Advertisement

ಕದ್ದು ಮಾರಾಟ ಮಾಡಿದ್ದ  4.32 ಲ.ರೂ. ಚಿನ್ನಾಭರಣ ವಶ

08:55 AM Aug 11, 2017 | Harsha Rao |

ಕಾರ್ಕಳ: ಕಳವು ಮಾಡಿದ್ದ ಚಿನ್ನಾಭರಣಗಳನ್ನು ಆರೋಪಿಗಳಿಂದ ತೆಗೆದುಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿರುವ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು, ವ್ಯಕ್ತಿಯಿಂದ 4.32 ಲ.ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

Advertisement

ಹುಬ್ಬಳ್ಳಿಯ ಗಾಂಧಿನಗರದ ನಿವಾಸಿ ಮಿಥುನ್‌ ವೆಂಕಟೇಶ್‌ ರಾಯ್ಕರ್‌ ಬಂಧಿತ ವ್ಯಕ್ತಿ. ಆರೋಪಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಹಿಂದಿನ ಎಸ್‌ಪಿ ಕೆ.ಟಿ. ಬಾಲಕೃಷ್ಣ ಅವರ ನಿರ್ದೇಶ, ಡಿವೈಎಸ್‌ಪಿ ಎಸ್‌.ಜೆ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಸಿಪಿಐ ಜಾಯ್‌ ಅಂಥೊನಿ ಮತ್ತು ಅವರ ಅಪರಾಧ ಪತ್ತೆ ದಳದ ಸಿಬಂದಿ, ಡಿಸಿಐಬಿ ಸಿಪಿಐ ಸಂಪತ್‌ ಕುಮಾರ್‌ ಎ., ಅಪರಾಧ ಪತ್ತೆ ದಳದ ಸಿಬಂದಿ ರಾಜೇಶ್‌ ಕುಂಪಲ, ಗಿರೀಶ್‌ ಉಳಿಯ, ಪ್ರಶಾಂತ್‌, ರಾಮ, ಗೋಕುಲ, ಜಿಲ್ಲಾ ಅಪರಾಧ ಪತ್ತೆ ದಳದ ಸಿಬಂದಿ ರವಿ, ಸುರೇಶ್‌, ರಾಮು, ಶಿವಾನಂದ ಮತ್ತು ಬೆರಳು ಮುದ್ರೆ ಘಟಕ ಹಾಗೂ ಸಿಡಿಆರ್‌ ಘಟಕದ ಅಧಿಕಾರಿ/ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next