ, ಹಾಗೂ ಪ್ರಾರ್ಥನಾ ಮಂದಿರಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ನವ ನಿರ್ಮಾಣಗಳ ಯೋಜನೆಗೆ ಸಂಬಂಧಿಸಿದ ಆರಾಧನಾ ಯೋಜನೆಗೆ ಮುಜರಾಯಿ ಇಲಾಖೆಯಿಂದ ಪ್ರಸ್ತುತ 2022-23 ನೇ ಸಾಲಿನಲ್ಲಿ 49.74 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

Advertisement

ಈ ಬಗ್ಗೆ ಮಾಧ್ಯಮ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು, 19.09.2011 ರ ಸರಕಾರದ ಆದೇಶದಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಮಾರ್ಗಸೂಚಿಗಳ ಅನ್ವಯ2022-23 ನೇ ಸಾಲಿನ ಆರಾಧನಾ ಕಾರ್ಯಕ್ರಮಕ್ಕಾಗಿ ವಿಧಾನಸಭಾ ಕ್ಷೇತ್ರವಾರು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನ ಸಂಖ್ಯೆ ಆಧಾರದಲ್ಲಿ ಎಸ್‌.ಸಿ.ಪಿ ಯಡಿಯಲ್ಲಿ ರೂ. 19.38 ಕೋಟಿ ಹಾಗೂ ಟಿ.ಎಸ್‌.ಪಿ ಯೋಜನೆಯಡಿ ರೂ. 30.36 ಕೋಟಿ ಒಟ್ಟಾರೆ 49.74 ಕೋಟಿಗಳ ಅನುದಾನವನ್ನು ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯ ಆಧಾರದಲ್ಲಿ 31 ಜಿಲ್ಲೆಗಳಿಗೂ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಸಾಮರಸ್ಯ ಬೆಳೆಯಬೇಕು: ಸಿಎಂ ಬೊಮ್ಮಾಯಿ

ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರ ರಾಜ್ಯದ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ ಹೆಚ್ಚಿನ ಮಾನ್ಯತೆಯನ್ನು ನೀಡುತ್ತಿದೆ. ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಅನುದಾನವನ್ನು ಬಿಡುಗಡೆಗೊಳಿಸಿದ್ದು, ಎಸ್.ಸಿ.ಪಿ ಹಾಗೂ ಟಿ.ಎಸ್‌.ಪಿ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ಜನರು ವಾಸವಿರುವ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗಾಗಿ ಆರಾಧನಾ ಯೋಜನೆಯ ಅಡಿಯಲ್ಲಿ 49.74 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಈ ಅನುದಾನದ ಸದುಪಯೋಗದ ಮೂಲಕ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ದಿಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next