ಕೈಕಂಬ: ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ 2011ರ ಸರ್ವೆ ಪ್ರಕಾರ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಮೂಲಕ ಸುಮಾರು 52 ಸಾವಿರ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 10 ಸಾವಿರ ಅರ್ಜಿಗಳು ಹಿಂದಕ್ಕೆ ಹೋಗಿವೆ. ಉಳಿದ 42 ಸಾವಿರ ಮಂದಿಗೆ ಮುಂದಿನ ಎರಡು ತಿಂಗಳೊಳಗೆ ಗ್ಯಾಸ್ ಸಿಲಿಂಡರ್ ವಿತರಿಸಲಾಗುವುದು ಎಂದು ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
ಅವರು ಶನಿವಾರ ಗುರುಪುರ ಕೈಕಂಬ ಪ್ರೀಮಿಯರ್ ಸಭಾಭವನದಲ್ಲಿ ನಡೆದ ಪ್ರಧಾನಿ ಮಂತ್ರಿ ಉಜ್ವಲ ಯೋಜನೆಯ ಗಂಜಿಮಠ ಗ್ರಾಮ ಪಂಚಾಯತ್
ವ್ಯಾಪ್ತಿಯ 54 ಮಂದಿ ಫಲಾನುಭವಿಗಳಿಗೆ ಉಚಿತ ಎಲ್‌ಜಿಪಿ ಗ್ಯಾಸ್ ವಿತರಣೆ ಹಾಗೂ ಸುರಕ್ಷ ಕಾರ್ಯಾಗಾರದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿ ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಡವರಿಗಾಗಿ ಜನಧನ್, ಅವಾಜ್ ಹಾಗೂ ಉಜ್ವಲ್ ಈ ಮೂರು ಯೋಜನೆಗಳನ್ನು ತಂದಿದ್ದಾರೆ. ಉಜ್ವಲ್ ಯೋಜನೆಯು ಮಹಿಳೆಯರ ಹಾಗೂ ತಾಯಿಂದಿರ ಸಮಸ್ಯೆಯನ್ನು ಅರಿತು ಹೊಗೆ ಮುಕ್ತ ಗ್ರಾಮ ನಿರ್ಮಾಣಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಂಕಲ್ಪವಾಗಿದೆ ಎಂದರು.
ಈ ಯೋಜನೆಯಡಿಯಲ್ಲಿ ಉಳಿದ ಫಲಾನುಭವಿಗಳಿಗೆ ಉಜ್ವಲ್ ಪ್ಲಸ್‌ನಲ್ಲಿ ಯೋಜನೆಯಡಿಯಲ್ಲಿ ವಿತರಿಸಲಾಗುವುದು. ದೇಶದಲ್ಲಿ 2 ಕೋಟಿ ಜನರು ಸಬ್ಸಿಡಿಯ ಸವಲತ್ತು ಬಿಟ್ಟಿದ್ದಾರೆ. ಇದರಿಂದಾಗಿ 9 ಕೋಟಿ ಜನರಿಗೆ ಗ್ಯಾಸ್ ವಿತರಣೆಯಾಗಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಪ್ರದೇಶದ ಸಮಸ್ಯೆ ಅರಿತು ಜನರಿಗೆ ಹೆಚ್ಚು ಸೌಲಭ್ಯಗಳು ನೀಡಿದ್ದಾರೆ. ಉಚಿತವಾಗಿ ಗ್ಯಾಸ್ ನೀಡುವ ಮೂಲಕ ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಹೊಗೆ ಮುಕ್ತರನ್ನಾಗಿ ಮಾಡಿದ್ದಾರೆ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಎಂದು ಹೇಳಿದರು.
ಪ್ರಗತಿ ಪರ ಕೃಷಿಕ ರಾಜೇಶ್ ನಾೖಕ್ ಉಳಿಪಾಡಿಗುತ್ತು. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಡಾ| ವೈ.ಭರತ್ ಶೆಟ್ಟಿ,ಉಪಾಧ್ಯಕ್ಷ ಶಿವಪ್ಪ ಬಂಗೇರ,ಗುರುಪುರ ಶಕ್ತಿಕೇಂದ್ರದ ಆಧ್ಯಕ್ಷ ದೋಗು ಪೂಜಾರಿ, ತಾಲೂಕ್ ಪಂಚಾಯತ್ ಸದಸ್ಯರಾದ ವಿಶ್ವನಾಥ ಶೆಟ್ಟಿ ,ನಾಗೇಶ್ ಶೆಟ್ಟಿ ,ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷ ಪೂಜಾ ಪೈ,ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಹಿಳಾ ಮೋರ್ಚಾದ ಅಧ್ಯಕ್ಷೆ ಬಬಿತಾ ರವೀಂದ್ರ, ಗಂಜಿಮಠ ಗ್ರಾಮ ಸಮಿತಿಯ ಅಧ್ಯಕ್ಷ ಜಯಾನಂದ ನಾಯ್ಕ ,ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಮೂಡುಶೆಡ್ಡೆ, ಎಪಿಎಂಸಿ ಸದಸ್ಯ ರುಕ್ಮಯ ನಾಯ್ಕ,ನೋಣಯ್ಯ ಕೋಟ್ಯಾನ್,ಮಾಧವ ಕಾಜಿಲ ಗ್ರಾಮ ಪಂಚಾಯತ್ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು. ಶಿವರಾಜ್ ನಿರೂಪಿಸಿದರು.