Advertisement

462 ಕೋ. ರೂ. ಬಾಕಿ ತೀರಿಸಿದ ಅಂಬಾನಿ

12:30 AM Mar 19, 2019 | |

ಹೊಸದಿಲ್ಲಿ: ಉದ್ಯಮಿ ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಸಂಸ್ಥೆ ಎರಿಕ್‌ಸನ್‌ಗೆ 462 ಕೋಟಿ ರೂ.ಗಳನ್ನು ಸೋಮವಾರ ಪಾವತಿ ಮಾಡಿದೆ. ಸುಪ್ರೀಂ ಕೋರ್ಟ್‌ ನೀಡಿದ್ದ ಗಡುವಿಗಿಂತ 1 ದಿನ ಮೊದಲೇ ಈ ಬೆಳವಣಿಗೆ ನಡೆದಿದೆ. ಈ ಮೂಲಕ ಅಂಬಾನಿ ಜೈಲು ಶಿಕ್ಷೆಯನ್ನೂ ತಪ್ಪಿಸಿಕೊಂಡಿದ್ದಾರೆ. ಈ ಬಗ್ಗೆ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್‌ ಅನಿಲ್‌ ಅಂಬಾನಿ ನೇತೃತ್ವದ ಕಂಪೆನಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಜತೆಗೆ ಮಾ.19ರ ಒಳಗಾಗಿ ಸ್ವೀಡನ್‌ ಮೂಲದ ಸಂಸ್ಥೆಗೆ ಮೊತ್ತ ಪಾವತಿ ಮಾಡಬೇಕು ಇಲ್ಲದಿದ್ದರೆ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶ ನೀಡಿತ್ತು. 2017ರಲ್ಲಿ ಎರಿಕ್‌ಸನ್‌ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ತನಗೆ ಬಾಕಿ 571 ಕೋಟಿ ರೂ. ನೀಡಿಲ್ಲ ಎಂದು ತಗಾದೆ ತೆಗೆದು ಕಾನೂನು ಹೋರಾಟ ಆರಂಭ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next