Advertisement
ಗುರುವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ ಅವರ ಪ್ರಶ್ನೆಗೆ ಉತ್ತರಿಸಿ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ 2017ರಲ್ಲಿ 43 ಸಾವಿರ ಕೊಟಿ ರೂ. ಬಂದಿತ್ತು. ಇದು ಅಂದಿನ ರಾಜ್ಯ ಬಜೆಟ್‌ನ ಶೇ. 23ರಷ್ಟಿತ್ತು. ಇದು 2023ನೇ ಸಾಲಿಗೆ ಶೇ.17ಕ್ಕೆ ಕುಸಿದಿದೆ. ಆದರೆ 3.5 ಲಕ್ಷ ಕೋಟಿ ರೂ.ಬಜೆಟ್ ಗಾತ್ರದ ಶೇ.23ರಷ್ಟು ಹಣ ರಾಜ್ಯಕ್ಕೆ ಮರಳಿದ್ದರೆ, ಈ ವರ್ಷ ಅಂದಾಜು 76 ಸಾವಿರ ಕೋಟಿ ರೂ.ಗಳಷ್ಟು ಹಣ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿತ್ತು. ಆದರೆ ಬರೀ 56 ಸಾವಿರ ಕೋಟಿ ರೂ.ಗಳಷ್ಟು ಮಾತ್ರ ಬಂದಿದೆ ಎಂದರು.
ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಕೊರತೆ ವಿಚಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಯಿತು. ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ, ಕೇಂದ್ರ ಸರಕಾರ ರಾಜ್ಯಕ್ಕೆ ಅನುದಾನವನ್ನೇ ಕೊಡುತ್ತಿಲ್ಲ. ಇಡೀ ದೇಶದಲ್ಲೇ ಕರ್ನಾಟಕ ಹೆಚ್ಚು ತೆರಿಗೆ ಕಟ್ಟುವ 2ನೇ ರಾಜ್ಯವಾಗಿದೆ. ಆದರೆ ನಮಗೆ ಮರಳಿ ಸಿಕ್ಕುವ ಅನುದಾನ ಖೋತಾ ಆಗುತ್ತಿದೆ ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಆಡಳಿತ ಪಕ್ಷದ ಸದಸ್ಯರ ಮೇಲೆ ಹರಿಹಾಯ್ದರು. ಕೋಟ ಶ್ರೀನಿವಾಸ ಪೂಜಾರಿ, ರವಿಕುಮಾರ್, ಭಾರತಿ ಶೆಟ್ಟಿ ಆಕ್ಷೇಪವೆತ್ತಿದರು. ಕೊನೆಗೆ ಸಭಾಪತಿಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.