Advertisement

ಭಾರತದಲ್ಲಿ ಕ್ರಿಮಿನಲ್ಸ್ ಗಳು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಕಡಿವಾಣ ಹಾಕುವುದು ಬೇಡವೇ?

12:35 PM Sep 10, 2024 | Team Udayavani |

ಭಾರತೀಯ ಸಂವಿಧಾನ ಪಾಠ ಮಾಡುವ ಸಂದರ್ಭದಲ್ಲಿ ಜನಪ್ರತಿನಿಧಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಿರುವ ಅಂಶಗಳೇನು ಅನ್ನುವುದನ್ನು ವಿವರಿಸುವ ಸಂದರ್ಭದಲ್ಲಿ ಒಂದು ಪ್ರಮುಖವಾದ ಆಹ೯ತಾ ಗುಣವೆಂದರೆ He/She should not be a criminal. ಅಂದರೆ ಯಾವುದೇ ವ್ಯಕ್ತಿ ಅಪರಾಧಿಯಾಗಿರ ಬಾರದು, ಕ್ರಿಮಿನಲ್ ಅನ್ನುವುದಕ್ಕೂ ವಿಸ್ತಾರವಾದ ಅರ್ಥ ವಿದೆ. ಈ ಉತ್ತರ ಕೊಟ್ಟ ತಕ್ಷಣವೇ ನಮ್ಮ ವಿದ್ಯಾರ್ಥಿಗಳು ಸಾಮಾನ್ಯವಾಗಿ ಕೇಳುವ ಪ್ರಶ್ನೆ ಅಂದರೆ, ಸಾರ್ ಅದೆಷ್ಟೊ ಅಪರಾಧಿಗಳು ಅಂದರೆ ಜೈಲಿನಲ್ಲಿ ಇರುವವರನ್ನು ಸೇರಿಸಿ ಅವರೆಲ್ಲರೂ ಇಂದು ಲೇೂಕ ಸಭೆ, ರಾಜ್ಯ ಸಭೆ ವಿಧಾನ ಸಭೆಗಳಲ್ಲಿ ಸಂಭಾವಿತರಾಗಿ ಆಸೀನರಾಗಿ ಪ್ರತಿಜ್ಞಾ ವಿಧಿ ಬೇೂಧಿಸಿಕೊಂಡಿರುತ್ತಾರೆ..ಇದು ಹೇಗೆ ಸಾಧ್ಯ ?

Advertisement

ಇಂತಹ ಪ್ರಶ್ನೆ ಗಳಿಗೆ ಒಂದೇ ವಾಕ್ಯದಲ್ಲಿ ಉತ್ತರ ನೀಡುವುದು ತುಂಬಾ ಕಷ್ಟ. ಮಾತ್ರವಲ್ಲ ಪರಿಸ್ಥಿತಿ ನೇೂಡಿದಾಗ ಸಂವಿಧಾನದ ಹೊತ್ತಿಗೆಯನ್ನು ಕೈಯಲ್ಲಿ ಹಿಡಿದು ಆತ್ಮ ವಂಚನೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಉತ್ತರ ನೀಡ ಬೇಕಾದ ಪರಿಸ್ಥಿತಿ ಅಧ್ಯಾಪಕರದ್ದು.

ಸಂವಿಧಾನದಲ್ಲಿ ಏನು ಹೇಳಿದೆ “ಅವನು ಅಪರಾಧಿಯಾಗಿರಬಾರದು.ಅಪರಾಧಿ ಅಂತಹ ಒಂದು ಕೇೂರ್ಟ್ ಹೇಳಿದರೆ ತಕ್ಷಣವೇ ಅಪರಾಧಿ ಅನ್ನಿಸಿಕೊಂಡವ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ.ಅಂತೂ ನಮ್ಮಲ್ಲಿ ಆತ ಅಪರಾಧಿಯಂದು ಅಂತಿವಾಗಿ ಹೇಳ ಬೇಕಾದರೆ ಐದಾರು ಹಂತಗಳಿವೆ.‌

ಜಿಲ್ಲಾ ನ್ಯಾಯಾಂಗ, ರಾಜ್ಯ ಹೈಕೋರ್ಟ್ ರಾಷ್ಟ್ರದ ಸುಪ್ರೀಂ ಕೇೂರ್ಟ್ ಅದರೊಳಗೆ ಒಂದಿಷ್ಟು ಬೆಂಚುಗಳು ಈ ಎಲ್ಲಾ ಹಂತಗಳನ್ನು ಧಾಟಿ ಬರಬೇಕು ಅಲ್ಲಿಯ ತನಕ ಆ ವ್ಯಕ್ತಿ ಮೇಲೆ ಅಪವಾದವಿದೆ ಅಂತಲೇ ಅಥೈ೯ಸ ಬೇಕು ಬಿಟ್ಟರೆ ಅಪರಾಧಿ ಅನ್ನುವ ಹಾಗಿಲ್ಲ..ಹಾಗಾಗಿ ಈ ಎಲ್ಲಾ ಹಂತಗಳನ್ನು ದಾಟಿ ಬರುವಾಗ ಆತನ ಜನಪ್ರತಿನಿಧಿಯ ಕಾಲಾವಧಿಯೂ ಮುಗಿದಿರುತ್ತದೆ..ಮಾತ್ರವಲ್ಲ ಕೆಲವರಂತೂ ಸ್ವರ್ಗಸ್ಥರಾಗಿ ರಾಜಕೀಯ ಮುತ್ಸದ್ದಿ ಸ್ಥಾನವನ್ನು ಅಲಂಕರಿಸಿ ಬಿಟ್ಟಿರುತ್ತಾರೆ.

Advertisement

ಪ್ರಸ್ತುತ ಸಂದರ್ಭದಲ್ಲಿ ಕೂಡಾ ಹತ್ತಾರು ಉದಾಹರಣೆಗಳನ್ನು ನೇೂಡಿದ್ದೇವೆ.ಜೈಲಿನಲ್ಲಿ ಇದ್ದು ಚುನಾವಣೆಗೆ ಸ್ಪರ್ಧಿಸಿ ಗೆದ್ದು ಜೈಲಿನಿಂದ ನೇರವಾಗಿ ಲೇೂಕ ಸಭಾ ಪ್ರಜಾದೇಗುಲಕ್ಕೆ ಬಂದು ಸಭಾಪತಿಗಳ ಎದುರು ನಿಂತು ಪ್ರತಿಜ್ಞೆ ಸ್ವೀಕರಿಸಿ ಮತ್ತೆ ಜೈಲಿಗೆ ಹೇೂಗಿ ಅಲ್ಲಿ ಮಧ್ಯಾಹ್ನದ ಊಟ ಮಾಡಿದ ದು:ಸ್ಥಿತಿಯನ್ನು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೇೂಡಿದ್ದೇವೆ. ಒಂದಂತೂ ನಿಜ ನಮ್ಮಲ್ಲಿ ನಾವೆಷ್ಟೇ ಕಟುಕ ಭ್ರಷ್ಟಾ ಅನಾಚಾರಿಯಾಗಿದ್ದರೂ ಕೂಡಾ ಅದನ್ನು ತೊಳೆದು ಪರಿಶುದ್ಧರಾಗಿ ಸಮಾಜದಲ್ಲಿ ಗೌರವ ಸ್ಥಾನ ಪಡೆಯ ಬೇಕಾದರೆ ಇರುವ ಒಂದೇ ಒಂದು ಸುಲಭದಾರಿ ಅಂದರೆ ರಾಜಕೀಯಕ್ಕೆ ಬರುವುದು.

ಇಲ್ಲಿ ನೀವು ಒಂದಿಷ್ಟು ಧನಿಕರಾಗಿ ಒಂದಿಷ್ಟು ಪ್ರಖ್ಯಾತಿಯೊ ಕುಖ್ಯಾತಿಯಾಗಿದ್ದರೂ ಕೂಡ ಜನ ನಿಮ್ಮನ್ನು ಮೆಚ್ಚಿದ್ದಾರೆ ಅಂದರೆ ನಮ್ಮ ಎಲ್ಲಾ ಪಕ್ಷಗಳು ನಿಮಗೆ ಚುನಾವಣೆಯಲ್ಲಿ ಸ್ಪಧಿ೯ಸಲು ಅವಕಾಶ ನೀಡುವುದಂತೂ ಗ್ಯಾರಂಟಿ .ಅವರಿಗೆ ಸೀಟು ಮುಖ್ಯ ಗೆಲುವು ಮುಖ್ಯ ಅಧಿಕಾರ ಮುಖ್ಯ ..ಹೊರತು ನೈತಿಕತೆಯಲ್ಲ..ಈ ತಲ್ಲಣ ಸ್ಥಿತಿಯ ರಾಜಕಾರಣದಲ್ಲಿ ಕ್ರಿಮಿನಲ್ ಗಳು ರಾರಾಜಿಸದೆ ಇರುತ್ತಾರಾ?

ಇತ್ತೀಚೆಗೆ ಭಾರತದ ರಾಷ್ಟ್ರಪತಿ ಗಳು ಹೇಳಿದ ಮಾತು ಇದೇನೆ..ನ್ಯಾಯ ನೀಡುವ ಪ್ರಕ್ರಿಯೆ ತ್ವರಿತವಾಗಿ ಮುಗಿಸಿ ಬಿಡಿ.ಇಲ್ವಾದರೆ “justice delayed means justice denied” ಅನ್ನುವ ಅಥ೯ದಲ್ಲಿಯೇ ಹೇಳಿದ್ದಾರೆ. ಮಾಜಿ ಲೇೂಕಾಯುಕ್ತ ಜಸ್ಟೀಸ್ ಸಂತೇೂಷ ಹೆಗ್ಡೆ ಯವರು ಕೂಡಾ ಸದಾ ಇದನ್ನೇ ಹೇಳುತ್ತಿದ್ದರು.” ನಮ್ಮಲ್ಲಿ ನ್ಯಾಯ ವಿಚಾರಣ ಹಂತಗಳು ಐದು ಹಂತಗಳು ಇದು ಜಾಸ್ತಿ ಆಯಿತು. ಅಮೇರಿಕಾದಲ್ಲಿ ಕೇವಲ ಎರಡು ಹಂತಗಳಲ್ಲಿ ವಿಚಾರಣೆಯ ಪ್ರಕಿಯೆ ಮುಗಿದು ಹೇೂಗಿರುತ್ತದೆ. ನ್ಯಾಯ ತ್ವರಿತವಾಗಿ ಪ್ರದಾನವಾಗುತ್ತದೆ.

ಇಂದು ನಾವು ಬರೇ ಏಕ ರಾಷ್ಟ್ರ ಏಕ ಚುನಾವಣೆ ಕುರಿತಾಗಿ ಗಂಭೀರವಾಗಿ ತಲೆಕೆಡಿಸಿಕೊಂಡಿದ್ದೇವೆ ಬಿಟ್ಟರೆ ಜನಪ್ರತಿನಿಧಿಗಳ ಆರ್ಹತೆ ಯೇೂಗ್ಯತೆ ನೈತಿಕತೆಯ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಂಡಿಲ್ಲ..ಯಾಕೆ ಕೇಳಿದರೆ ಅದು ಬೇಡ. ಅದು ಬೇಡ ಯಾಕೆ ಕೇಳಿದರೆ ಕಾನೂನು ಮಾಡುವವರು ನಾವೇ ಅಲ್ವಾ.?ಈ ನಿಟ್ಟಿನಲ್ಲಿ ಜನರು ಹಕ್ಕೇೂತ್ತಾಯ ಮಾಡಲೇ ಬೇಕಾದ ಕಾಲ ಘಟದಲ್ಲಿ ಬಂದು ನಿಂತಿದ್ದೇವೆ.

*ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ .

Advertisement

Udayavani is now on Telegram. Click here to join our channel and stay updated with the latest news.

Next