Advertisement

700 ಅಡಿ ಆಳದ ಪ್ರಪಾತಕ್ಕೆ ಬಿದ್ದ ಬಸ್‌ ; 47 ಮಂದಿ ದುರ್ಮರಣ 

11:35 AM Jul 01, 2018 | |

ಡೆಹರಾಡೂನ್‌: ಬಸ್ಸೊಂದು 700 ಅಡಿ ಆಳದ ಪ್ರಪಾತಕ್ಕೆ ಬಿದ್ದು 47 ಮಂದಿ ದಾರುಣವಾಗಿ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡಿರುವ ಘೋರ ದುರಂತ ಉತ್ತರಾಖಂಡದ ಪೌರಿ ಘರ್‌ವಾಲ್‌ ಎಂಬಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ. 

Advertisement

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಪ್ರಪಾತಕ್ಕೆ ಬಿದ್ದ ಬಸ್‌ 2 ಭಾಗಗಳಾಗಿದ್ದು , ಪುಡಿ ಪುಡಿಯಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ನಜ್ಜುಗುಜ್ಜಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. 

ಸ್ಥಳಕ್ಕೆ ಎಸ್‌ಡಿಆರ್‌ಎಫ್ ರಕ್ಷಣಾ ತಂಡಗಳು, ಪೊಲೀಸರು ದೌಡಾಯಿಸಿದ್ದು , ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶವಗಳನ್ನು ಮೇಲಕ್ಕೆತ್ತುತ್ತಿದ್ದಾರೆ. 

ಅಪಘಾತಕ್ಕೆ ನಿಖರ ಕಾರಣವೇನೆಂದು ಇದುವರೆಗೆ ತಿಳಿದು ಬಂದಿಲ್ಲ. 

ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಎಲ್ಲಾ ಲಕ್ಷಣಗಳಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next