Advertisement

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

06:10 PM Sep 16, 2024 | Team Udayavani |

ಹುಲುನ್‌ಬಿಯುರ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿರುವ ಭಾರತ ಹಾಕಿ ತಂಡವು ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ (Asian Champions Trophy) ಫೈನಲ್‌ ಪ್ರವೇಶಿಸಿದೆ. ಕೊರಿಯಾ ವಿರುದ್ದದ ಸೆಮಿ ಫೈನಲ್‌ ಪಂದ್ಯದಲ್ಲಿ ಭಾರತವು 4-1 ಅಂತರದಿಂದ ಗೆದ್ದು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ.

Advertisement

ಕೂಟದ ಐದೂ ಲೀಗ್‌ ಪಂದ್ಯಗಳನ್ನು ಗೆದ್ದಿರುವ ಹರ್ಮನ್‌ಪ್ರೀತ್‌ ಸಿಂಗ್‌ ಪಡೆ ಉಪಾಂತ್ಯದ ನೆಚ್ಚಿನ ತಂಡವಾಗಿತ್ತು. ಅದರಂತೆ ಆಡಿದ ತಂಡವು 4-1 ಅಂತರದಿಂದ ಗೆದ್ದು ಬೀಗಿತು.

ಪಂದ್ಯ ಆರಂಭವಾದ 13ನೇ ನಿಮಿಷದಲ್ಲಿ ಉತ್ತಮ್‌ ಸಿಂಗ್‌ ಅವರು ಗೋಲು ಬಾರಿಸಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ನಾಯಕ ಹರ್ಮನ್‌ ಪ್ರೀತ್‌ ಸಿಂಗ್‌ ಅವರು 19ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ 2-0 ಮುನ್ನಡೆ ಒದಗಿಸಿದರು. 32ನೇ ನಿಮಿಷದಲ್ಲಿ ಜರ್ಮನ್‌ ಪ್ರೀತ್‌ ಸಿಂಗ್‌ ಅವರು ಗೋಲು ಬಾರಿಸಿದರು.

ಆದರೆ 33 ನೇ ನಿಮಿಷದಲ್ಲಿ ಕೊರಿಯಾದ ಯಾಂಗ್‌ ಜಿಹುನ್‌ ಅವರು ಗೋಲು ಬಾರಿಸಿದರು. 3-1ರಲ್ಲಿ ಮುನ್ನಡೆಯಲ್ಲಿದ್ದ ಭಾರತ ತಂಡಕ್ಕೆ ಕೊನೆಯಲ್ಲಿ ನಾಯಕ ಹರ್ಮನ್‌ ಮತ್ತೆ ಗೋಲು ತಂದುಕೊಟ್ಟರು. ಈ ಮೂಲಕ ಭಾರತ 4-1 ಅಂತರದಿಂದ ಗೆಲುವು ಸಾಧಿಸಿತು.

Advertisement

ಪಾಕಿಸ್ಥಾನ-ಚೀನ ನಡುವೆ ನಡೆದ ಇನ್ನೊಂದು ಸೆಮಿಫೈನಲ್‌ ನಲ್ಲಿ ಚೀನಾ ಗೆಲುವು ಸಾಧಿಸಿತು. ಫೈನಲ್‌ ಪಂದ್ಯವು ಮಂಗಳವಾರ (ಸೆ.17) ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next