Advertisement

America ತೆಲುಗು ಭಾಷಿಗರು 4 ಪಟ್ಟು ಹೆಚ್ಚಳ

12:01 AM Jun 28, 2024 | Team Udayavani |

ಹೊಸದಿಲ್ಲಿ: ಅಮೆರಿಕದಲ್ಲಿ ತೆಲುಗು ಭಾಷಿಕರ ಸಂಖ್ಯೆ ಕಳೆದ 8 ವರ್ಷಗಳಲ್ಲಿ 4 ಪಟ್ಟು ಹೆಚ್ಚಳವಾಗಿದ್ದು, 2016ರಲ್ಲಿ 3.2 ಲಕ್ಷ ಇದ್ದ ಸಂಖ್ಯೆ 2024ರಲ್ಲಿ 12.3 ಲಕ್ಷಕ್ಕೇರಿಕೆಯಾಗಿದೆ. ಅಮೆರಿಕದಲ್ಲಿ ಹೆಚ್ಚು ಮಾತನಾಡುವ ವಿದೇಶಿ ಭಾಷೆಗಳ ಪೈಕಿ ತೆಲುಗು 11ನೇ ಸ್ಥಾನ ಪಡೆದಿದೆ. ಹಿಂದಿ, ಗುಜರಾತಿ ಬಳಿಕ ಅಮೆರಿಕದಲ್ಲಿ ಅತೀ ಹೆಚ್ಚು ಜನ ಮಾತನಾಡುವ 3ನೇ ಭಾರತೀಯ ಭಾಷೆ ತೆಲುಗು ಆಗಿದೆ. ಯುಎಸ್‌ ಸೆನ್ಸಸ್‌ ಬ್ಯೂರೋ ದತ್ತಾಂಶ ಆಧಾರದಲ್ಲಿ ಯುಎಸ್‌ ಸ್ಟಾಟಿಸ್ಟಿಕಲ್‌ ಅಟ್ಲಾಸ್‌ ವರದಿ ಮಾಡಿದ್ದು, ವಲಸಿಗರು, ವಿದ್ಯಾರ್ಥಿಗಳ ಹೆಚ್ಚಳದಿಂದ ಈ ಪ್ರಗತಿಯಾಗಿದೆ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next