Advertisement

ಶನಿವಾರ 4,537 ಮಂದಿಗೆ ಸೋಂಕು: 59ಸಾವಿರಕ್ಕೇರಿದ ಒಟ್ಟು ಪ್ರಕರಣ; ಸಾವಿನ ಸಂಖ್ಯೆಯಲ್ಲೂ ಏರಿಕೆ

02:39 AM Jul 19, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ.

Advertisement

ಶನಿವಾರ 4,537 ಮಂದಿಗೆ ದೃಢಪಟ್ಟಿದೆ. 93 ಮಂದಿ ಸಾವನ್ನಪ್ಪಿದ್ದಾರೆ. 1,018 ಮಂದಿ ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಒಂದೇ ದಿನ 2,125 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ರಾಜಧಾನಿಯೊಂದರಲ್ಲೇ 49 ಮಂದಿ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಈವರೆಗೆ ಒಟ್ಟು 59,652 ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು, ಇದುವರೆಗೆ 21,775 ಮಂದಿ ಗುಣಮುಖರಾಗಿದ್ದಾರೆ.

36,631 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 1,240 ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ.

Advertisement

ರ್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಮತ್ತು ಇತರ ಪರೀಕ್ಷೆ ಸೇರಿಸಿ ಶುಕ್ರವಾರ ಸಂಜೆಯಿಂದೀಚೆಗೆ 34,819 ಮಂದಿಯನ್ನು ಪರೀಕ್ಷಿಸಲಾಗಿದೆ.

ಶನಿವಾರ ಧಾರವಾಡ, ವಿಜಯಪುರ, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಬಳ್ಳಾಪುರ ಮತ್ತು ಮೈಸೂರು ಜಿಲ್ಲೆಗಳಲ್ಲಿ ತಲಾ ನೂರಕ್ಕೂ ಅಧಿಕ ಮಂದಿಗೆ ಸೋಂಕು ಪತ್ತೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಈವರೆಗೆ 29,621 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 6,540 ಮಂದಿ ಗುಣಮುಖರಾಗಿದ್ದಾರೆ.

ಜಗತ್ತು: 6 ಲಕ್ಷ ದಾಟಿದ ಮೃತರ ಸಂಖ್ಯೆ
ಜಾಗತಿಕ ಮಟ್ಟದಲ್ಲಿ ಸಾವಿನ ಸಂಖ್ಯೆ ಶನಿವಾರ 6 ಲಕ್ಷದ ಗಡಿ ದಾಟಿದ್ದು, ಒಟ್ಟು ಸೋಂಕು ಪೀಡಿತರ ಸಂಖ್ಯೆ 1 ಕೋಟಿಯ 42 ಲಕ್ಷಕ್ಕೆ ಮುಟ್ಟಿದೆ.

ದೇಶದಲ್ಲಿ ಪ್ರಕರಣಗಳ ಸಂಖ್ಯೆ 10.55 ಲಕ್ಷ ದಾಟಿದೆ. ಇದೇ ವೇಳೆ ಗುಣಮುಖ ಪ್ರಮಾಣವೂ ಏರುಗತಿಯಲ್ಲಿದ್ದು, 6 ಲಕ್ಷದ 50 ಸಾವಿರಕ್ಕಿಂತಲೂ ಹೆಚ್ಚು ಮಂದಿ ಇದುವರೆಗೆ ಕೋವಿಡ್ 19 ವಿರುದ್ಧ ಗೆಲುವು ಸಾಧಿಸಿದ್ದಾರೆ.

ನಾಳೆ ಬೆಳಗ್ಗಿನ ತನಕ ಲಾಕ್‌ಡೌನ್‌

ರಾಜ್ಯಾದ್ಯಂತ ಶನಿವಾರ ರಾತ್ರಿಯಿಂದ ಕರ್ಫ್ಯೂ ಚಾಲ್ತಿಯಲ್ಲಿದ್ದು, ಸೋಮವಾರ ಬೆಳಗಿನ ತನಕ  ಸಂಪೂರ್ಣ ಲಾಕ್‌ಡೌನ್‌ ಇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಈಗಾಗಲೇ ಮೂರು ದಿನಗಳಿಂದ ಜಾರಿಯಲ್ಲಿದೆ.

ಜಾಗತಿಕ ಸೋಂಕು ಪೀಡಿತರ ಸಂಖ್ಯೆ : 1,42,76,589

ಒಟ್ಟು ಸಾವು (ಜಗತ್ತು): 6,01,174

ಕರ್ನಾಟಕ (ಸೋಂಕು): 59,652

ಭಾರತ (ಸೋಂಕು): 10,55,932

ಸಾವು (ಭಾರತ): 26,508

ಚೇತರಿಕೆ: 6,54,612

Advertisement

Udayavani is now on Telegram. Click here to join our channel and stay updated with the latest news.

Next