Advertisement
ಪ್ರವಾಹದ ಬಳಿಕ ಈ ಎಲ್ಲೆಲ್ಲಿಯೂ ಮಣ್ಣಿನ ರಾಶಿ, ಕಲ್ಲಿನ ರಾಶಿಗಳೇ ಕಾಣುತ್ತಿವೆ. ಈ ಮಣ್ಣಿನ ರಾಶಿಯಡಿ ಹಲವಾರು ಮನೆಗಳು ಸಿಲುಕಿಕೊಂಡಿವೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣ ಪಡೆಗಳು ಹರಸಾಹಸ ಪಡುತ್ತಿವೆ. ನೀರಿನ ಹರಿವು ಸಹ ಇದ್ದು, ಬೃಹತ್ ಬಂಡೆಗಳು, ಮರಗಳ ಸಹಾಯ ಪಡೆದು ಅವಶೇಷಗಳ ಬಳಿ ರಕ್ಷಣ ಪಡೆಗಳು ತೆರಳುತ್ತಿವೆ.
Related Articles
Advertisement
ಎಲ್ಲೆಲ್ಲೂ ಹೂಳು, ಕಲ್ಲುಗಳ ರಾಶಿ
ಚೂರಲ್‌ವುಲ, ಮುಂಡಕೈ, ಅಟ್ಟಮಲ, ನೂಲ್‌ಪುಳ ಎಂಬ ಗ್ರಾಮಗಳ ವ್ಯಾಪ್ತಿಯಲ್ಲಿ ಈಗ ಎಲ್ಲೆಲ್ಲೂ ಹೂಳು ತುಂಬಿದ ಪ್ರದೇಶಗಳೇ ಕಾಣುತ್ತಿವೆ. ಎಲ್ಲೆಂದರಲ್ಲಿ ಉರುಳಿ ಬಿದ್ದ ವಾಹನಗಳು, ಮರಗಳು ದುರಂತದ ಕತೆಯನ್ನು ಹೇಳುತ್ತವೆ.
ಮಗು ಜತೆ ತಾಯಿ ನಾಪತ್ತೆ
ಮತ್ತೂಬ್ಬ ಮಹಿಳೆ ಭೂಕುಸಿತದ ಭೀಕರತೆಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿರು. “ನನ್ನ ಸಂಬಂಧಿಯೊಬ್ಬರು ರಾತ್ರಿ ಕರೆ ಮಾಡಿ ಮಗುವಿನೊಂದಿಗೆ ಬೇರೆ ಸ್ಥಳಕ್ಕೆ ಹೋಗುತ್ತಿದ್ದೇವೆ” ಎಂದು ಹೇಳಿದರು. ಆದರೆ, ಸ್ವಲ್ಪ ಹೊತ್ತು ಬಳಿಕ ಅವರು ನಾಪತ್ತೆಯಾ ದರು. ಫೋನ್ ಕರೆ ಹೋಗುವುದು ನಿಂತಿತು ಎಂದು ಮಹಿಳೆ ಹೇಳಿದರು. ಆ ಕುಟುಂಬವನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ.
ಕೊಚ್ಚಿ ಹೋದ 200 ಮನೆಗಳು
ಚೂರಲ್‌ವುಲ ಗ್ರಾಮದ ಸುಮಾರು 200 ಮನೆಗಳು ಕೊಚ್ಚಿ ಹೋಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮುಂಡಕೈನಲ್ಲಿ ಈಗಲೂ ಅಲ್ಲಲ್ಲಿ ಸಣ್ಣಪುಟ್ಟ ಭೂಕುಸಿತಗಳು ಸಂಭವಿಸುತ್ತಿವೆ!
ನೂರಾರು ಜನರು ಕಣ್ಮರೆ
ಮುಂಡಕೈನಲ್ಲಿ ಸಂಭವಿಸಿದ ಭೀಕರ ಭೂ ಕುಸಿತಕ್ಕೆ ಪುನಿಚಿರಿಮಟ್ಟಂನಲ್ಲಿ ನೂರಾರು ಜನರು ಕಣ್ಮರೆಯಾಗಿದ್ದಾರೆ. ಈಗಲೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ ಎಂದು ರೆಸಾರ್ಟ್ ಒಂದರ ಉದ್ಯೋಗಿಯೊಬ್ಬರು ಹೇಳಿದ್ದಾರೆ.