Advertisement

Fraud: ಎಂಜಿನಿಯರ್‌ಗೆ 40 ಲಕ್ಷ ರೂ. ಟೋಪಿ

10:39 AM Nov 18, 2023 | Team Udayavani |

ಬೆಂಗಳೂರು: ಬಿಟ್‌ಕಾಯಿನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವುದಾಗಿ ನಂಬಿಸಿ ಎಂಜಿನಿಯರ್‌ಗೆ ಅಪರಿಚಿತರು ಬರೋಬ್ಬರಿ 40 ಲಕ್ಷ ರೂ. ಟೋಪಿ ಹಾಕಿದ್ದಾರೆ.

Advertisement

ರಾಘವೇಂದ್ರ ಬಡಾವಣೆಯ ನಿವಾಸಿ ಭರತ್‌ (38) ವಂಚನೆಗೊಳಗಾದವರು.

ಭರತ್‌ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಭರತ್‌ ಮೊಬೈಲ್‌ ನಂಬರ್‌ ಅನ್ನು ಯಾರೋ ಅಪರಿಚಿತರು ಎನ್‌ಕ್ರಿಪ್ಟ್ ಡಾಟಾ ಟ್ರೇಡಿಂಗ್‌ ಗ್ರೂಪ್‌ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದರು. ಈ ಗ್ರೂಪ್‌ ಕ್ರಿಪ್ಟೋ ಬಿಟ್‌ ಕಾಯಿನ್‌ ಟ್ರೇಡಿಂಗ್‌ ಬಗ್ಗೆ ಮಾಹಿತಿಯನ್ನು ನೀಡುವ ಗ್ರೂಪ್‌ ಆಗಿತ್ತು.

ನಂತರ ಅಪರಿಚಿತರು ಭರತ್‌ ಅವರನ್ನು ಆನ್‌ಲೈನ್‌ ಮೂಲಕ ಸಂಪರ್ಕಿಸಿ ಬಿಟ್‌ ಕಾಯಿನ್‌ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವುದಾಗಿ ನಂಬಿಸಿ ಬಿನಾನ್ಸ್‌ ಅಪ್ಲಿಕೇಷನ್‌ ಮೂಲಕ ಹಣವನ್ನು ಯು.ಎಸ್‌ .ಡಿ.ಟಿಗೆ ಬದಲಾಯಿಸುವಂತೆ ತಿಳಿಸಿದ್ದರು.

ನಂತರ ಈ ಯು. ಎಸ್‌.ಡಿ.ಟಿ ಹಣವನ್ನು ಮೊಬೈಲ್‌ ಅಪ್ಲಿಕೇಶನ್‌ನ ಅಪರಿಚಿತ ವ್ಯಾಲೆಟ್‌ಗೆ ಹಂತ-ಹಂತವಾಗಿ 40 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದರು. ನಂತರ ಲಾಭವನ್ನೂ ನೀಡದೇ, ಅಸಲು ದುಡ್ಡನ್ನೂ ಹಿಂತಿರುಗಿಸದೇ ವಂಚಿಸಿದ್ದಾರೆ. 40 ಲಕ್ಷ ರೂ. ದುಡ್ಡು ಕಳೆದುಕೊಂಡಿರುವ ಭರತ್‌ ಪಶ್ಚಿಮ ವಿಭಾಗದ ಸಿಇಎನ್‌ ಠಾಣೆಗೆ ದೂರು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next