Advertisement

US Election: ಬಾಹ್ಯಾಕಾಶದಿಂದಲೇ ಮತ ಚಲಾಯಿಸಲಿದ್ದಾರಂತೆ ಸುನೀತಾ ವಿಲಿಯಮ್ಸ್ ಮತ್ತು ಬುಚ್

09:06 AM Sep 14, 2024 | Team Udayavani |

ವಾಷಿಂಗ್ಟನ್: ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶದಿಂದಲೇ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರಂತೆ.

Advertisement

ಶುಕ್ರವಾರ ತಡರಾತ್ರಿ ಬಾಹ್ಯಾಕಾಶದಿಂದಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕುರಿತು ಕೇಳಿದ ಪ್ರಶ್ನೆಗೆ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಈ ಉತ್ತರ ನೀಡಿದ್ದಾರೆ ಎನ್ನಲಾಗಿದೆ, ಸುದ್ದಿಗೋಷ್ಠಿಯಲ್ಲಿ ಅಲ್ಲಿನ ಕಾರ್ಯಾಚರಣೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಜೊತೆಗೆ ಬಾಹ್ಯಾಕಾಶದಿಂದಲೇ ಮೊದಲ ಬಾರಿಗೆ ಮತದಾನ ಮಾಡಲು ತುಂಬಾ ಉತ್ಸುಕನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇದು ಸ್ಟಾರ್‌ಲೈನರ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸಿದ ನಂತರ ವಿಲಿಯಮ್ಸ್ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿರುವುದಾಗಿದೆ.

ಇದು ಪರೀಕ್ಷಾರ್ಥ ಹಾರಾಟ ಎಂದು ತನಗೆ ಮತ್ತು ಬುಚ್‌ಗೆ ತಿಳಿದಿತ್ತು ಮತ್ತು ಇದು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂಬ ಆಲೋಚನೆಯೂ ನಮಗೆ ಇತ್ತು “ನಾವು ಹೆಚ್ಚು ಸಮಯದವರೆಗೆ ಇಲ್ಲಿ ಉಳಿಯಬೇಕಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ” ಮನೆಯವರ ಜೊತೆ ಇರಬೇಕಿತ್ತು ಅದೂ ವಿಶಷವಾಗಿ ನನ್ನ ತಾಯಿಯ ಜೊತೆ ಇರಬೇಕಿತ್ತು ಆದರೆ ಕಾರಣಾಂತರಗಳಿಂದ ಸ್ವಲ್ಪ ತಡವಾಗುತ್ತಿದೆ ಕೆಲವೊಂದು ಯೋಜನೆಗಳನ್ನು ಹಾಕಿದ್ದೆ ಆದರೆ ಅದು ಸದ್ಯಕ್ಕೆ ದೂರವಾದ ಮಾತು ಎಂದು ಸುನೀತಾ ವಿಲಿಯಮ್ಸ್ ಹೇಳಿಕೊಂಡಿದ್ದಾರೆ.

Advertisement

“ನಾವು ಎಲ್ಲಾ ರೀತಿಯ ತೊಂದರೆಗಳನ್ನು ಎದುರಿಸುತ್ತೇವೆ, ಅದು ಎಂಟು ದಿನಗಳು ಆಗಿರಬಹುದು ಅಥವಾ ಎಂಟು ತಿಂಗಳುಗಳು ಎಲ್ಲದಕ್ಕೂ ನಾವು ಸಿದ್ಧರಾಗಿದ್ದೇವೆ ಎಂದು ಬುಚ್ ವಿಲ್ಮೋರ್ ಹೇಳಿದ್ದಾರೆ.

ವಿಲ್ಮೋರ್ ಮತ್ತು ವಿಲಿಯಮ್ಸ್ ಈಗ ಬಾಹ್ಯಾಕಾಶ ನಿಲ್ದಾಣದ ಸಾಮಾನ್ಯ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅಲ್ಲಿನ ನಿರ್ವಹಣೆ ಮತ್ತು ಪ್ರಯೋಗಗಳಲ್ಲಿ ಭಾಗಿಯಾಗಲಿದ್ದಾರೆ. ಇಬ್ಬರೂ ಗಗನಯಾತ್ರಿಗಳು ಫೆಬ್ರವರಿ ಅಂತ್ಯದವರೆಗೆ ISS ನಲ್ಲಿ ಉಳಿಯಬೇಕಾಗಿದೆ ಮತ್ತು ಸ್ಪೇಸ್ ಎಕ್ಸ್ (SpaceX) ಕ್ಯಾಪ್ಸುಲ್ ಮೂಲಕ ಭೂಮಿಗೆ ಹಿಂತಿರುಗುತ್ತಾರೆ. ಪರೀಕ್ಷಾರ್ಥ ಹಾರಾಟದ ಅಂಗವಾಗಿ ಒಂದು ವಾರದ ಅವಧಿಗೆಂದು ಬಾಹ್ಯಾಕಾಶಕ್ಕೆ ತೆರಳಿದ್ದ ಇಬ್ಬರೂ ಈಗ ಎಂಟು ತಿಂಗಳಿಗೂ ಹೆಚ್ಚು ಕಾಲ ಅಲ್ಲಿಯೇ ಇರಬೇಕಾಗಿದೆ. ಕಳೆದ ಜೂನ್ ಆರಂಭದಿಂದ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ: Bengaluru: ಅಕ್ರಮ ಸಂಬಂಧ ಪ್ರಶ್ನಿಸಿದ ಅಮ್ಮನ ಕೊಲೆಗೈದ ಪುತ್ರಿ, ಆಕೆಯ ಪ್ರಿಯಕರ

Advertisement

Udayavani is now on Telegram. Click here to join our channel and stay updated with the latest news.

Next