Advertisement
ಉಗ್ರ ನಿಜ್ಜರ್ ಸಾವಿಗೆ ಭಾರತವೇ ಕಾರಣ ಎಂದು ದೂರಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ನಗೆಪಾಟಲಿಗೆ ಈಡಾಗಿದ್ದರು. ಈ ಆರೋಪದಿಂದ ಕ್ರುದ್ಧ ಗೊಂಡಿದ್ದ ಭಾರತವು ಹೊಸದಿಲ್ಲಿಯ ಕೆನಡಾ ಹೈಕಮಿಶನ್ ಕಚೇರಿಯಲ್ಲಿ ಇರುವ ಹೆಚ್ಚುವರಿ ಸಿಬಂದಿ ಕಡಿತಗೊಳಿಸಬೇಕು ಎಂದು ಎಚ್ಚರಿಕೆ ನೀಡಿತ್ತು. ಶುಕ್ರವಾರ ಹೆಚ್ಚುವರಿ ರಾಜತಾಂತ್ರಿಕ ಸಿಬಂದಿ ಕೆನಡಾಕ್ಕೆ ವಾಪಸಾಗಿದ್ದಾರೆ.
ಇದರ ಜತೆಗೆ ಬೆಂಗಳೂರು, ಚಂಡೀಗಢ, ಮುಂಬಯಿಯಲ್ಲಿ ಇರುವ ದೂತಾವಾಸ ಕಚೇರಿ ಗಳನ್ನು ಮುಚ್ಚಲು ಕೆನಡಾ ಸರಕಾರ ತೀರ್ಮಾನಿಸಿದೆ. ಮುಂದಿನ ದಿನಗಳಲ್ಲಿ ಹೊಸದಿಲ್ಲಿಯಲ್ಲಿ ಮಾತ್ರ ವೀಸಾ ಮತ್ತು ದೂತಾವಾಸ ಸೇವೆ ನೀಡುವುದಾಗಿ ಹೇಳಿಕೊಂಡಿದೆ.